No Result
View All Result
ಬೆಂಗಳೂರಿನಲ್ಲಿ ಆತ್ಮವಿಶ್ವಾಸದಿಂದ ಮೊದಲ ಮನೆ ಖರೀದಿಗೆ ಮುಂದಾಗುತ್ತಿರುವ ಜೆನ್ ಜೀ ತಲೆಮಾರು: ಕೋಟಕ್ ವರದಿ
English Articles

Kotak Mahindra to acquire Deutsche Bank’s retail banking

by kalpa News
July 1, 2026
0

Kalpa Media House  | Bengaluru | Kotak Mahindra Bank Ltd. (“KMBL” / “Kotak”) and Deutsche Bank AG (XETRA: DBKGn.DB /...

Read moreDetails
A.G. Srinivas assumes charge as Additional General Manager of SWR

A.G. Srinivas assumes charge as Additional General Manager of SWR

June 30, 2026
V. Somanna Dedicates ₹22.40 Crore Road Over Bridge at Yelekeri Gate

V. Somanna Dedicates ₹22.40 Crore Road Over Bridge at Yelekeri Gate

June 30, 2026
Mysore - Shivamogga - Talguppa Train

Cancellation, Regulation and Diversion of Trains

June 27, 2026
Surprise Inspection for Enhanced Passenger Safety

Surprise Inspection for Enhanced Passenger Safety

June 27, 2026
  • Advertise With Us
  • Grievances
  • About Us
  • Contact Us
Thursday, July 2, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಶಿವಮೊಗ್ಗದಲ್ಲಿ ಬರೋಬ್ಬರಿ 4 ಲಕ್ಷ ಮಂದಿಗೆ ಆರ್ಯುವೇದಿಕ್ ಕಿಟ್ ಉಚಿತ ವಿತರಣೆ

ಇಡಿಯ ದೇಶದಲ್ಲೇ ಮೊದಲ ಐತಿಹಾಸಿಕ ಉಪಕ್ರಮ ಕೈಗೊಂಡ ಸಚಿವ ಕೆ.ಎಸ್. ಈಶ್ವರಪ್ಪ

kalpa News by kalpa News
July 27, 2020
in ಶಿವಮೊಗ್ಗ
0
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಶಿವಮೊಗ್ಗ: ಪ್ರಿವೆಂನ್ಷನ್ ಈಸ್ ಬೆಟರ್ ದೆನ್ ಕ್ಯೂರ್ ಎಂಬುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೊಸ ಭಾಷ್ಯ ಬರೆಯಲು ಹೊರಟಿದ್ದು, ಇದು ದೇಶದ ಇತಿಹಾಸದಲ್ಲಿ ಹೊಸ ದಾಖಲೆ ಬರೆಯಲಿದೆ.

ಹೌದು…ಕೊರೋನಾ ಸೋಂಕು ದೇಶದಾದ್ಯಂತ ತೀವ್ರ ಆತಂಕದ ಪರಿಸ್ಥಿತಿ ಸೃಷ್ಠಿಸಿರುವಂತೆಯೇ ತಮ್ಮ ಕ್ಷೇತ್ರದ ಜನತೆಯ ಆರೋಗ್ಯವನ್ನು ಕಾಪಾಡುವ ದೃಷ್ಠಿಯಿಂದ ಮಹತ್ವದ ಹೆಜ್ಜೆಯನ್ನಿಟ್ಟಿರುವ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಪಾಲಿಕೆಯ 35 ವಾರ್ಡ್ ವ್ಯಾಪ್ತಿಯಲ್ಲಿನ 4 ಲಕ್ಷ ಜನರಿಗೆ ಆರ್ಯುವೇದಿಕ್ ಉಚಿತ ಕಿಟ್ ವಿತರಣೆ ಮಾಡಲು ಎಲ್ಲ ರೀತಿಯ ಸಿದ್ದತೆ ಮಾಡಿಕೊಂಡಿದ್ದಾರೆ.


ಏನಿದು ಯೋಜನೆ?
ಒಂದೆಡೆ ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇನ್ನೊಂದೆಡೆ ಇದಕ್ಕೆ ಔಷಧಿಯನ್ನು ಕಂಡುಹಿಡಿಯುವಲ್ಲಿ ವಿಜ್ಞಾನಿಗಳು ನಿರತರಾಗಿದ್ದಾರೆ. ಹೀಗಿರುವಾಗ, ವೈರಸ್ ಹರಡುವುದನ್ನು ತಡೆಗಟ್ಟಬೇಕು ಎಂದರೆ ಜನರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಪ್ರಮುಖ ಮಾರ್ಗ. ಹೀಗಾಗಿ, ಇಂತಹ ಒಂದು ಮಹತ್ವದ ಕಾರ್ಯಕ್ಕೆ ಸಚಿವರು ಕೈ ಹಾಕಿದ್ದಾರೆ.

ನಮ್ಮ ಜಿಲ್ಲೆಯಲ್ಲಿ ಮೊದಲು ಕೊರೋನಾ ವೈರಸ್ ಇಲ್ಲದೇ ನೆಮ್ಮದಿಯಾಗಿದ್ದೆವು. ಆದರೆ, ಆನಂತರ ದಿನಗಳಲ್ಲಿ ಕಾಣಿಸಿಕೊಂಡ ಕಾರಣ ಜನರು ಆತಂಕಿತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಜನರ ಆರೋಗ್ಯ ಕಾಪಾಡುವುದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ನಮ್ಮ ಆದ್ಯತೆ ಎನಿಸಿತು. ಶಿವಮೊಗ್ಗ ಮೆಡಿಕಲ್ಸ್‌’ನ ವಿವೇಕಾನಂದ ಹಾಗೂ ಫಾರ್ಮಸಿ ಕಾಲೇಜು ಉಪನ್ಯಾಸಕ ಸತೀಶ್ ಶೆಟ್ಟಿ ಅವರು ಇಂತಹ ಒಂದು ವಿಚಾರವನ್ನು ಪ್ರಸ್ತಾಪಿಸಿದರು. ಇವರ ಸಲಹೆಯನ್ನು ಪರಿಗಣಿಸಿ, ಖ್ಯಾತ ಆರ್ಯುವೇದಿಕ್ ವೈದ್ಯ ಡಾ.ಗಿರಿಧರ್ ಕಜೆ ಅವರ ಸಲಹೆ ಹಾಗೂ ಮಾರ್ಗದರ್ಶನ ಪಡೆದುಕೊಂಡು ಆರ್ಯುವೇದಿಕ್ ಕಿಟ್ ಹಂಚುವ ನಿರ್ಧಾರಕ್ಕೆ ಬರಲಾಯಿತು. ಈ ಬೃಹತ್ ಕಾರ್ಯಕ್ಕೆ ನಮ್ಮೊಂದಿಗೆ ಪಕ್ಷ, ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಸಾರ್ವಜನಿಕರು, ಸಂಘ ಸಂಸ್ಥೆಗಳು ಉದಾರವಾಗಿ ಸಹಕಾರ ನೀಡಿರುವುದು ಸಂತಸದ ವಿಚಾರ.
-ಕೆ.ಎಸ್. ಈಶ್ವರಪ್ಪ,
ಜಿಲ್ಲಾ ಉಸ್ತುವಾರಿ ಸಚಿವರು

ಶಿವಮೊಗ್ಗದ ಕೋವಿಡ್ ಸುರಕ್ಷಾ ಪಡೆ ವತಿಯಿಂದ ಇದನ್ನು ಆಯೋಜಿಸಲಾಗಿದ್ದು, ದೇಶದಲ್ಲೇ ಅತೀ ಮಹತ್ವದ ಮೊದಲ ಕಾರ್ಯಕ್ರಮ ಇದಾಗಿದೆ. ಮೊದಲ ಹಂತವಾಗಿ ನಗರದ ಸುಮಾರು 85,000 ಕುಟುಂಬಗಳ 4 ಲಕ್ಷ ಜನರಿಗೆ ಆಯುರ್ವೇದೀಯ ಔಷಧಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಪ್ರತಿ ಕಿಟ್ ಸುಮಾರು 350 ರೂ. ಬೆಲೆಯುಳ್ಳದ್ದಾಗಿದ್ದು, ಈ ಔಷಧದ ಕಿಟ್‌ನಲ್ಲಿ ಸುಮಾರು 3 ರೀತಿಯ ಔಷಧಗಳಿರುತ್ತವೆ. ಅವುಗಳ ಬಳಕೆಯ ಕುರಿತು ವಿವರವಾದ ಮಾಹಿತಿಯನ್ನು ಕಿಟ್‌ನಲ್ಲಿ ನಮೂದಿಸಲಾಗಿರುತ್ತದೆ. ವಿಶೇಷವಾಗಿ ಈ ಕಿಟ್‌ನಲ್ಲಿ ಎರಡು ರೀತಿಯ ಗುಳಿಗೆಗಳು ಹಾಗೂ ಕಷಾಯ ಪುಡಿ ಇರಲಿದೆ.

ಆರ್ಯುವೇದ ಶಾಸ್ತ್ರ ನಮ್ಮ ಭಾರತೀಯ ಪರಂಪರೆಯ ಹಾಸುಹೊಕ್ಕಾಗಿದೆ. ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಕೋವಿಡ್19 ಸಮಸ್ಯೆ ಆರಂಭವಾದ ನಂತರ ಮತ್ತೆ ಮುಂಚೂಣಿಗೆ ಆರ್ಯುವೇದ ಬಂದಿದ್ದು, ವಿಶ್ವದಾದ್ಯಂತ ಮುಖ್ಯವಾಹಿನಗೆ ಬರುತ್ತಿದೆ. ಇದನ್ನು ಬಳಸಿಕೊಂಡು ಜನರ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಆರೋಗ್ಯ ಕಾಪಾಡುವುದು, ಆಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ನಮ್ಮ ಯೋಜನೆಯ ಉದ್ದೇಶ. ಇಡಿಯ ದೇಶದಲ್ಲೇ ಇದು ಮೊಟ್ಟಮೊದಲ ಪ್ರಯತ್ನವಾಗಿದ್ದು, ಹೊಸ ದಾಖಲೆ ಬರೆಯುವ ಜೊತೆಯಲ್ಲಿ ಮಾದರಿ ಹೆಜ್ಜೆಯಾಗಲಿದೆ.
-ಡಿ.ಎಸ್. ಅರುಣ್,
ಅಧ್ಯಕ್ಷರು, ರಾಜ್ಯ ಆರ್ಯವೈಶ್ಯ ಅಭಿವೃದ್ಧಿ ನಿಗಮ

ಆಧಾರ್ ಕಾರ್ಡ್ ಕಡ್ಡಾಯ
ಇನ್ನು, ಈ ಯೋಜನೆಯ ಅಡಿಯಲ್ಲಿ ಆರ್ಯುವೇದಿಕ್ ಕಿಟ್ ಪಡೆಯಲು ಬಯಸುವವರು ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್ ತೋರಿಸಬೇಕು. ಒಂದು ವೇಳೆ ಯಾರಿಗಾದರೂ ಆಧಾರ್ ಕಾರ್ಡ್ ಇಲ್ಲದೇ ಇದ್ದರೆ ಅಂತಹವರಿಗೆ ಕಾರ್ಡ್ ಮಾಡಿಸಿ, ನಂಬರ್ ಬಂದ ನಂತರ ಕಿಟ್ ನೀಡಲಾಗುತ್ತದೆ.


ಒಬ್ಬರಿಗೆ ಒಂದು ಬಾರಿ ಮಾತ್ರ ಕಿಟ್
ಇನ್ನು, ಕಿಟ್ ಪಡೆಯುವ ವೇಳೆ ಆಧಾರ್ ಕಾರ್ಡ್ ತೋರಿಸುವುದು ಕಡ್ಡಾಯವಾಗಿದ್ದು, ಇದನ್ನು ದಾಖಲು ಮಾಡಿಕೊಳ್ಳಲು ವಿಶೇಷ ಸಾಫ್ಟ್‌’ವೇರ್ ಸಿದ್ದಪಡಿಸಲಾಗಿದೆ. ಒಮ್ಮೆ ಇದರಲ್ಲಿ ನಮೂದಾದ ಆಧಾರ್ ನಂಬರ್’ಗೆ ಮತ್ತೆ ಎರಡನೆಯ ಬಾರಿ ವಿತರಣೆ ಮಾಡುವುದಿಲ್ಲ.

ಕೊರೋನಾದಂತಹ ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಯುವ ಉಪಕ್ರಮಗಳಲ್ಲಿ ಜನರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದೂ ಸಹ ಅತ್ಯಂತ ಮುಖ್ಯವಾದುದು. ಈಗ ವಿತರಣೆ ಮಾಡಲಿರುವ ಔಷಧಿಯನ್ನು ನಮ್ಮ ಕುಟುಂಬಸ್ಥರು ಕಳೆದ ಒಂದು ತಿಂಗಳಿನಿಂದಲೂ ತೆಗೆದುಕೊಳ್ಳುತ್ತಿದ್ದೇವೆ. ಹೀಗಾಗಿ, ನಾವು ಜನರ ನಡುವೆಯೇ ಕಾರ್ಯ ನಿರ್ವಹಿಸುತ್ತಿದ್ದರೂ ನಮಗೆ ಯಾವುದೇ ವೈರಸ್ ತಗುಲಿಲ್ಲ ಎಂಬುದು ನಮ್ಮ ನಂಬಿಕೆ. ಕೊರೋನಾದಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಈ ಔಷಧಿಯನ್ನು ನಗರದ ಜನರಿಗೆ ಉಚಿತವಾಗಿ ಹಂಚಬೇಕು ಎಂಬುದು ನಮ್ಮ ಉದ್ದೇಶ. ಇದಕ್ಕಾಗಿ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಬಹಳಷ್ಟು ಸಹಕಾರ ನೀಡಿದ್ದು, ಸಂಘ ಸಂಸ್ಥೆಗಳೂ ಸಹ ಕೈ ಜೋಡಿಸಿವೆ.
-ಕೆ.ಇ. ಕಾಂತೇಶ್,
ಆರೋಗ್ಯ ಹಾಗೂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರು

ಎಷ್ಟು ವೆಚ್ಚ?
ಶಿವಮೊಗ್ಗ ಪಾಲಿಕೆ ವ್ಯಾಪ್ತಿಯ 35 ವಾರ್ಡ್‌ಗಳ 4 ಲಕ್ಷ ಜನರಿಗೆ ಈ ಆರ್ಯುವೇದಿಕ್ ಕಿಟ್ ವಿತರಣೆ ಮಾಡಲಾಗುತ್ತಿದ್ದು, ಇದಕ್ಕೆ ಒಟ್ಟು 4 ಕೋಟಿ ರೂ. ಖರ್ಚು ಬರಲಿದೆ. ಇದಕ್ಕೆ ಸಾರ್ವಜನಿಕರು, ದಾನಿಗಳಿಂದ ನೆರವು ಸಂಗ್ರಹಿಸಲಾಗುತ್ತಿದ್ದು, ಈಶ್ವರಪ್ಪ ಹಾಗೂ ಕುಟುಂಬಸ್ಥರ ಸಹಕಾರ ದೊಡ್ಡದಿದೆ.

ಆರಂಭದ ಹಂತವಾಗಿ ನಗರದ ಎಲ್ಲಾ ವಾರ್ಡುಗಳಲ್ಲಿ ಅಂದರೆ ಬೂತ್ ಮಟ್ಟದಲ್ಲಿ ಔಷಧ ವಿತರಣೆ ಕಾರ್ಯಕ್ರಮವು 3 ಹಂತದಲ್ಲಿ ನಡೆಯಲಿದೆ. ಅದಕ್ಕಾಗಿ ಕಾರ್ಯಕರ್ತರ ಸುಮಾರು 300 ತಂಡಗಳನ್ನು ರಚಿಸಲಾಗಿದೆ. ಔಷಧಗಳ ಲಭ್ಯತೆಯ ಆಧಾರದ ಮೇಲೆ ಔಷಧ ವಿತರಣೆ ಆರಂಭಗೊಂಡ ದಿನದಿಂದ ಮುಂದಿನ 8-10 ದಿನಗಳಲ್ಲಿ ನಗರ ಪ್ರತಿಯೊಬ್ಬರಿಗೂ ಔಷಧ ದೊರೆಯುವಂತೆ ಕಾರ್ಯಕ್ರಮ ರೂಪಿಸಲಾಗಿದೆ. ನಂತರದ ದಿನಗಳಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ನಂತರ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಈ ಕಾರ್ಯಕ್ರಮವನ್ನು ವಿತರಿಸುವ ಆಶಯ ಹೊಂದಲಾಗಿದೆ.

Get In Touch With Us info@kalpa.news Whatsapp: 9481252093

Tags: ayurvedaCorona VirusCovid Protective ForceCovid19D S ArunImmunityK E KanteeshK S EshwarappaKannada News WebsiteLatest News KannadaMalnad NewsShivamogga Newsಆರ್ಯುವೇದಿಕ್ ಕಿಟ್ಕೆ.ಎಸ್. ಈಶ್ವರಪ್ಪಕೋವಿಡ್ ಸುರಕ್ಷಾ ಪಡೆಮಲೆನಾಡು ಸುದ್ಧಿರೋಗ ನಿರೋಧಕ ಶಕ್ತಿಶಿವಮೊಗ್ಗಶಿವಮೊಗ್ಗ ನ್ಯೂಸ್
Share218Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರಾಗಿ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ನೇಮಕ

Next Post

ರಾಜ್ಯದ ಪ್ರತಿ ವ್ಯಕ್ತಿಗೆ ಸರ್ಕಾರದ ಸೌಲಭ್ಯ ಒದಗಿಸಲು ಕ್ರಮ: ಸಿಎಂ ಯಡಿಯೂರಪ್ಪ

kalpa News

kalpa News

Next Post
ರಾಜ್ಯದ ಪ್ರತಿ ವ್ಯಕ್ತಿಗೆ ಸರ್ಕಾರದ ಸೌಲಭ್ಯ ಒದಗಿಸಲು ಕ್ರಮ: ಸಿಎಂ ಯಡಿಯೂರಪ್ಪ

ರಾಜ್ಯದ ಪ್ರತಿ ವ್ಯಕ್ತಿಗೆ ಸರ್ಕಾರದ ಸೌಲಭ್ಯ ಒದಗಿಸಲು ಕ್ರಮ: ಸಿಎಂ ಯಡಿಯೂರಪ್ಪ

Leave a Reply Cancel reply

Your email address will not be published. Required fields are marked *

No Result
View All Result
ಬೆಂಗಳೂರಿನಲ್ಲಿ ಆತ್ಮವಿಶ್ವಾಸದಿಂದ ಮೊದಲ ಮನೆ ಖರೀದಿಗೆ ಮುಂದಾಗುತ್ತಿರುವ ಜೆನ್ ಜೀ ತಲೆಮಾರು: ಕೋಟಕ್ ವರದಿ
English Articles

Kotak Mahindra to acquire Deutsche Bank’s retail banking

by kalpa News
July 1, 2026
0

Kalpa Media House  | Bengaluru | Kotak Mahindra Bank Ltd. (“KMBL” / “Kotak”) and Deutsche Bank AG (XETRA: DBKGn.DB /...

Read moreDetails
A.G. Srinivas assumes charge as Additional General Manager of SWR

A.G. Srinivas assumes charge as Additional General Manager of SWR

June 30, 2026
V. Somanna Dedicates ₹22.40 Crore Road Over Bridge at Yelekeri Gate

V. Somanna Dedicates ₹22.40 Crore Road Over Bridge at Yelekeri Gate

June 30, 2026
Mysore - Shivamogga - Talguppa Train

Cancellation, Regulation and Diversion of Trains

June 27, 2026
Surprise Inspection for Enhanced Passenger Safety

Surprise Inspection for Enhanced Passenger Safety

June 27, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL