ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕೊರೋನಾ ವೈರಸ್ ಹಾಗೂ ರೂಪಾಂತರಿ ಕೊರೋನಾ ವೈರಸ್ ಹರಡುವುದನ್ನು ತಡೆಯುವ ಸಲುವಾಗಿ ಬೆಂಗಳೂರು, ಮೈಸೂರು, ಕೊಡಗು ಸೇರಿದಂತೆ ರಾಜ್ಯದ ಎಲ್ಲ ಕಡೆಗಳಲ್ಲಿ ಹೊಸ ವರ್ಷದ ಪಾರ್ಟಿ ಮಾಡುವಂತಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನೈಟ್ ಕರ್ಫ್ಯೂ ಜಾರಿ ವಿಚಾರದಲ್ಲಿರುವ ಗೊಂದಲದ ಕುರಿತಾಗಿ ಮಾತನಾಡಿರುವ ಅವರು, ಹೊಸ ವರ್ಷಕ್ಕೆ ಮಾರ್ಗಸೂಚಿ ಕೊಡಲಾಗಿದ್ದು, ಡಿಜಿ, ಪೊಲೀಸ್ ಆಯುಕ್ತರು ಈಗಾಗಲೇ ಹೇಳಿದ್ದಾರೆ. ನಾನು ಅವರ ಜೊತೆ ಚರ್ಚೆ ಮಾತನಾಡಿದ್ದು, ಮಾರ್ಗಸೂಚಿ ಕಡ್ಡಾಯ ಪಾಲನೆಗೆ ಸೂಚಿಸಿದ್ದೇನೆ. ಚರ್ಚ್ ಸ್ಟ್ರೀಟ್, ಕೋರಮಂಗಲ, ಇಂದಿರಾ ನಗರದಲ್ಲಿ ಹೆಚ್ಚು ಸೇರುತ್ತಾರೆ. ಆದ್ದರಿಂದ ಈ ಕ್ರಮತೆಗೆದುಕೊಂಡಿದ್ದೇವೆ. ಸ್ಥಳೀಯ ಡಿಸಿಪಿಗಳಿಗೂ ಜವಾಬ್ದಾರಿ ಕೊಡಲಾಗಿದೆ ಎಂದರು.
ಪಬ್’ಗಳ ಮೇಲೆ ಗಮನಕ್ಕೆ ಡಿಸಿಪಿಗೆ ಕೊಟ್ಟಿದ್ದೇವೆ. ಎಲ್ಲೂ ಕೂಡ ಸಾರ್ವಜನಿಕವಾಗಿ ಪಾರ್ಟಿ ನಡೆಸುವಂತಿಲ್ಲ. ಮೈಸೂರು, ಕೂರ್ಗ್‌ನಲ್ಲಿ ಪಾರ್ಟಿಗೆ ಅವಕಾಶವಿಲ್ಲ. ಡಿಜೆ ಇಟ್ಟುಕೊಂಡು ಪಾರ್ಟಿ ಮಾಡುವುದಕ್ಕೆ ನಿರ್ಬಂಧವಿದ್ದು, ಈ ಬಗ್ಗೆ ಅಲ್ಲಿನ ಎಸ್ ಪಿಗಳಿಗೆ ಸೂಚನೆ ನೀಡಲಾಗಿದೆ. ಸಾರ್ವಜನಿಕರು ಸಹ ಸಹಕರಿಸಬೇಕು ಎಂದರು.
ಕೋವಿಡ್ ಮಧ್ಯೆ ಜನರನ್ನು ಸೇರಿಸಿಕೊಳ್ಳಬಾರದು. ಜನರ ಆರೋಗ್ಯದ ಪ್ರಶ್ನೆ ಇಲ್ಲಿದ್ದು, ಒಂದು ವರ್ಷ ಮನೆಯೊಳಗಿದ್ದರೆ ಸಮಸ್ಯೆಯಿಲ್ಲ ಎಂದರು.
ಇನ್ನು, ರೂಪಾಂತರಿ ವೈರಸ್ ಅಧಿಕೃತ ಮಾಹಿತಿ ಕೇಂದ್ರದಲ್ಲಿದೆ.ಕೇಂದ್ರ ಸರ್ಕಾರ ಸಂಪೂರ್ಣವಾಗಿ ಪರಿಶೀಲಿಸುತ್ತಿದ್ದು, ಐಸಿಎಂಆರ್, ಹೆಲ್ತ್ ಡಿಪಾರ್ಟ್ ಮೆಂಟ್ ಗಮನಿಸುತ್ತಿದೆ. ಕೇಂದ್ರ ಸರ್ಕಾರ ಸಿಎಂಗೆ ಸೂಚನೆ ನೀಡಲಿದ್ದು, ಆಗ ಸಿಎಂ ಇಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post