ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ನಗರದ ವಿಪಿ ಆರ್ಟ್ಸ್ ಎಂದೇ ಖ್ಯಾತಿ ಗಳಿಸಿದ ವೆಂಕಟರಮಣ ಅವರು ಇಂದು ಬೆಳಿಗ್ಗೆ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ.
ಮೃತರಿಗೆ ಪತ್ನಿ ವಿಶಾಲಾಕ್ಷಿ ಇಬ್ಬರು ಪುತ್ರಿಯರು ಒಬ್ಬ ಪುತ್ರ ಇದ್ದಾರೆ.
ವೆಂಕಟರಮಣ ಅವರು ಕುಂಚ ಕಲಾವಿದರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ರಂಗಭೂಮಿ ಕಲಾವಿದರಾಗಿದ್ದು ಇವರ ಗುರುಗಳಾದ ಪಿ.ಟಿ.ಎಸ್ ಮಾಸ್ಟರ್ ಅವರ ರಾಜವೀರ ಮದಕರಿ ನಾಯಕ ನಾಟಕದಲ್ಲಿ ಹೈದರ್ ಅಲಿ ಪಾತ್ರವನ್ನು ಮಾಡಿ ಜೀವತುಂಬಿ ದೆಹಲಿಯಲ್ಲಿ ಸಹ ನಾಟಕ ಪ್ರದರ್ಶನ ಕೊಟ್ಟು ಸೈ ಎನಿಸಿಕೊಂಡಿದ್ದರು ಮೇರು ನಟರಾದ ಇವರು ಎಲ್ಲರ ಜೊತೆ ಸ್ನೇಹಜೀವಿಯಾಗಿದ್ದರು.
ಇವರ ಹಗಲಿಕೆಯಿಂದ ಕುಂಚ ಕಲಾ ಲೋಕಕ್ಕೂ ರಂಗಭೂಮಿಗೂ ತುಂಬಲಾರದ ನಷ್ಟವಾಗಿದೆ ಹಾಗೂ ಇವರಿಗೆ ರಾಜಾ ರವಿವರ್ಮ ಕುಂಚ ಕಲಾವಿದರ ಸಂಘದ ಉಪಾಧ್ಯಕ್ಷ ಎಸ್. ಪ್ರಕಾಶ್(ಆರ್ಟ್ಸನ್) ಪ್ರಧಾನ ಕಾರ್ಯದರ್ಶಿ, ಕಾಟೇಶ್, ಮಕ್ಕು, ಖಜಾಂಚಿ, ದಾದಾಪೀರ್, ಸೃಷ್ಟಿ ತಿಪ್ಪೇಶ್ ಬಾಬು, ನಿಸರ್ಗ ರಾಜ್ ಮಲ್ಲೇಶ್ ಹಾಗೂ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ರಂಗಭೂಮಿ ನಿರ್ದೇಶಕರು, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಪಿ.ತಿಪ್ಪೇಸ್ವಾಮಿ(ಪಿಟಿಎಸ್) ಮಾಸ್ಟರ್ ಸಾಹಿತಿ, ಪತ್ರಕರ್ತರು ಇವರು ಮೃತರಿಗೆ ಸಂತಾಪ ಸೂಚಿಸಿ ಕಂಬನಿ ಮಿಡಿದಿದ್ದಾರೆ.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get In Touch With Us info@kalpa.news Whatsapp: 9481252093
Discussion about this post