ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ತಾಲೂಕಿನಾದ್ಯಂತ ಇಂದು 18 ಮಂದಿಯಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
ಪೇಪರ್ ಟೌನ್’ನಲ್ಲಿ 35 ವರ್ಷದ ಪುರುಷ, ಬಿಎಚ್ ರಸ್ತೆಯ 45 ವರ್ಷದ ಪುರುಷ, ದೊಡ್ಡ ಗೋಪನ ಹಳ್ಳಿಯ 25 ವರ್ಷದ ಪುರುಷ, ಗಾಂಧಿನಗರದ 77 ವರ್ಷದ ವೃದ್ದೆ, ಉಜ್ಜೀನೀಪುರದ 19 ವರ್ಷದ ಯುವತಿ, ಭೂತನಗುಡಿಯ 30 ಹಾಗೂ 34 ವರ್ಷದ ಇಬ್ಬರು ಪುರುಷರು, ಟ್ರಾಫಿಕ್ ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮಿಲ್ಟ್ರಿ ಕ್ಯಾಂಪ್ ನಿವಾಸಿ 28 ವರ್ಷದ ಪುರುಷ, ದೊಡ್ಡೇರಿ 52 ವರ್ಷದ ಪುರುಷ, ಆಂಜನೇಯ ಅಗ್ರಹಾರದ 36 ವರ್ಷದ ಪುರುಷ, ಹೊಳೆಹೊನ್ನೂರಿನ 54 ವರ್ಷದ ಪುರುಷ, ಸೀಗೆಬಾಗಿಯ 39 ವರ್ಷದ ಮಹಿಳೆ, ಬಸಲೀಕಟ್ಟೆಯ 65 ವರ್ಷದ ಪುರುಷ, ಸಿದ್ಧಾರೂಢನಗರ 62 ವರ್ಷದ ಪುರುಷ ಹಾಗೂ ಇವರ ಪತ್ನಿ58 ವರ್ಷದ ಮಹಿಳೆ, ಖಾಜಿ ಮೊಹಲ್ಲಾ ಕೋಟೆಯ 69 ವರ್ಷದ ವೃದ್ಧೆ, ಅರಣ್ಯ ಇಲಾಖೆ ಕಚೇರಿಯಲ್ಲಿ ಕೆಲಸ ಮಾಡುವ ತರೀಕೆರೆ ಮೂಲದ 33 ವರ್ಷದ ಪುರುಷ, ಶಿವಮೊಗ್ಗ ಅಶೋಕ ನಗರದ 26 ವರ್ಷದ ಯುವಕ(ಈತ ಭದ್ರಾವತಿಯಲ್ಲಿ ಕೋವಿಡ್19 ಟೆಸ್ಟ್ ಮಾಡಿಸಿದ್ದಾರೆ)ನಲ್ಲಿ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದೆ.

ಸೋಂಕಿತರ ನಿವಾಸದ ಸ್ಥಳಗಳಿಗೆ ತಾಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ, ನಗರಸಭೆ ಆಯುಕ್ತ ಮನೋಹರ್, ಆರೋಗ್ಯ ಇಲಾಖೆಯ ನೀಲೇಶ್ ರಾಜ್ ಮುಂತಾದವರು ಭೇಟಿ ನೀಡಿದ್ದಾರೆ.
Get In Touch With Us info@kalpa.news Whatsapp: 9481252093

















