ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಇಂದು ಘೋಷಣೆಯಾಗಿದ್ದು, ಭದ್ರಾವತಿ ಮೂಲದ ಡಾ.ಬಿ.ಎಸ್. ಶ್ರೀನಾಥ್ ಅವರಿಗೆ ಪ್ರಶಸ್ತಿಯ ಗರಿ ಸಂದಿದೆ.

ಪ್ರಸ್ತುತ ಬೆಂಗಳೂರಿನ ಶಂಕರ ಕ್ಯಾನ್ಸರ್ ಫೌಂಡೇಶನ್’ನಲ್ಲಿ ಸೇವೆ ಸಲ್ಲಿಸುತ್ತಿರುವ ಇವರು, 1971ರಲ್ಲಿ ದಾವಣಗೆರೆ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್, 1976ರಲ್ಲಿ ಚಂಡಿಘಡ್’ನಲ್ಲಿ ಪಿಜಿಐಎಂಇಆರ್(ಜನರಲ್ ಸರ್ಜರಿ) 1981ರಲ್ಲಿ ಯುಕೆಯಲ್ಲಿ ಎಫ್’ಆರ್’ಸಿಎಸ್ ವಿದ್ಯಾಭ್ಯಾಸ ಮಾಡಿದ್ದಾರೆ. ಎಂಬಿಬಿಎಸ್’ನಲ್ಲಿ ಎರಡು ಚಿನ್ನದ ಪದಕ ಪಡೆದಿರುವ ಇವರು, 1982ರಲ್ಲಿ ಪ್ರತಿಷ್ಠಿತ ಓಆರ್’ಎಸ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ತಮ್ಮ ವಿದ್ಯಾಭ್ಯಾಸದ ಎಲ್ಲ ಹಂತದಲ್ಲೂ ಪ್ರಥಮ ಸ್ಥಾನ ಪಡೆದಿರುವ ಇವರು, ಪಾಂಡಿಚೆರಿ, ಚಂಡಿಘಡ್, ಕೇರಳದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇಂಗ್ಲೆಂಡಿನ ವೇಲ್ಸ್’ನ ಯುನಿವರ್ಸಿಟಿ ಆಸ್ಪತ್ರೆಯ ರಿಜಿಸ್ಟರ್ ಇನ್ ಸರ್ಜರಿಯಾಗಿ 1981ರಿಂದ 83ರವರೆಗೂ ಸೇವೆ ಸಲ್ಲಿಸಿದ್ದಾರೆ.
ಬೆಂಗಳೂರಿನ ಕಿದ್ವಾಯಿ ಸಂಸ್ಥೆ, ರಾಮಯ್ಯ ಮೆಡಿಕಲ್ ಕಾಲೇಜಿನ ಸರ್ಜರಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ, ಅಂಕಾಲಜಿ ಸಂಸ್ಥೆಯ ಎಂಡಿಯಾಗಿ ಸೇವೆ ಸಲ್ಲಿಸಿದ್ದಾರೆ. ಸದ್ಯ 2010ರಿಂದ ಶಂಕರ ಕ್ಯಾನ್ಸರ್ ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿಯಾಗಿ, ಅಂಕಲಜಿ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















