No Result
View All Result
ಡಯಾಲಿಸಿಸ್ ಅಂತಿಮವಲ್ಲ | ಮೃತ ದಾನಿದಾರ ಕಿಡ್ನಿಯಿಂದ ರೋಗಿಗೆ ಹೊಸ ಬದುಕು
English Articles

A Second Chance at Life Through Deceased Organ Donation

by ಕಲ್ಪ ನ್ಯೂಸ್
February 3, 2026
0

Kalpa Media House  |  Bengaluru, Whitefield  | For 48-year-old Unnikrishnan, life for several years revolved around dialysis sessions, medications, and...

Read moreDetails
Bhaskara Parva: Generations of Journalism Students Reunite to Honour a Teacher Who Shaped Their Lives

Bhaskara Parva: Generations of Journalism Students Reunite to Honour a Teacher Who Shaped Their Lives

February 2, 2026
NITK Surathkal Inaugurates First Annual Sports Festival- ‘Endeavor 2026’

NITK Surathkal Inaugurates First Annual Sports Festival- ‘Endeavor 2026’

February 1, 2026
Samsung Sets Two Guinness World Records with its India

Samsung Sets Two Guinness World Records with its India

January 31, 2026
ಮೈಸೂರು | ಮಹಾರಾಣಿ ಮಹಿಳಾ ವಿದ್ಯಾರ್ಥಿನಿಯರಿಗೆ ಆಹಾರ ಹಾಗು ಆತಿಥ್ಯೋದ್ಯಮ ಕೌಶಲ್ಯ ತರಬೇತಿ

Maharani’s Science College Collaboration Empowers Students with Industry-Ready Skills

January 31, 2026
  • Advertise With Us
  • Grievances
  • About Us
  • Contact Us
Friday, February 6, 2026
Follow Us
kalpa.news
">
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ತೀರ್ಥಹಳ್ಳಿಯ ಬಾಳೆಬೈಲು ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಡಿ.14ರವರೆಗೂ ಕಾರ್ತಿಕ ದೀಪೋತ್ಸವ

ತುಂಗಾ ತೀರದಲ್ಲಿದೆ ಮನಮೋಹಕ ಕೆತ್ತನೆಯ ಧಾರ್ಮಿಕ ಪುಣ್ಯಕ್ಷೇತ್ರ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
November 16, 2020
in Special Articles
0
ತೀರ್ಥಹಳ್ಳಿಯ ಬಾಳೆಬೈಲು ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಡಿ.14ರವರೆಗೂ ಕಾರ್ತಿಕ ದೀಪೋತ್ಸವ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಕಾರ್ತಿಕ ಮಾಸದ ಅಂಗವಾಗಿ ಬಾಳೆಬೈಲು ಶ್ರೀವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಇಂದಿನಿಂದ ಡಿಸೆಂಬರ್ 14 ರವರೆಗೆ ಪ್ರತಿದಿನ ಸಾಯಂಕಾಲ ದೀಪೋತ್ಸವ ನಡೆಯಲಿದೆ.

ದೇವಾಲಯದ ಬಗ್ಗೆ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಕೆಲವೇ ಕಿಮೀ ಸಾಗಿದರೆ ಬಾಳೆಬೈಲು ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನವಿದೆ. ರಾಜರ- ಅರಸರ ಆಡಳಿತ ಅವಧಿಯಲ್ಲಿ ಈ ಗ್ರಾಮವನ್ನು ನಲ್ಲೂರು ಅಗ್ರಹಾರ ಎಂದು ಕರೆಯಲಾಗುತ್ತಿತ್ತು.

ಮುಂಜಾನೆಯ ಸೂರ್ಯ ಉದಯಿಸುವ ಹೊತ್ತಿನಲ್ಲಿ ಮಲೆನಾಡಿನ ಪ್ರಕೃತಿಯ ಸೊಬಗು ಹಕ್ಕಿಗಳ ಕಲರವ ಜುಳು-ಜುಳು ಹರಿಯುವ ತುಂಗೆಯ ನಿನಾದ. ಇವೆಲ್ಲರ ನಡುವೆ ತುಂಗೆಯ ತಟದ್ಡಲ್ಲಿ ಬಿದನೂರು ಶಿವಪ್ಪ ನಾಯಕನ ಕಾಲದಲ್ಲಿ ಕಟ್ಟಲ್ಪಟ್ಟ ದೇವಾಲಯದಲ್ಲಿ ಸುಂದರ ಕೆತ್ತನೆಯ ಶ್ರೀ ವೆಂಕಟರಮಣ ಸ್ವಾಮಿಯ ಶಿಲಾ ಮೂರ್ತಿ ವೀರಾಜಮಾನರಾಗಿ ನಿಂತು ನಂಬಿ ಬರುವ ಭಕ್ತರ ಇಷ್ಟಾರ್ಥಗಳನ್ನು ನೆರವರಿಸುತ್ತಿದ್ದಾನೆ ಶ್ರೀ ಸ್ವಾಮಿ. ಶಂಖ, ಚಕ್ರ, ಗಧಾದಾರಿಯಾಗಿ ನಿಂತಿರುವ ಶ್ರೀ ಸ್ವಾಮಿಯನ್ನು ನೋಡಿ ಭಕ್ತಿಯಿಂದ ಕೈ ಮುಗಿದು ನಿಂತರೆ ಶ್ರೀಸ್ವಾಮಿಯ ಸನ್ನಿಧಿಯಲ್ಲಿ ಮನಸ್ಸಿಗೆ ಆಹ್ಲಾದ ಉಂಟಾಗುವುದು!


ತುಂಗಾ ತೀರದಲ್ಲಿರುವ ಶ್ರೀಸ್ವಾಮಿಯ ದೇವಸ್ಥಾನದ ಕೆತ್ತನೆಗಳು ಮನಮೋಹಕ ಶಿಲ್ಪ ಶಾಸ್ತ್ರಗಳಿಗೆ ಅನುಗುಣವಾಗಿವೆ. ಪೂರ್ವಭಿಮುಖವಾಗಿ ನಿಂತಿರುವ ಶ್ರೀಸ್ವಾಮಿಯ ಶಿಲಾಮೂರ್ತಿಗೆ ಮುಂಜಾನೆಯಲ್ಲಿ ಬೀಳುವ ಸೂರ್ಯನ ರಶ್ಮಿಗಳು ಶ್ರೀಸ್ವಾಮಿಯ ಸೊಬಗನ್ನು ಹೆಚ್ಚಿಸಿ, ಭಕ್ತರು ಸ್ವಾಮಿಯನ್ನು ಕಣ್ತುಂಬಿಕೊಳ್ಳುವಂತೆ ಭಗವಂತ ಅವಕಾಶ ಕಲ್ಪಿಸುತ್ತಾನೆ.

ಶಿಲಾಶಾಸ್ತ್ರದ ಪ್ರಕಾರ ದೇವರಿಗೆ ಅಭಿಷೇಕವಾದ ನೀರು ಹರಿದು ಹೋಗುವುದ್ದಕ್ಕೆ ಸಿಂಹಮುಖಿಯಾಗಿದ್ದಲ್ಲಿ ಮಹಾರಾಜರಿಂದ ನಿರ್ಮಿಸಲ್ಪಟ್ಟಿತೆಂದು ಗೋಮುಖಿಯಾಗಿದ್ದಲ್ಲಿ ಮಂತ್ರಿಗಳಿಂದ ಕಟ್ಟಲ್ಪಟಿತೆಂದು ಹಾಗೂ ಬೋಳು – ಬೋಳು ಆಗಿದ್ದಲ್ಲಿ ಪ್ರಜೆಗಳಿಂದ ನಿರ್ಮಿಸಲಾಗಿದೆ ಎಂಬ ಪ್ರತೀತಿ ಇದೆ!
ಶ್ರೀಸ್ವಾಮಿಯ ಅಭಿಷೇಕವಾದ ನೀರು ಹರಿದು ಹೋಗುವುದ್ದಕ್ಕೆ ಸಿಂಹಮುಖಿಯಾಗಿದ್ದು ಮಹಾರಾಜರ ಕಾಲದ್ದಲ್ಲಿ ನಿರ್ಮಿಸಲಾಗಿದೆ.


ಸನ್ನಿಧಾನ
ಶ್ರೀ ಸ್ವಾಮಿಯ ಸನ್ನಿಧಿಯಲ್ಲಿ ಶ್ರೀಮುಖ್ಯಪ್ರಾಣದೇವರು, ಶ್ರೀ ಸುಬ್ರಮಣ್ಯ ಸ್ವಾಮಿ, ಪಂಚ ಲೋಹದಿಂದ ನಿರ್ಮಿಸಿದ ಶ್ರೀರಾಘವೇಂದ್ರ ಸ್ವಾಮಿಗಳ ಸಣ್ಣ ಮೂರ್ತಿ, ಸಾಲಿಗ್ರಾಮ, ಶ್ರೀಸ್ವಾಮಿಯ ಶಿಲಾ ಮೂರ್ತಿಯನ್ನು ಗರುಡ ಪೀಠದ ಮೇಲೆ ಕೋರಿಸಲಾಗಿದೆ ಹಾಗೂ ದೇವಾಲಯದ ಮುಂಭಾಗದಲ್ಲಿ ಶ್ರೀತುಳಸಿ ದೇವಿಯ ತುಳಸಿ ಕಟ್ಟೆ ಇದೆ!

ಶ್ರೀಸ್ವಾಮಿಗೆ ಆಳಗಂಭಟ್ ಮನೆತನದವರು ವಂಶ ಪಾರಂಪಾರ್ಯವಾಗಿ ಪೂಜೆ ಸಲ್ಲಿಸುತ್ತಿದ್ದು, ಪ್ರಸುತ ಶ್ರೀಯುತ ಅನಿಲ್ ಅವರು ಶ್ರೀಸ್ವಾಮಿಗೆ ಪೂಜೆ ಸಲ್ಲಿಸುತ್ತಿದ್ಧಾರೆ.


ಭಗವಂತನಿಗೆ ಅರ್ಪಿಸಿದ ಮಾಲೆ ಹರಾಜು ಹಿಡಿದವರಿಗೆ ಕಂಕಣ ಬಲ ಪ್ರಾಪ್ತಿ
ಆರಾಧನೆ ಅಥವಾ ದೀಪ ಅಥವಾ ಉತ್ಸವದಲ್ಲಿ ಭಗವಂತನ ಅರ್ಪಿಸಿದ ಫಲ, ಪುಷ್ಪ, ಹಾರ ತುರಾಯಿಗಳನ್ನು ಹರಾಜು ಹಾಕಲಾಗುತ್ತದೆ. ವಿವಾಹಕ್ಕೆ ಪ್ರಯತ್ನಿಸುತ್ತಿರುವ ಕನ್ಯೆಯರ ತಂದೆ ತಾಯಿಯರು ಇದರಲ್ಲಿ ಪಾಲ್ಗೊಂಡು ತೆಗೆದುಕೊಳ್ಳುತ್ತಾರೆ. ಈ ರೀತಿ ಪಾಲ್ಗೊಂಡು ಪಡೆದ ನಂತರ ತಮ್ಮ ಮಕ್ಕಳ ವಿವಾಹಕ್ಕಾಗಿ ಬೇಡಿಕೊಂಡರೆ ಒಂದು ವರ್ಷದ ಒಳಗಾಗಿ ವಿವಾಹ ಆಗುತ್ತದೆ ಎಂಬ ನಂಬಿಕೆಯಿದೆ.

ತುಂಗಾ ನದಿಯ ತಟದಲ್ಲಿ ಪ್ರತಿನಿತ್ಯ ಯೋಗ
ದೇವಾಲಯದ ಸುತ್ತಲೂ ಹಸಿರಿನ ವನಸಿರಿ, ಗಿರಿಗಳ ಸಮೂಹ, ಪ್ರಶಾಂತ ವಾತಾವರಣ, ಜುಳು ಜುಳು ಹರಿಯುವ ನದಿ, – ಇವೆಲ್ಲವೂ ಇಲ್ಲಿನ ವಿಶೇಷ. ಇಲ್ಲಿ ದೇವರನ್ನು ಪ್ರಾರ್ಥಿಸಿದರೆ, ಪ್ರಕೃತಿಯನ್ನು ಪ್ರಾರ್ಥಿಸಿದ ಅನುಭವವೂ ಸೇರಿಕೊಳ್ಳುತ್ತದೆ.


ದೇವಸ್ಥಾನದ ಸುತ್ತ ಸುಂದರ ಪ್ರಾಂಗಣವಿದ್ದು, ಅಲ್ಲಿ ಪ್ರತಿ ನಿತ್ಯ ಮುಂಜಾನೆ 4.30 ರಿಂದ 7.30 ರವರೆಗೆ ಭಾರತೀಯ ಯೋಗ ಶಿಕ್ಷಣ ಟ್ರಸ್ಟ್‌, ಬಾಳೆಬೈಲು ಶಾಖೆ ವತಿಯಿಂದ ಯೋಗಾಭ್ಯಾಸ ನಡೆಸಲಾಗುತ್ತದೆ.

ಪುರಾಣಗಳ ಪ್ರಕಾರ ಕಾರ್ತಿಕ ಮಾಸದ ಆಚರಣೆಗೆ ವಿಶೇಷ ಮಹತ್ವವಿದ್ದು, ಕಾರ್ತಿಕ ಮಾಸ ವ್ರತಾಚರಣೆಯಿಂದ ಹಿಂದಿನ ಕರ್ಮಗಳನ್ನು ಕಳೆದುಕೊಳ್ಳಲು ಸಾಧ್ಯವಿದೆ ಎಂದು ಹೇಳಲಾಗಿದೆ.


ಕಾರ್ತಿಕ ಮಾಸದಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತದ ವೇಳೆಯಲ್ಲಿ ತುಪ್ಪದ ದೀಪ ಹಚ್ಚಿದರೆ ಅಭ್ಯುದಯ, ಸಂಪತ್ತು, ಆರೋಗ್ಯ ವೃದ್ಧಿಯಾಗುತ್ತದೆ ಎಂಬ ನಂಬಿಕೆಯೂ ಇದ್ದು, ಲೌಕಿಕ ಬಯಕೆಗಳಿಂದ ಮುಕ್ತಿ ಪಡೆಯಲು ನೆರವಾಗುತ್ತದೆ ಎಂದೂ ಪುರಾಣಗಳಲ್ಲಿ ಉಲ್ಲೇಖವಾಗಿದೆ.

ಕಾರ್ತಿಕ ಮಾಸಕ್ಕೆ ಪಂಚಾಂಗದಲ್ಲಿ ವಿಶೇಷ ಮನ್ನಣೆ ಇದೆ. ಈ ಮಾಸವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಮಾಸದಲ್ಲಿ ಸಮುದ್ರ ಸಾನ, ಸಂಗಮ ಸಾನ ಮಾಡುವುದು ರೂಢಿ. ದೇವಾಲಯದಲ್ಲಿ ಮಾಸದುದ್ದಕ್ಕೂ ವಿಶೇಷ ಭಜನೆ – ಕೀರ್ತನೆಗಳು ನಡೆಯುತ್ತವೆ.


ಮಾಸ್ಕ್‌ ಧಾರಣೆ ಕಡ್ಡಾಯ
ಕೊರೋನಾ ವೈರಸ್ ಹರಡುತ್ತಿರುವ ಭೀತಿಯಿರುವ ಕಾರಣ ಭಕ್ತರ ಆರೋಗ್ಯ ಮತ್ತು ದೇವಾಲಯದ ಹಿತದೃಷ್ಟಿಯಿಂದ ಭಕ್ತರು ಮಾಸ್ಕ್‌ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಯಾವುದೇ ಆತಂಕವಿಲ್ಲದೆ ಶ್ರೀ ಸ್ವಾಮಿಯ ದರ್ಶನ ಪಡೆದು ಅನುಗ್ರಹಕ್ಕೆ ಪಾತ್ರರಾಗಿ ಎಂದು ದೇವಾಲಯದ ಆಡಳಿತ ಮಂಡಳಿಯು ವಿನಂತಿಸಿಕೊಂಡಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: Kannada News WebsiteLatest News KannadaMalnad NewsShimogaShivamoggaShivamogga NewsThirthahalliಕಾರ್ತಿಕ ಮಾಸತೀರ್ಥಹಳ್ಳಿತುಂಗಾ ತೀರಬಾಳೆಬೈಲು ಶ್ರೀವೆಂಕಟರಮಣಸ್ವಾಮಿ ದೇವಸ್ಥಾನಶಿವಮೊಗ್ಗ
Share226Tweet123Send
Previous Post

ಗುಡವಿಯಲ್ಲಿ ಪಕ್ಷಿ ಸಂತಾನ ಪ್ರಕ್ರಿಯೆಗೆ ಸುಸ್ಥಿರ ಅವಕಾಶ ಕಲ್ಪಿಸಿ: ಅನಂತ ಹೆಗಡೆ ಆಶಿಸರ

Next Post

ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆ ಪ್ರಕರಣ: ಮಾಜಿ ಮೇಯರ್ ಸಂಪತ್ ರಾಜ್ ಬಂಧನ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆ ಪ್ರಕರಣ: ಮಾಜಿ ಮೇಯರ್ ಸಂಪತ್ ರಾಜ್ ಬಂಧನ

ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆ ಪ್ರಕರಣ: ಮಾಜಿ ಮೇಯರ್ ಸಂಪತ್ ರಾಜ್ ಬಂಧನ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

January 12, 2026
ಗದಗ-ಧಾರವಾಡ ಪ್ಯಾಸೆಂಜರ್ ರೈಲು ಪುನಾರಂಭ? ಕೇಂದ್ರ ಸಚಿವ ಜೋಶಿ ಹೇಳಿದ್ದೇನು?

ಸಾಗರ ಮಾರಿಕಾಂಬಾ ಜಾತ್ರೆಗೆ ಯಶವಂತಪುರ-ತಾಳಗುಪ್ಪ 2 ಸ್ಪೆಷಲ್ ರೈಲುಗಳು | ಹೀಗಿದೆ ಡೀಟೇಲ್ಸ್

January 31, 2026
ಸಂಘಟನಾ ಹಿನ್ನೆಲೆ | ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸರಣಿ ಸಭೆ

ಸಂಘಟನಾ ಹಿನ್ನೆಲೆ | ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸರಣಿ ಸಭೆ

February 6, 2026
ಸ್ಮಾರ್ಟ್ ಹೂಡಿಕೆದಾರರು ಅಗತ್ಯವಿಲ್ಲದಿದ್ದರೂ ಏಕೆ ಸಾಲ ಪಡೆಯುತ್ತಿದ್ದಾರೆ?

ಸ್ಮಾರ್ಟ್ ಹೂಡಿಕೆದಾರರು ಅಗತ್ಯವಿಲ್ಲದಿದ್ದರೂ ಏಕೆ ಸಾಲ ಪಡೆಯುತ್ತಿದ್ದಾರೆ?

February 6, 2026
ಆತ ಶೇ.90ರಷ್ಟು ಅಂಗವಿಕಲ, ಆದರೆ ಎಸಗಿದ್ದು ಅತ್ಯಾಚಾರ | ಈಗ 20 ವರ್ಷ ಕಂಬಿ ಹಿಂದೆ ಫಿಕ್ಸ್

ಆತ ಶೇ.90ರಷ್ಟು ಅಂಗವಿಕಲ, ಆದರೆ ಎಸಗಿದ್ದು ಅತ್ಯಾಚಾರ | ಈಗ 20 ವರ್ಷ ಕಂಬಿ ಹಿಂದೆ ಫಿಕ್ಸ್

February 6, 2026
ಶಿಕಾರಿಪುರ | ಮನೆಯಲ್ಲೇ ಅಕ್ರಮ ಬಂದೂಕು ತಯಾರಿ | ಆರೋಪಿ ಬಂಧನ | ಏಳು ಬಂದೂಕು ವಶ

ಶಿಕಾರಿಪುರ | ಮನೆಯಲ್ಲೇ ಅಕ್ರಮ ಬಂದೂಕು ತಯಾರಿ | ಆರೋಪಿ ಬಂಧನ | ಏಳು ಬಂದೂಕು ವಶ

February 6, 2026
ಕರೂರು ಕಾಲ್ತುಳಿತ ಪ್ರಕರಣ | ಟಿವಿಕೆ ಮುಖ್ಯಸ್ಥ, ನಟ ವಿಜಯ್’ಗೆ ಸಿಬಿಐ 2ನೇ ಸುತ್ತಿನ ವಿಚಾರಣೆ

ಟಿವಿಕೆ ಮುಖ್ಯಸ್ಥ, ನಟ ವಿಜಯ್’ಗೆ 1.5 ಕೋಟಿ ಐಟಿ ದಂಡ | ನ್ಯಾಯಾಲಯದಲ್ಲೂ ಹಿನ್ನಡೆ

February 6, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL