ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಚಿಕಿತ್ಸೆ ವೇಳೆ ಲೈಂಗಿಕ ಕಿರಕುಳ ನೀಡಲಾಗಿದೆ ಎಂದು ದೂರು ದಾಖಲಾದ ಹಿನ್ನೆಲೆಯಲ್ಲಿ ಮೂಲವ್ಯಾಧಿ ವೈದ್ಯರೊಬ್ಬರನ್ನು ಇಂದು ಬಂಧಿಸಲಾಗಿದೆ.
ಹಳೇನಗರದ ಖಾಜಿ ಮೊಹಲ್ಲಾದಲ್ಲಿ ಕ್ಲಿನಿಕ್ ಹೊಂದಿರುವ ಡಾ.ಅನಿಮೇಶ್ ಬಿಸ್ವಾಸ್ ಎಂಬಾತನ ಬಳಿಗೆ ಮಹಿಳೆಯೊಬ್ಬರು ಚಿಕಿತ್ಸೆಗಾಗಿ ಆಗಮಿಸಿದ್ದರು. ಈ ವೇಳೆ ಚಿಕಿತ್ಸೆ ನೀಡುವ ನೆಪದಲ್ಲಿ ವೈದ್ಯ ಅಸಭ್ಯವಾಗಿ ವರ್ತನೆ ಮಾಡಿದ್ದು, ಮಾನಸಿಕ ಹಾಗೂ ದೈಹಿಕ ಕಿರುಕುಳವಾಗಿದೆ ಎಂದು ಆ ಮಹಿಳೆ ಹಳೇನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರು ಪಡೆದ ಪೊಲೀಸರು ಎಫ್’ಐಆರ್ ದಾಖಲಿಸಿಕೊಂಡಿದ್ದು, ಡಾ.ಬಿಸ್ವಾಸ್’ನನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ವೈದ್ಯನನ್ನು ಕೋವಿಡ್19 ಪರೀಕ್ಷೆಗೆ ಒಳಪಡಿಸಲಾಗಿದ್ದು, ನಾಳೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದು ವರದಿಯಾಗಿದೆ.










Discussion about this post