ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸಾಗರ: ಮನೆಯ ಮುಂದಿನ ಬಾವಿ ಕಟ್ಟೆ ಮೇಲೆ ಓದುತ್ತಾ ಕುಳಿತಿದ್ದ ವಿದ್ಯಾರ್ಥಿನಿಯೊಬ್ಬಳು ಆಯತಪ್ಪಿ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ತ್ಯಾಗರ್ತಿಯ ತನ್ನ ನಿವಾಸಿ ಮೇಘರಾಜ್ ಅವರ ಪುತ್ರಿ ಅಂಜಲಿ(19) ಎಂಬಾಕೆಯೇ ಮೃತ ದುರ್ದೈವಿ.
ಉಳ್ಳೂರಿನ ಸಾಗರ ಗಂಗೋತ್ರಿ ನರ್ಸಿಂಗ್ ಕಾಲೇಜಿನಲ್ಲಿ ಬಿಎಸ್’ಸಿ ನರ್ಸಿಂಗ್ ಕಲಿಯುತ್ತಿದ್ದ ಅಂಜಲಿ ಮನೆಯ ಮುಂಭಾಗದಲ್ಲಿರುವ ಬಾವಿಕಟ್ಟೆಯ ಮೇಲೆ ಕುಳಿತು ಓದುತ್ತಿದ್ದಳು. ಈ ವೇಳೆ ಆಯತಪ್ಪಿ ಬಾವಿಗೆ ಬಿದ್ದ ಆಕೆ ಸಾವನ್ನಪ್ಪಿದ್ದಾಳೆ.
ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news















