ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಧಾರವಾಡ: ಬೆಂಗಳೂರಿನಲ್ಲಿ ಜಾತಿ ರಾಜಕಾರಣ ಮಾಡುವವರಿಗೆ ಈ ಉಪಚುನಾವಣೆ ದೊಡ್ಡ ಪಾಠ. ಪ್ರಜಾಪ್ರಭುತ್ವದಲ್ಲಿ ಜಾತಿ ರಾಜಕಾರಣ ನಡೆಯುವುದಿಲ್ಲ ಎಂಬುದಕ್ಕೆ ಶಿರಾ ಹಾಗೂ ಆರ್.ಆರ್.ನಗರ ಫಲಿತಾಂಶ ತಕ್ಕ ಉದಾಹರಣೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಇಲ್ಲಿನ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಸಿ.ಪಾಟೀಲ್, ಯಡಿಯೂರಪ್ಪ ನೇತೃತ್ವದ ಸರ್ಕಾರದ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಗಳು ಈ ಉಪಚುನಾವಣೆಯಲ್ಲಿ ಗೆಲುವು ತಂದಿವೆ. ಮತದಾರ ಅಭಿವೃದ್ಧಿಯನ್ನು ಕೈ ಹಿಡಿಯುತ್ತಾನೆ ಎನ್ನುವುದಕ್ಕೆ ಈ ಫಲಿತಾಂಶ ಸಾಕ್ಷಿ ಎಂದರು.
ಬೆಳೆ ವಿಮೆ 2019-20ರವರೆಗೆ ಬಿಡುಗಡೆಯಾಗಿದೆ. ಕೆಲವು ಕಡೆ ಅಕೌಂಟ್ ನಂಬರ್ ತಾಳೆಯಾಗದೆ ಮಿಸ್ ಮ್ಯಾಚಿಂಗ್ ತಾಂತ್ರಿಕ ಕಾರಣದಿಂದ ವಿಳಂಬವಾಗಿದೆ. ಇನ್ನು ಕೆಲವು ದಿನಗಳಲ್ಲಿಯೇ 2015-16 ರಿಂದ ಸಂಪೂರ್ಣವಾಗಿ ಎಲ್ಲವೂ ಬಿಡುಗಡೆಯಾಗಲಿದೆ ಎಂದು ಕೃಷಿ ಸಚಿವರು ಹೇಳಿದರು.
ಆರ್ಥಿಕ ಮಟ್ಟ ಸುಧಾರಿಸಿದ ಬಳಿಕ ಕೃಷಿ ವಿಶ್ವವಿದ್ಯಾಲಯದಲ್ಲಿ ಬಾಕಿ ಇರುವ ಹುದ್ದೆಗಳನ್ನು ಸದ್ಯದಲ್ಲಿಯೇ ತುಂಬಲು ಕ್ರಮಕೈಗೊಳ್ಳಲಾಗುವುದೆಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post