ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಗರದ ವಿನೋಬನಗರದ 60 ಅಡಿ ರಸ್ತೆಯಲ್ಲಿನ ಪಾಲಿಕೆ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಗೂಡಂಗಡಿಗಳನ್ನು ಇಂದು ತೆರವುಗೊಳಿಸಲಾಗಿದ್ದು, ಈ ವೇಳೆ ಭಾರೀ ವಿರೋಧ ವ್ಯಕ್ತವಾಗಿದೆ.
ನಗರಪಾಲಿಕೆಗೆ ಸೇರಿದ ಸ್ವತ್ತು ಖಾಸಗಿಯವರ ಜಾಗದಲ್ಲಿ ಈ ಹಿಂದೆ ಇದ್ದ ಪಾಲಿಕೆ ಸದಸ್ಯರ ಅಣತಿಯಂತೆ ಗೂಡಂಗಡಿ ತಲೆಎತ್ತಿದ್ದವು ಎಂದು ಹೇಳಲಾಗಿದೆ.
ಅಲ್ಲದೇ ಇಲ್ಲಿನ ಗೂಡಂಗಡಿಯ ಕ್ಯಾಂಟಿನ್’ಗೆ ಬರುವ ಹಲವು ಯುವಕರ ಉಪಟಳ, ಸಾರ್ವಜನಿಕರಿಗೆ, ಮಹಿಳೆಯರಿಗೆ ಕಿರಿಕಿರಿ ಆಗುತ್ತಿತ್ತು. ಇದನ್ನು ಮನಗಂಡ ಪಾಲಿಕೆ ಅಕ್ರಮ ಗೂಡಂಗಡಿ ತೆರವಿಗೆ ಆದೇಶಿಸಿ ಪೋಲಿಸ್ ನೆರವಿನೊಂದಿಗೆ ಕಾರ್ಯಾಚರಣೆ ಕೈಗೊಂಡಿದೆ. ತೆರವು ವಿರೋಧಿಸಿ ವಿರೋಧ ವ್ಯಕ್ತವಾಯಿತು.
ಪಾಲಿಕೆಯ ವಾರ್ಡ್ ನಂಬರ್ 34 (ಈಗ ಅದು ವಾರ್ಡ್ ನಂಬರ್ 18) ರಲ್ಲಿ ಪಾಲಿಕೆಯ ಖಾಲಿ ನಿವೇಶನ 1048, 1049 ಹಾಗೂ 1050 ರಲ್ಲಿ ನಿರ್ಮಿಸಿರುವ ಗೂಡಂಗಡಿಗಳನ್ನ ಪಾಲಿಕೆ ಇಂದು ಪೊಲೀಸ್ ರಕ್ಷಣೆಯಲ್ಲಿ ತೆರವು ಗೊಳಿಸಲು ಮುಂದಾಗಿದೆ.
ಅದರಂತೆ ಗಣಪತಿ ಹಬ್ಬ ಹತ್ತಿರದಲ್ಲಿರುವಾಗಲೇ ಪಾಲಿಕೆ ಹೂವಿನ ಮಾರುಕಟ್ಟೆ ಹಾಗೂ ಸುತ್ತಮುತ್ತಲಿನ ತಳ್ಳುವ ಗಾಡಿಯಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವವರಿಗೆ ಬಿಸಿ ಮುಟ್ಟಿಸಿದೆ. ಹಾಗೇ ಪ್ಲಾಸ್ಟಿಕ್ ನಿಷೇಧವಿದೆ ಎಂದು ನೆನಪಿಸಿದೆ.
ಸುಮಾರು 50 ಅಂಗಡಿಯ ಮೇಲೆ ದಾಳಿ ನಡೆಸಿದ ಪಾಲಿಕೆ ಅಧಿಕಾರಿಗಳು 30 ಕೆ.ಜಿ ಪ್ಲಾಸ್ಟಿಕ್ ಚೀಲಗಳನ್ನ ವಶಕ್ಕೆ ಪಡಿಸಿಕೊಂಡಿದೆ. ಆದರೆ ಪ್ಲಾಸ್ಟಿಕ್ ಬಳಕೆ ದಾರರಿಗೆ ಇನ್ನೂ ದಂಡ ವಿಧಿಸದೆ ಇರುವುದರಿಂದ ಇದು ಪುನರ್ಬಳಕೆ ಆಗುವ ಭಯವೂ ಇದೆ.
Get In Touch With Us info@kalpa.news Whatsapp: 9481252093







Discussion about this post