ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ತಿರುಪತಿಗೆ ತೆರಳಿ ವಾಪಾಸಗುತ್ತಿದ್ದ ಕಾರೊಂದು ಪಲ್ಟಿಯಾದ ಪರಿಣಾಮ ಓರ್ವ ಸಾವನ್ನಪ್ಪಿರುವ ಘಟನೆ ತಾಲೂಕಿನ ಮೀರಾಸಾಬಿಹಳ್ಳಿ ಗೇಟ್ ಬಳಿ ನಡೆದಿದೆ.
ಪಾವಗಡ ರಸ್ತೆಯ ಕೈಮರದ ಬಳಿಯಲ್ಲಿ ಘಟನೆ ನಡೆದಿದ್ದು, ಮೃತನನ್ನು ಬ್ಯಾಡಗಿ ವಿದ್ಯಾನಗರದ ಕಾರು ಚಾಲಕ ಶಿವನಂದಯ್ಯ (34) ಎಂದು ಗುರುತಿಸಲಾಗಿದೆ.
ತಿರುಪತಿಗೆ ಹೋಗಿ ದೇವರ ದರ್ಶನ ಪಡೆದ ಪಾವಗಡ ಮೂಲಕ ಬ್ಯಾಡಗಿಗೆ ಬರುತ್ತಿದ್ದಾಗ ಪಾವಗಡ ರಸ್ತೆ ಮಿರಸಾಬಿಹಳ್ಳಿ ಗೇಟ್ ಕೈಮರದ ಬಳಿ ಕಾರು ಚಾಲಕ ಶಿವಾನಂದಯ್ಯ ಅತಿ ವೇಗ ಮತ್ತು ಅಜಾಗೃತಿಯಿಂದ ಕಾರು ಚಾಲನೆ ಮಾಡಿದ ಪರಿಣಾಮ ಅಪಘಾತ ಸಂಭವಿಸಿದೆ.

(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post