ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಯುವಾ ಬ್ರಿಗೇಡ್ ಹಾಗೂ ಸೋದರಿ ನಿವೇದಿತ ಪ್ರತಿಷ್ಠಾನದ ವತಿಯಿಂದ ನ.29ರಂದು ‘ಎದೆ ಭಾಷೆ’ ಹೃದಯದ ನುಡಿ ಕನ್ನಡ ಎಂಬ ಅಪರೂಪದ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.
ಅಂದು ಬೆಳಗ್ಗೆ 9 ಗಂಟೆಯಿಂದ ಸಂಜೆಯವರೆಗೂ ದಿನ ಪೂರ್ತಿ ಕುವೆಂಪು ರಂಗಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದ್ದು, 10.30ರಿಂದ ಭಾಷೆಯ ಬೆಳವಣಿಗೆ, ವಿಭಿನ್ನತೆ ಮತ್ತು ಭಾಷಾ ವಿಜ್ಞಾನ ಎಂಬ ವಿಷಯದ ಕುರಿತು ವಿಚಾರಗೋಷ್ಠಿ ನಡೆಯಲಿದೆ.
ಚರ್ಚೆಯಲ್ಲಿ ಹಂಪಿ ಕನ್ನಡ ವಿವಿ ಕನ್ನಡ ಭಾಷಾಧ್ಯಯನ ವಿಭಾಗದ ಮುಖ್ಯಸ್ಥ ಡಾ.ವಿ. ಪಾಂಡುರಂಗ ಬಾಬು, ಧಾರವಾಡ ಕರ್ನಾಟಕ ವಿವಿ ಕನ್ನಡ ಭಾಷಾಧ್ಯಯನದ ಮುಖ್ಯಸ್ಥ ಡಾ.ಟಿ.ಎಂ. ಭಾಸ್ಕರ್, ಹಂಪಿ ವಿವಿ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಮಾಧವ ಪೆರಾಜೆ, ಬೀದರ್’ನ ಸಾಹಿತಿ ಶಿವಲಿಂಗ ಹೇಡೆ, ಚಿತ್ರಸಾಹಿತಿ-ಸಂಗೀತ ನಿರ್ದೇಶಕ ವಿ. ನಾಗೇಂದ್ರ ಪ್ರಸಾದ್, ಹಾಸ್ಯ ಕಲಾವಿದ ಮತ್ತು ಕುಂದಾಪುರ ಕನ್ನಡ ಭಾಷಾ ಪ್ರಚಾರಕ ಮನು ಹಂದಾಡಿ, ಸಾಹಿತಿ-ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಪಾಲ್ಗೊಳ್ಳಲಿದ್ದಾರೆ.
ಸಂಜೆ 5.30ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಉತ್ತರ ಕನ್ನಡ ಭಾಷಾ ಪ್ರತಿನಿಧಿ-ಸಾಹಿತಿ ಗಂಗಾವತಿ ಪ್ರಾಣೇಶ್, ಹಾಸ್ಯ ಕಲಾವಿದ ಮತ್ತು ಕುಂದಾಪುರ ಕನ್ನಡ ಭಾಷಾ ಪ್ರಚಾರಕ ಮನು ಹಂದಾಡಿ, ಚಿತ್ರಸಾಹಿತಿ-ಸಂಗೀತ ನಿರ್ದೇಶಕ ವಿ. ನಾಗೇಂದ್ರ ಪ್ರಸಾದ್, ಸಾಹಿತಿ-ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಪಾಲ್ಗೊಳ್ಳಲಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post