ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ತಾಲೂಕಿನಲ್ಲಿಂದು 56 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇದೆ.
ಈ ಕುರಿತಂತೆ ಜಿಲ್ಲಾಡಳಿತ ಬುಲೆಟಿನ್ ಬಿಡುಗಡೆ ಮಾಡಿದ್ದು, ತಾಲೂಕಿನಲ್ಲಿ 56 ಪಾಸಿಟಿವ್ ಪತ್ತೆಯಾಗಿದೆ ಎಂದು ಹೇಳಿದೆ.
ನ್ಯೂಕಾಲೋನಿಯ 80 ವರ್ಷದ ವೃದ್ಧ, ಹೆಬ್ಬಂಡಿಯ 56 ವರ್ಷದ ಪುರುಷ, ಹಾಲಪ್ಪ ಸರ್ಕಲ್’ನ 32 ವರ್ಷದ ಪುರುಷ, ಚಾಮೇಗೌಡ ಏರಿಯಾದ 69 ವರ್ಷ ವೃದ್ಧ, ಭೋವಿ ಕಾಲೋನಿಯ 55 ವರ್ಷದ ಮಹಿಳೆ, 63 ವರ್ಷದ ವೃದ್ಧೆ, 21 ವರ್ಷದ ಯುವಕ, 28 ವರ್ಷದ ಯುವಕ, 65 ವರ್ಷದ ವೃದ್ಧೆ, 55 ವರ್ಷದ ಮಹಿಳೆ, ನೆಹರು ನಗರದ 16 ಯುವತಿ ಹಾಗೂ 38 ವರ್ಷದ ಮಹಿಳೆ, 36 ವರ್ಷದ ಮಹಿಳೆ, ಮಾರುತಿ ನಗರದ 77 ವರ್ಷದ ವೃದ್ಧ, 61 ವರ್ಷದ ವೃದ್ಧೆ, ಹಾಗೂ 44 ವರ್ಷದ ಪುರುಷ, ಜನ್ನಾಪುರದ 36 ವರ್ಷದ ಮಹಿಳೆ, ಉಜ್ಜಿನೀಪುರದ 64 ವರ್ಷದ ಮಹಿಳೆ, ಜಿಂಕ್ ಲೈನ್’ನ 34 ವರ್ಷದ ಪುರುಷ, ಗೋಲ್ಡನ್ ಜ್ಯೂಬಿಲಿಯ 50 ವರ್ಷದ ಪುರುಷ, ಭೂತನಗುಡಿಯ 66 ವರ್ಷದ ವೃದ್ಧ, ಮಾಧವ ನಗರದ 45 ವರ್ಷದ ಪುರುಷ ಸೇರಿದಂತೆ ತಾಲೂಕಿನಾದ್ಯಂತ ಇಂದು ಒಟ್ಟು 56 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
Get In Touch With Us info@kalpa.news Whatsapp: 9481252093

















