ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಶೃಂಗೇರಿಯಲ್ಲಿ ಜಗದ್ಗುರು ಆದಿ ಶಂಕರಾಚಾರ್ಯರ ಗೋಪುರದ ಮೇಲೆ ಎಸ್’ಡಿಪಿಐ ಧ್ವಜ ಹಾರಿಸಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಗರ ಬಿಜೆಪಿ ಯುವಮೋರ್ಚಾ ಆಗ್ರಹಿಸಿದೆ.
ಈ ಕುರಿತಂತೆ ಜಿಲ್ಲಾಧಿಕಾರಿಗಳ ಮೂಲಕ ಗೃಹ ಸಚಿವರಿಗೆ ಮನವಿ ಅರ್ಪಿಸಿದ ನಂತರ ಮಾತನಾಡಿದ ಮೋರ್ಚಾದ ಪ್ರಮುಖರು, ಶೃಂಗೇರಿ ಧಾರ್ಮಿಕ ಹಾಗೂ ಅಧ್ಯಾತ್ಮಿಕ ಶಕ್ತಿಕೇಂದ್ರವಾಗಿದ್ದು, ಶಂಕರಾಚಾರ್ಯರ ಪ್ರತಿಮೆಯ ಮೇಲೆ ಮುಸ್ಲಿಂ ಧಾರ್ಮಿಕ ಚಿತ್ರವಿರುವ ಧ್ವಜ ಹಾರಿಸಿ ಅವರ ಭಕ್ತರಿಗೆ ನೋವು ಉಂಟುಮಾಡಲಾಗಿದೆ. ಈ ಘಟನೆಯಲ್ಲಿ ಶೃಂಗೇರಿ ಪಪಂ ಸದಸ್ಯ ರಫೀಕ್ ಎಂಬಾತನನ್ನು ಬಂಧಿಸಲಾಗಿದೆ. ಇಂತಹವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.
ಎಸ್’ಡಿಪಿಐ ಹಾಗೂ ಪಿಎಫ್’ಐ ಸಂಘಟನೆಗಳು ಹಲವಾರು ಕೋಮು ಸೌಹಾರ್ದ ಕದಡುವಂತಹ ದೃಷ್ಕೃತ್ಯ ನಡೆಸುತ್ತಿರುವುದು ಈಗಾಗಲೇ ಸಾಬೀತಾಗಿದೆ. ಇಂತಹ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಲಾಯಿತು.
ಜಿಲ್ಲಾ ಯುವ ಮೋರ್ಚಾ ಪ್ರಭಾರಿ ಹೃಷಿಕೇಶ್ ಪೈ, ನಗರಾಧ್ಯಕ್ಷ ದರ್ಶನ್ ಆರ್.ವಿ. ಜಿಲ್ಲಾ ಉಪಾಧ್ಯಕ್ಷ ಸುಹಾಸ್ ಶಾಸ್ತ್ರಿ, ನಗರ ಪ್ರಧಾನ ಕಾರ್ಯದರ್ಶಿ ಟಿ.ಆರ್. ಜಗನ್ನಾಥ್, ದಿನೇಶ್ ಆಚಾರ್, ರಾಹುಲ್ ಬಿದರೆ, ಅರುಣ್ ಶೆಟ್ಟಿ ಸೇರಿದಂತೆ ಹಲವರು ಇದ್ದರು.
Get In Touch With Us info@kalpa.news Whatsapp: 9481252093














