ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ನಗರ ಹಾಗೂ ಕೆಲವು ಗ್ರಾಮಾಂತರ ಭಾಗದಲ್ಲಿ ಇಂದು ಸಂಜೆ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದೆ.
ನಿನ್ನೆ ರಾತ್ರಿ ಕೊಂಚ ಸುರಿದಿದ್ದ ಮಳೆ, ಇಂದು ಸಂಜೆ ಅಂದಾಜು 2 ಗಂಟೆಗಳ ಕಾಲ ಗುಡುಗಿನ ಸಹಿತ ಭಾರೀ ಪ್ರಮಾಣದಲ್ಲಿ ಸುರಿದಿದೆ.
ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಮಳೆಯೊಂದಿಗೆ ಗಾಳಿಯೂ ಸಹ ಇದ್ದ ಕಾರಣ ಅಬ್ಬರ ಕೊಂಚ ಹೆಚ್ಚಾಗಿಯೇ ಇತ್ತು.
ವಾತಾವರಣದಲ್ಲಿ ಮುಂಜಾನೆ ಕೊಂಚ ಸೆಖೆಯಿತ್ತು. ಆದರೆ, ಸಂಜೆ ವೇಳೆಗೆ ವರುಣ ಅಬ್ಬಿಸಿದ ಪರಿಣಾಮ ಸ್ವಲ್ಪ ತಣ್ಣಗಾಗಿದೆ. ನಗರದಾದ್ಯಂತ ಮಳೆಯ ಅಬ್ಬರ ಹೆಚ್ಚೇ ಇದ್ದರೂ, ಪೂರ್ವ ಭಾಗದಲ್ಲಿ ತುಸು ಹೆಚ್ಚಿತ್ತು ಎಂದೇ ಹೇಳಬೇಕು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news







Discussion about this post