ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಂಗಳೂರು ವಿದ್ಯುತ್ಛಕ್ತಿ ಸರಬರಾಜು ಕಂಪನಿಯು ನಗರ ಉಪವಿಭಾಗ-2ರ ವ್ಯಾಪ್ತಿಯಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಹಾಗೂ ಕುಂಸಿ ಉಪವಿಭಾಗದ ಶ್ರೀರಾಂಪುರ ಶಾಖಾ ವ್ಯಾಪ್ತಿಯಲ್ಲಿ ನಿರಂತರ ಜ್ಯೋತಿ ಕಾಮಗಾರಿಯ ಪ್ರಗತಿಯಲ್ಲಿರುವುದರಿಂದ ಆಲ್ಕೋಳ 110/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎಎಫ್-13, ಎಎಫ್-19 ಮತ್ತು ಎಎಫ್-12 ಮಾರ್ಗಗಳ ವ್ಯಾಪ್ತಿಯಲ್ಲಿ ಬರುವ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಜ.16ರಂದು ಬೆಳಗ್ಗೆ 9 ಗಂಟೆಯಿಂದು ಸಂಜೆ 5.30ರವರೆಗೆ:
ಅಪ್ಪಾಜಿರಾವ್ ಕಾಂಪೌಚಿಡ್, ಕೋಟೆರಸ್ತೆ, ಓ.ಬಿ.ಎಸ್.ರಸ್ತೆ, ಸೈನ್ಸ್ ಫೀಲ್ಡ್ ರಸ್ತೆ, ಪೆನ್ಷನ್‌ಮೊಹಲ್ಲಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಜ.17ರಂದು ಬೆಳಗ್ಗೆ 9 ಗಂಟೆಯಿಂದು ಸಂಜೆ 5.30ರವರೆಗೆ:
ಗೆಜ್ಜೇನಹಳ್ಳಿ, ದೇವಕಾತಿಕೊಪ್ಪ ಬೋವಿಕಾಲೋನಿ, ಅಂಬೇಡ್ಕರ್ ನಗರ, ಭೈರನಕೊಪ್ಪ, ಹನುಮಂತ ನಗರ, ವೆರ್ಟನರಿ ಕಾಲೇಜ್, ಕ್ರಷರ್ಸ್ ವ್ಯಾಪ್ತಿ, ಆಲ್ಕೋಳ ಎಸ್.ಎಲ್.ವಿ ಲೇಔಟ್, ಜೆ.ಹೆಚ್.ಪಾಟೇಲ್ ಬಡಾವಣೆ, ಕೆ.ಎಸ್.ಆರ್.ಟಿ.ಸಿ ಲೇಔಟ್, ಸಂಗೋಳ್ಳಿರಾಯಣ್ಣ ಲೇಔಟ್, ನರಸಮ್ಮ ಲೇಔಟ್, ಸಹ್ಯಾದ್ರಿ ನಗರ ಆದರ್ಶನಗರ, ಪುಷ್ಪಗಿರಿ ಲೇಔಟ್, ಸೋಮಿನಕೊಪ್ಪ ವಿಜಯಲಕ್ಷೀ ಲೇಔಟ್, ಎಂ.ಎಂ.ಎಸ್ ಲೇಔಟ್, ಕೆ.ಹೆಚ್.ಬಿ ಲೇಔಟ್, ಮಹಾಲಕ್ಷೀ ಲೇಔಟ್, ಶಿವಸಾಯಿ ಕ್ಯಾಸ್ಟ್ ಪ್ಯಾಕ್ಟರಿ ಹಾಗೂ ಇನ್ನಿತರೆ ಸುತ್ತಮುತ್ತ ಪ್ರದೇಶಗಳ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post