ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಉಂಬ್ಳೇಬೈಲ್ ವ್ಯಾಪ್ತಿಯಲ್ಲಿ ಆನೆ ದಾಳಿಯಿಂದ ತೆಂಗು ಹಾಗೂ ಅಡಿಕೆ ಬೆಳೆ ಬಹಳಷ್ಟು ನಾಶವಾಗಿದೆ.
ಉಂಬಳೇಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುರುಳಿ ಹಳ್ಳಿ ಗ್ರಾಮದ ರೈತ ಮಂಜಣ್ಣ ಅವರು ಬೆಳೆದ ತೆಂಗು ಅಡಿಕೆ ತೋಟಕ್ಕೆ ರಾತ್ರಿ ಆನೆ ನುಗ್ಗಿ ತೆಂಗಿನ ಗಿಡ ಹಾಗೂ ಅಡಿಕೆ ಗಿಡವನ್ನು ಮುರಿದು ಹಾಕಿದೆ.
ಅದೇ ಊರಿನ ಇನ್ನೊಬ್ಬ ರೈತ ಕೃಷ್ಣಪ್ಪ ಎಂಬುವವರ ಬತ್ತದ ಪೈರನ್ನು ಸಂಪೂರ್ಣ ತುಳಿದು ಹಾಕಿದ್ದು ಭತ್ತದ ಪೈರು ಹಾಳಾಗಿದೆ. ಈ ಆನೆಗಳ ದಾಳಿಯಿಂದ ರೈತರು ಕಂಗಾಲಾಗಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಜಯ ಕರ್ನಾಟಕ ಸಂಘಟನೆ ನಿಕಟಪೂರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್, ಕೊರೋನಾ ಮಹಾಮಾರಿ ಸಂಕಷ್ಟ ಕಾಲದಲ್ಲೂ ಕೂಡ ರೈತರು ಸಾಲಸೂಲ ಮಾಡಿ ಬೆಳೆದ ಬೆಳೆ ಆನೆ ದಾಳಿಯಿಂದ ಸಂಪೂರ್ಣ ಹಾಳಾಗುತ್ತಿದೆ. ಇದರಿಂದ ರೈತರು ವಿಷ ಕುಡಿಯುವ ಪರಿಸ್ಥಿತಿ ಬಂದಿದೆ ಎಂದಿದ್ದಾರೆ.
ಪ್ರತಿ ವರ್ಷ ಕೂಡ ರೈತರ ಜಮೀನಿಗೆ ಆನೆ ನುಗ್ಗಿ ಬೆಳೆದ ಬೆಳೆಯನ್ನು ಹಾಳು ಮಾಡುತ್ತಿದ್ದರು ಕೂಡ ಅರಣ್ಯ ಅಧಿಕಾರಿಗಳು ಆನೆಗಳು ದಾಳಿ ಮಾಡದಂತೆ ಮುಂಜಾಗ್ರತ ಕ್ರಮವನ್ನು ಕೈಗೊಳ್ಳುತ್ತಿಲ್ಲ. ತಕ್ಷಣ ಕ್ರಮವನ್ನು ಕೈಗೊಂಡು ಈ ರೈತರಿಗೆ ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆ ವತಿಯಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
Get In Touch With Us info@kalpa.news Whatsapp: 9481252093
















