ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ರಾಜ್ಯ ಬಿಜೆಪಿಯಲ್ಲಿ 24 ವಿವಿಧ ಮೋರ್ಚಾಗಳು ರಚನೆಯಾಗಿದ್ದು, ಒಟ್ಟಾರೆಯಾಗಿ ಸದ್ಯ 1 ಲಕ್ಷ ಕಾರ್ಯಕರ್ತರಿಗೆ ವಿವಿಧ ಪ್ರಕೋಷ್ಠಗಳಲ್ಲಿ ಅವಕಾಶ ಮಾಡಿಕೊಡಲು ಕಾರ್ಯತತ್ಪರಾಗಿದ್ದೇವೆ ಎಂದು ರಾಜ್ಯ ಬಿಜೆಪಿ ಮಾಧ್ಯಮ ಪ್ರಕೋಷ್ಠ ಸಂಯೋಜಕ ಎಂ.ಬಿ. ಭಾನುಪ್ರಕಾಶ್ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು, 24 ಮೋರ್ಚಾಗಳು ರಾಜ್ಯದಲ್ಲಿ ರಚನೆಯಾಗಿದೆ. ಕೆಲವು ಪ್ರಕೋಷ್ಠದ ಜೊತೆಯಲ್ಲಿ ಮಾಧ್ಯಮ ವಿಭಾಗ, ಸೋಷಿಯಲ್ ಮೀಡಿಯಾ, ಪ್ರಕಾಶನ ವಿಭಾಗಗಳನ್ನು ಮಾಡಿಕೊಳ್ಳಲಾಗಿದೆ. ಸಂಯೋಜಕರಾಗಿ ನನ್ನೊಂದಿಗೆ ದಾವಣಗೆರೆಯ ಡಾ.ಶಿವಯೋಗಿ ಸ್ವಾಮಿಯರನ್ನು ರಾಜ್ಯಾಧ್ಯಕ್ಷರು ನೇಮಕ ಮಾಡಿದ್ದಾರೆ ಎಂದರು.
ರಾಜ್ಯ ಸಮಿತಿಯಲ್ಲಿ 11, ಜಿಲ್ಲಾ ಸಮಿತಿಯಲ್ಲಿ 9 ಹಾಗೂ ಮಂಡಲ ಸಮಿತಿ 7 ಜನರನ್ನು ನೇಮಕ ಮಾಡಲಾಗಿದ್ದು, 50 ಸಾವಿರ ಕಾರ್ಯಕರ್ತರಿಗೆ ಸೇರಿಸುವ ಹೊಣೆಯಿದೆ. ಅಲ್ಲದೇ, ಬೂತ್ ಸ್ಥಳದವರೆಗೂ 1 ಲಕ್ಷ ಬಿಜೆಪಿ ಕಾರ್ಯಕರ್ತರಿಗೆ ಈ ಪ್ರಕೋಷ್ಠಗಳಲ್ಲಿ ಅವಕಾಶ ಮಾಡಿಕೊಡಲು ಪ್ರಯತ್ನ ಆರಂಭವಾಗಿದೆ ಎಂದರು.
ರಾಜ್ಯ ಸಮಿತಿಯ ಮೊದಲ ಸಭೆ ಡಿ.20ರಂದು ಬೆಂಗಳೂರಿನಲ್ಲಿ ನಡೆಯಲಿದೆ. ರಾಜ್ಯದಲ್ಲಿನ ಸಂಘಟನೆ ಕುರಿತಾಗಿ ಚರ್ಚೆ ನಡೆಯಲಿದೆ. ಸಮಾಜದ ಗಣ್ಯರು, ಪ್ರತಿಷ್ಠಿತರು ಹಾಗೂ ಪ್ರತಿಭಾನ್ವಿತರನ್ನು ಹುಡುಕಿ ಬಿಜೆಪಿಯೊಂದಿಗೆ ಸಂಯೋಜನೆ ಮಾಡಿಕೊಳ್ಳುವ ಪ್ರಯತ್ನ ನಡೆಯಲಿದೆ. ಮಾಧ್ಯಮದವರನ್ನೂ ಸಹ ಸೇರಿಸಿಕೊಳ್ಳಲಾಗುತ್ತಿದೆ. ಮುಂದಿನ ವರ್ಷದ ವೇಳೆಗೆ 1 ಲಕ್ಷ ಕಾರ್ಯಕರ್ತರಿಗೆ ಪ್ರಕೋಷ್ಠಗಳಲ್ಲಿ ಸೇರಿಸಿಕೊಳ್ಳುವ ಗುರಿಯಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post