ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಬಾಲಿವುಡ್’ನಲ್ಲಿ ಭಾರೀ ಬೇಡಿಕೆಯ ನಟಿಯಾಗಿ ಮಿಂಚಿ, ಸದ್ಯ ಸ್ಯಾಂಡಲ್’ವುಡ್’ಗೆ ಎಂಟ್ರಿ ಕೊಡುತ್ತಿರುವ ನಟಿ ಜಾಕ್ವಲಿನ್ ಫನಾಂಡಿಸ್ ಅವರು ಶಿವಮೊಗ್ಗದಲ್ಲಿ ವೀಕೆಂಡ್ ರಿಲ್ಯಾಕ್ಸ್ ಮೂಡಲ್ಲಿ ಎಂಜಾಯ್ ಮಾಡಿದ್ದಾರೆ.
ನಗರದಲ್ಲಿ ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ಐಷಾರಾಮಿ ಕಿಮ್ಮನೆ ರೆಸಾರ್ಟ್’ನಲ್ಲಿ ಎರಡು ದಿನಗಳಿಂದ ತಂಗಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ಬೆಸ್ಟ್ ವೀಕೆಂಡ್ ಎವರ್ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನು, ಅನೂಪ್ ಭಂಡಾರಿ ಅವರ ಫ್ಯಾಂಟಮ್ ಸಿನಿಮಾದ ಒಂದು ಹಾಡಿಗೆ ಹೆಜ್ಜೆ ಹಾಕಲು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದ್ದು, ಇದರ ಕುರಿತು ಅಧಿಕೃತ ಮಾಹಿತಿಯನ್ನು ಚಿತ್ರತಂಡ ಪ್ರಕಟಿಸಿಲ್ಲ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















