ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಗದಗದಲ್ಲಿ ನಡೆದ ಮಹಿಳೆಯೊಬ್ಬರ ಭೀಕರ ಹತ್ಯೆಗೆ ಶಿವಮೊಗ್ಗದ ನಂಟಿ ಸಾಬೀತಾಗಿದ್ದು, ಕ್ಷುಲ್ಲಕ ಕಾರಣಕ್ಕೆ ದೊಡ್ಡಮ್ಮನನ್ನೇ ಯುವಕನೊಬ್ಬ ಹತ್ಯೆ ಮಾಡಿದ್ದಾನೆ.
ನ.11ರಂದು ಗದಗದ ಕೆಸಿ ಠಾಣೆ ರಸ್ತೆಯ ನಿವಾಸಿ ಪುಷ್ಪಾ ಎನ್ನುವವರ ಹತ್ಯೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲು ವಿಶೇಷ ತನಿಖಾ ತಂಡವನ್ನು ರಚನೆ ಮಾಡಲಾಗಿತ್ತು. ಪ್ರಕರಣವನ್ನು ಬೇಧಿಸಿದ ಪೊಲೀಸರು ಶಿವಮೊಗ್ಗದ ಧನುಷ್ ಹಾಗೂ ವಿನಯ್ ಎಂಬ ಇಬ್ಬರನ್ನು ಬಂಧಿಸಿದ್ದಾರೆ.
ಕಾರಣವೇನು?
ಕೊಲೆಯಾದ ಪುಷ್ಪಾ ಅವರು ಆರೋಪಿ ಧನುಷ್’ನ ದೊಡ್ಡಮ್ಮ ಆಗಿದ್ದಾರೆ. ಪುಷ್ಪಾ ಅವರು ಆರೋಪಿಯ ತಾಯಿಗೆ ಕರೆ ಮಾಡಿ ನಿನ್ನ ಮಗನಿಗೆ ಸರಿಯಾಗಿ ಕೆಲಸಕ್ಕೆ ಹಚ್ಚು, ಅವನಿಗೆ ಬುದ್ದಿ ಹೇಳು, ಮೊದಲೇ ನೀವು ಬಡವರು, ನಿನ್ನ ಮಗ ಹೀಗೆ, ತಿರುಗಾಡುತ್ತಿದ್ದರೆ ಮುಂದೆ ನಿಮ್ಮ ಗತಿ ಹೇಗೆ ಎಂದು ಬುದ್ದಿ ಹೇಳುತ್ತಿದ್ದರು. ಧನುಷ್ ತಾಯಿ ಆತನಿಗೆ ಕೆಲಸಕ್ಕೆ ಹೋಗು ಎಂದು ಒತ್ತಾಯ ಮಾಡುತ್ತಿದ್ದರು. ಇದರಿಂದ ಮನನೊಂದ ಧನುಷ್ ಇದಕ್ಕೆಲ್ಲಾ ತನ್ನ ದೊಡ್ಡಮ್ಮನೇ ಕಾರಣ ಎಂದು ಸಿಟ್ಟಿಗೆದ್ದು, ತನ್ನ ಸ್ನೇಹಿತ ವಿನಯ್ ಜೊತೆಗೂಡಿ ಗದಗಕ್ಕೆ ತೆರಳಿ ತನ್ನ ದೊಡ್ಡಮ್ಮನ ಮನೆಯಲ್ಲೇ ರಾತ್ರಿ ಉಳಿದಿದ್ದಾನೆ. ಮುಂಜಾನೆ ವೇಳೆ ಯಾರೂ ಇಲ್ಲದ ಸಮಯದಲ್ಲಿ ರುಬ್ಬುವ ಗುಂಡು ಕಲ್ಲಿನಿಂದ ಪುಷ್ಪಾ ಅವರ ತಲೆ ಜಜ್ಜಿ, ಕುತ್ತಿಗೆ ಕುಯ್ದು ಹತ್ಯೆ ಮಾಡಿ, ಮೈಮೇಲಿನ ಬಂಗಾರದ ಆಭರಣಗಳನ್ನು ಹೊತ್ತೊಯ್ದಿದ್ದರು.
ಅಂತಿವಾಗಿ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುವ ಗದಗ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಲೆಯಾದ ಪುಷ್ಪಾ ಅವರು ಶಿವಮೊಗ್ಗದ ನಾಗರಾಜ ಶೆಟ್ಟರ್ ಅವರ ಅತ್ತೆ(ಪತ್ನಿಯ ತಾಯಿ).
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post