ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಗರದ ಹೊಸಮನೆ ಬಡಾವಣೆಯಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಉದ್ಯಾನವನ ನಿರ್ಮಾಣಕ್ಕೆ ಪಾಲಿಕೆ ಸದಸ್ಯೆ ರೇಖಾ ರಂಗನಾಥ್ ಅವರು ಇಂದು ಗುದ್ದಲಿಪೂಜೆ ನೆರವೇರಿಸಿದರು.
ಹೊಸಮನೆ ಬಡಾವಣೆಯ ಲಕ್ಷ್ಮೀ ಟಾಕೀಸ್ ಹತ್ತಿರ ಜೈಲ್ ರಸ್ತೆಯ ಚಾನೆಲ್ ಎಡಬಾಗದ ಸೇತುವೆ ಪಕ್ಕದಿಂದ ನಾಗಪ್ಪ ದೇವಸ್ಥಾನದ ವರಗೆ 260 ಮೀಟರ್ ಉದ್ದದ ಸಾರ್ವಜನಿಕರಿಗೆ ವಾಕಿಂಗ್ ಪಾರ್ಕ್, ಮಕ್ಕಳಿಗೆ ಆಟೋಪಕರಣಗಳು, ಜಿಮ್ ಉಪಕರಣಗಳುಳ್ಳ ಸುಸಜ್ಜಿತವಾದ 50 ಲಕ್ಷ ರೂ. ವೆಚ್ಚದ ಪಾರ್ಕ್ ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ಇದಕ್ಕೆ ಇಂದು ಗುದ್ದಲಿಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಯುವ ಮುಖಂಡರಾದ ಕೆ. ರಂಗನಾಥ್, ಕೆಪಿಸಿಸಿ ಕಾರ್ಯದರ್ಶಿ ಕೆ. ದೇವೇಂದ್ರಪ್ಪ, ಬಡಾವಣೆಯ ಮುಖಂಡರುಗಳಾದ ಜ್ಯೋತಿ ಅರಳಪ್ಪ, ಚಂದ್ರು ಗೆಡ್ಡೆ, ನಾಗರಾಜ್, ಶರತ್, ಚೇತನ್, ಪವನ್, ಸುನೀತ, ಸವಿತ ಮತ್ತು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ ಪ್ರವೀಣ್ ಕುಮಾರ್, ನಗರಾಧ್ಯಕ್ಷ ಎಚ್.ಪಿ. ಗಿರೀಶ್ ಯುವ ಕಾಂಗ್ರೆಸ್ ಮುಖಂಡರಾದ ಪುಷ್ಪಕ್ ಕುಮಾರ್ ಹಾಗೂ ಬಡಾವಣೆಯ ನಾಗರಿಕರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post