No Result
View All Result
ಪ್ರಧಾನಿ ನರೇಂದ್ರ ಮೋದಿಗೆ ರಾಮಚಂದ್ರಾಪುರ ಮಠದ ಶ್ರೀಗಳ ಅಭಿನಂದನೆ
English Articles

Ramachandrapura Seer Hails PM Narendra Modi’s Leadership

by ಕಲ್ಪ ನ್ಯೂಸ್
June 10, 2026
0

Kalpa Media House  |  Honavar/Sagara  | Jagadguru Shankaracharya Sri Raghaveshwara Bharathi Mahaswamiji of Ramachandrapura Math has extended his congratulations to...

Read moreDetails
ಬ್ರೇಕ್‌ಥ್ರೂ | ದೇಶ ಭದ್ರತೆಯ ಜೋಜಿಲಾ ಸುರಂಗ ಕಾಮಗಾರಿಯಲ್ಲಿ ಐತಿಹಾಸಿಕ ಸಾಧನೆ

MEIL Scripts Himalayan History with Final Breakthrough of Zojila Tunnel

June 9, 2026
ಸಾಗರ | ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗುವಿಗೆ ಹಾವು ಕಚ್ಚಿ ಸಾವು

18-Month-Old Girl Dies After Falling Into Water Tank in Bagalkot

June 9, 2026
2025–26ನೇ ಹಣಕಾಸು ವರ್ಷದಲ್ಲಿ ನೈಋತ್ಯ ರೈಲ್ವೆ ಗಳಿಸಿದ ಒಟ್ಟು ಆದಾಯವೆಷ್ಟು ಗೊತ್ತಾ?

ILCAD 2026 Observed in Mysuru Division; SWR Promotes Level Crossing Safety

June 9, 2026
ಬೆಂಗಳೂರು–ತುಮಕೂರು ರೈಲು ಮಾರ್ಗದ ವಿದ್ಯುತ್ ವ್ಯವಸ್ಥೆ ಮೇಲ್ದರ್ಜೆಗೆ | ₹162.57 ಕೋಟಿ ಅನುಮೋದನೆ

Indian Railways Sanctions ₹162.57 Crore Upgrade for Bengaluru–Tumakuru Rail Section

June 9, 2026
  • Advertise With Us
  • Grievances
  • About Us
  • Contact Us
Friday, June 12, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ ಭದ್ರಾವತಿ

ಸಂಸ್ಕಾರ ಸಂಸಾರದ ಮೂಲ ಆಧಾರ: ಹಿರೇಮಗಳೂರು ಕಣ್ಣನ್ ಅಭಿಮತ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
January 18, 2021
in ಭದ್ರಾವತಿ
0
ಸಂಸ್ಕಾರ ಸಂಸಾರದ ಮೂಲ ಆಧಾರ: ಹಿರೇಮಗಳೂರು ಕಣ್ಣನ್ ಅಭಿಮತ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಭದ್ರಾವತಿ: ಭಾಷೆ ಎಂಬುದು ಬಳಸಿದಷ್ಟೂ ಸಮೃದ್ಧಿಯಾಗಿ ಬೆಳೆಯುವ ಗುಣ ಹೊಂದಿರುವುದರಿಂದ ಪ್ರತಿಯೊಬ್ಬರೂ ಮನೆ-ಮನಗಳಲ್ಲಿ ಕನ್ನಡ ಭಾಷೆಯನ್ನು ಬಳಸುವ ಮನಃಸ್ಥಿತಿ ಬೆಳೆಸಿಕೊಂಡಾಗ ಕನ್ನಡ ಭಾಷೆ ಉಳಿದು ಬೆಳೆಯುತ್ತದೆ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದರು.

ತಾಲೂಕಿನ ದೇವರನರಸೀಪುರದ ಶ್ರೀರಂಗನಾಥ ಸ್ವಾಮಿ ದೇವಾಲಯದಲ್ಲಿ ತಾಲೂಕು ವೈಷ್ಣವ ಪರಿಷತ್ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ ನಡೆದ ರಂಗನಾಥ ಸ್ವಾಮಿ ಗೊದಾದೇವಿ ಕಲ್ಯಾಣೋತ್ಸವದಲ್ಲಿ ಭಾಗವಹಿಸಿದ್ದ ಅವರು ನಂತರ ಸಂಸಾರ-ಸಂಸ್ಕಾರ ಎಂಬ ವಿಷಯದ ಕುರಿತಂತೆ ಏರ್ಪಡಿಸಿದ್ದ ಹರಟೆ ವಿಶೇಷ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ವೈಯಕ್ತಿಕವಾಗಿ ಅವರವರ ಕೌಟುಂಬಿಕ ಭಾಷೆ ಯಾವುದೇ ಆಗಿದ್ದರೂ ಪ್ರತಿ ಮನೆಯಲ್ಲೂ ನಾಡ ಭಾಷೆಯಾದ ಕನ್ನಡವನ್ನು ಮಾತನಾಡಬೇಕು. ಆಗಷ್ಟೇ ನಮ್ಮ ಭಾಷೆ ವೈವಿಧ್ಯತೆ ಮತ್ತಷ್ಟು ಶ್ರೀಮಂತವಾಗುತ್ತದೆ ಎಂದರು.

ಇಂದು ನಡೆದ ಸಂಸಾರ-ಸಂಸ್ಕಾರ ಹರಟೆ ಕಾರ್ಯಕ್ರಮದ ಸಂಪೂರ್ಣ ವೀಡಿಯೋ ಸದ್ಯದಲ್ಲೇ ನಿರೀಕ್ಷಿಸಿ ನಿಮ್ಮ ಕಲ್ಪ ಯೂಟ್ಯೂಬ್ ಚಾನಲ್’ನಲ್ಲಿ…

ಕುಟುಂಬಕ್ಕೆ ಸಂಸಾರವು ತಳಪಾಯವಾದರೆ, ಸಂಸಾರಕ್ಕೆ ಧರ್ಮಯುತವಾದ ಸಂಸ್ಕಾರವೇ ತಳಹದಿ ಎಂಬುದನ್ನು ಯಾರೂ ಮರೆಯಬಾರದು. ಮಕ್ಕಳಿಗೆ ಪೋಷಕರು ಚಿಕ್ಕ ವಯಸ್ಸಿನಲ್ಲಿಯೇ ಹಿಂದೂ ಹಾಗೂ ಭಾರತೀಯ ಸಂಸ್ಕೃತಿಯ ಆಚಾರ ವಿಚಾರಗಳನ್ನು ಅವರಲ್ಲಿ ಭಿತ್ತಬೇಕು. ಅದರಿಂದ ಆ ಮಕ್ಕಳು ಉತ್ತಮ ಸುಸಂಸ್ಕೃತವಾದ ವ್ಯಕ್ತಿತ್ವವನ್ನು ಹೊಂದುವುದರ ಜೊತೆಗೆ ಕುಟುಂಬದಲ್ಲಿ ಹಾಗೂ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಎಲ್ಲರ ಗೌರವಾಧರಗಳಿಗೆ ಪಾತ್ರರಾಗಿ ರೂಪುಗೊಳ್ಳಲು ಸಹಕಾರಿಯಾಗುತ್ತದೆ ಎಂದರು.


ಹರಟೆ ಕಾರ್ಯಕ್ರಮದಲ್ಲಿ ಮತ್ತೋರ್ವ ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಚಿಕ್ಕಮಗಳೂರಿನ ಸಂಸ್ಕೃತಿ ಚಿಂತಕರಾದ ನಾಗಶ್ರೀ ತ್ಯಾಗರಾಜ್, ಸಂಸಾರಕ್ಕೆ ಸಂಸ್ಕಾರ ತಳಪಾಯವಾದರೆ, ಅಂತಹ ಸಂಸ್ಕಾರವನ್ನು ಮನೆಯಲ್ಲಿ ಮಕ್ಕಳಿಗೆ ಕಲಿಸುವ ಹೆಣ್ಣು ಕುಟುಂಬದ ಕಣ್ಣಿದ್ದಂತೆ. ತಾಯಿ, ಸಹೋದರಿ, ಪತ್ನಿ ಈ ರೀತಿ ವಿವಿಧ ಸಂಬಂಧಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಮನೆಯ ಪ್ರತಿಯೊಬ್ಬ ಸದಸ್ಯರಿಗೂ ಹಬ್ಬ, ಹರಿದಿನ, ಪೂಜೆ ಪುನಸ್ಕಾರ ಸೇರಿದಂತೆ ಸಂಸ್ಕಾರದ ರೀತಿ ರಿವಾಜುಗಳನ್ನು ಸ್ವತಃ ತಾನು ಆಚರಿಸಿ ಅವರಿಗೆ ಹೇಳಿ ಕೊಡುತ್ತಾಳೆ. ಹೆಣ್ಣು ಸಂಸಾರ ಮತ್ತು ಸಂಸ್ಕಾರದ ತಳಪಾಯವಿದ್ದಂತೆ. ಮಹಿಳೆಯಿಲ್ಲದ ಮನೆಯಲ್ಲಿ ಸಂಸ್ಕಾರದ ಕೊರತೆ ಎದ್ದು ಕಾಣುತ್ತದೆ. ಆದ್ದರಿಂದ ಮಹಿಳೆ ಸಂಸಾರ-ಸಂಸ್ಕಾರ ಎರಡರ ನಡುವಿನ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾಳೆ ಎಂದರು.

ಶಿವಮೊಗ್ಗ ಗುರುಗುಹ ಸಂಗೀತ ವಿದ್ಯಾಲಯದ ವಿದ್ವಾನ್ ಶೃಂಗೇರಿ ನಾಗರಾಜ್ ಮಾತನಾಡಿ, ಒಂದು ಗೃಹ ಸಂಫೂರ್ಣವಾಗಬೇಕಾದರೆ ಗೃಹಣಿ ಇರಲೇಬೇಕು. ಪ್ರತಿಯೊಬ್ಬ ಮನುಷ್ಯನೂ ಧರ್ಮ, ಅರ್ಥ, ಕಾಮಗಳನ್ನು ದಾಟಿ ಮೋಕ್ಷದೆಡೆಗೆ ಹೋಗಬೇಕು ಎಂದರೆ ಅದಕ್ಕೆ ಗೃಹಣಿ ಅತ್ಯವಶ್ಯಕ. ಇಂತಹ ಸ್ತ್ರೀಯ ಮಹತ್ವವನ್ನು ಪ್ರತಿಯೊಬ್ಬರೂ ಅರಿತು, ಆಕೆಗೆ ಗೌರವ ನೀಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ವೈಷ್ಣವ ಪರಿಷತ್ ಅಧ್ಯಕ್ಷರಾದ ಜಗನ್ನಾಥ ಭಟ್ ವಹಿಸಿದ್ದರು. ಚಿಕ್ಕಮಗಳೂರು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ತ್ಯಾಗರಾಜ್ ಜ್ಯೋತಿ ಬೆಳಗುವ ಮೂಲಕ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೈಷ್ಣವ ಪರಿಷತ್ ಜಿಲ್ಲಾಧ್ಯಕ್ಷರಾದ ಕೃಷ್ಣಸ್ವಾಮಿ ಅವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶ್ರೀ ರಂಗನಾಥ ಸ್ವಾಮಿ ಕಲ್ಯಾಣೋತ್ಸವ
ಭಾನುವಾರ ಬೆಳಿಗ್ಗೆ ವೇದ, ದಿವ್ಯ ಪ್ರಬಂಧ, ವಿಷ್ಣು ಸಹಸ್ರನಾಮ ಪಾರಾಯಣ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿ ನಂತರ ಶ್ರೀಗೋದಾದೇವಿ ಹಾಗೂ ಭೂನೀಳಾ ಸಮೇತನಾದ ಶ್ರೀರಂಗನಾಥ ಸ್ವಾಮಿಗೆ ವಿಶೇಷ ಅಲಂಕಾರ ಮಾಡಿ ಕಲ್ಯಾಣೋತ್ಸವ, ಉಯ್ಯಾಲೆ ಸೇವೆ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.
ಶ್ರೀ ತುಳಸಿ ಕಲ್ಯಾಣ
ಇದೇ ಸಂದರ್ಭದಲ್ಲಿ ಶ್ರೀಕೃಷ್ಣ ತುಳಸಿ ವಿವಾಹವನ್ನೂ ಸಹ ನಡೆಸಲಾಯಿತು. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ದೇವಾಲಯದ ಅರ್ಚಕರು ಹಾಗೂ ಸಮಿತಿಯವರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು.

ಪುಟ್ಟ ಗ್ರಾಮದಲ್ಲಿ ಇಂತಹ ವಿಶೇಷ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ್ದ ದೇವಾಲಯದ ಅರ್ಚಕರನ್ನು ಕಣ್ಣನ್ ಹಾಗೂ ಅವರ ತಂಡದವರು ಸನ್ಮಾನಿಸಿ ಗೌರವಿಸಿದರು.

ಪ್ರಮುಖರಾದ ನರಸಿಂಹಾಚಾರ್, ಸುದರ್ಶನ್, ನರಸಿಂಹ ಮೂರ್ತಿ, ರವಿ, ವೆಂಕಟೇಶ್, ಚೆಲುವರಾಜ್, ಯೋಗೀಶ್, ಶಾಸಕರ ಸಹೋದರ ಜಗನ್ನಾಥ್, ಹಿರೇಮಗಳೂರಿನ ಋತ್ವಿಜರ ತಂಡದವರು ಪಾಲ್ಗೊಂಡಿದ್ದರು.

ಇಡಿಯ ಕಾರ್ಯಕ್ರಮಕ್ಕೆ ಇಡಿಯ ಗ್ರಾಮಸ್ಥರು ಸಹಕಾರ ನೀಡಿದ್ದು, ಆಯೋಜಕರು ಧನ್ಯವಾದ ಹೇಳಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: BhadravathiHiremagaluru KannanKannada News WebsiteLatest News KannadaLocal NewsMalnad NewsShimogaShivamoggaShivamogga Newsಕಲ್ಯಾಣೋತ್ಸವತುಳಸಿ ಕಲ್ಯಾಣಭದ್ರಾವತಿಭಾರತೀಯ ಸಂಸ್ಕೃತಿಶಿವಮೊಗ್ಗಹಿರೇಮಗಳೂರು ಕಣ್ಣನ್
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಭದ್ರಾವತಿಯಲ್ಲಿ ಉತ್ತಮ ಗುಣಮಟ್ಟದ ಎಲೆಕ್ಟ್ರಿಕಲ್ ಸಾಮಗ್ರಿಗಳ ಆರ್ಯ ಎಲೆಕ್ಟ್ರಿಕಲ್ಸ್‌ ಶುಭಾರಂಭ

Next Post

ಖ್ಯಾತ ಬಾಲಿವುಡ್ ನಟಿ ಜಾಕ್ವಲಿನ್ ಫರ್ನಾಂಡಿಸ್ ಶಿವಮೊಗ್ಗಕ್ಕೆ ಬಂದಿದ್ದೇಕೆ? ಮಲೆನಾಡ ಬಗ್ಗೆ ಏನೆಂದರು?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಖ್ಯಾತ ಬಾಲಿವುಡ್ ನಟಿ ಜಾಕ್ವಲಿನ್ ಫರ್ನಾಂಡಿಸ್ ಶಿವಮೊಗ್ಗಕ್ಕೆ ಬಂದಿದ್ದೇಕೆ? ಮಲೆನಾಡ ಬಗ್ಗೆ ಏನೆಂದರು?

ಖ್ಯಾತ ಬಾಲಿವುಡ್ ನಟಿ ಜಾಕ್ವಲಿನ್ ಫರ್ನಾಂಡಿಸ್ ಶಿವಮೊಗ್ಗಕ್ಕೆ ಬಂದಿದ್ದೇಕೆ? ಮಲೆನಾಡ ಬಗ್ಗೆ ಏನೆಂದರು?

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಜೀ ಕನ್ನಡದಲ್ಲಿ ಈ ವಾರ ದೈವಿಕ ವಾರ | ಕಲಿಯುಗದ ಕಲ್ಪತರು ಶ್ರೀ ಗುರು ರಾಘವೇಂದ್ರ ತೀರ್ಥ ಆಗಮನ..

ಜೀ ಕನ್ನಡದಲ್ಲಿ ಈ ವಾರ ದೈವಿಕ ವಾರ | ಕಲಿಯುಗದ ಕಲ್ಪತರು ಶ್ರೀ ಗುರು ರಾಘವೇಂದ್ರ ತೀರ್ಥ ಆಗಮನ..

June 12, 2026
Heavy Rain in Karnataka

ಕರ್ನಾಟಕದಲ್ಲಿ ಮಳೆ ಅಬ್ಬರ | ಕರಾವಳಿ ಸೇರಿ ಹಲವೆಡೆ ಯೆಲ್ಲೋ ಅಲರ್ಟ್ ಘೋಷಣೆ

June 12, 2026
Attack on indian ships

ಒಮಾನ್ ಕರಾವಳಿಯಲ್ಲಿ ಹಡಗುಗಳ ಮೇಲೆ ದಾಳಿ: ಅಮೆರಿಕ ರಾಜತಾಂತ್ರಿಕರನ್ನು ಕರೆಸಿ ಭಾರತ ಆಕ್ಷೇಪ

June 12, 2026
Murder In Shivamogga

ಶಿವಮೊಗ್ಗದಲ್ಲಿ ಹಾಡಹಗಲೇ ರೌಡಿಶೀಟರ್‌ ನರಸಿಂಹನ ಭೀಕರ ಹತ್ಯೆ

June 12, 2026
450 Doctors Fined 15 Lakhs

ಗ್ರಾಮೀಣ ಸೇವೆಗೆ ಗೈರು: 450ಕ್ಕೂ ಹೆಚ್ಚು ಎಂಬಿಬಿಎಸ್ ವೈದ್ಯರಿಗೆ ₹15 ಲಕ್ಷ ದಂಡ

June 12, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL