ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಚೈನಾ ಕೋವಿಡ್19 ಕೊಂಚ ಕಡಿಮೆಯಾಯಿತು ಎಂದು ನಿಟ್ಟುಸಿರು ಬಿಡುತ್ತಿರುವ ಬೆನ್ನಲ್ಲೇ, ಬ್ರಿಟನ್’ನಿಂದ ಆಗಮಿಸಿದ ನಾಲ್ವರಲ್ಲಿ ಕೊರೋನಾ ಸೋಂಕು ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.
ನಾಲ್ವರಲ್ಲಿ ಸೋಂಕು ದೃಢಪಟ್ಟಿದ್ದು, ಹೊಸ ರೂಪಾಂತರ ಕೊರೋನಾ ಪರೀಕ್ಷೆಗಾಗಿ ಬೆಂಗಳೂರು ಹಾಗೂ ಪೂನಾಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ. ಇಂದು ಸಂಜೆ ವೇಳೆಗೆ ವರದಿ ಜಿಲ್ಲಾಡಳಿತ ಕೈ ಸೇರುವ ನಿರೀಕ್ಷೆ ಇದೆ. ಹೊಸ ರೂಪಾಂತರ ವೈರಸ್ ಬಗ್ಗೆ ವರದಿ ಬಂದ ಬಳಿಕ ಮಾಹಿತಿ ಸಿಗಲಿದೆ.

ಒಂದೇ ಕುಟುಂಬದ ನಾಲ್ವರಿಗೆ ಕೋವಿಡ್ ಸೋಂಕು ತಗುಲಿದ್ದು, ಡಿ.21ರಂದು ಬ್ರಿಟನ್‌ನಿಂದ ಎಲ್ಲರೂ ನಗರಕ್ಕೆ ವಾಪಸ್ ಆಗಿದ್ದರು ಎಂದು ತಿಳಿದು ಬಂದಿದೆ. ನಾಲ್ವರನ್ನು ಮೆಗ್ಗಾನ್ ಆಸ್ಪತ್ರೆಯ ಕೋವಿಡ್ ವಾರ್ಡ್’ನಲ್ಲಿ ಐಸೋಲೇಶನ್ ಮಾಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















