ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಂಗಳೂರು ವಿದ್ಯುತ್ಛಕ್ತಿ ಸರಬರಾಜು ಕಂಪನಿಯು ನಗರ ಶಂಕರ ಮಠ ಮುಖ್ಯ ರಸ್ತೆ (ಸಂಗೋಳ್ಳಿ ರಾಯಣ್ಣ ಫ್ಲೈ ಓವರ್ ನಿಂದ ಮಾರುತಿ ಷೋ ರೂಂವರೆಗೂ) ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾಡೆಲ್ ಸಬ್ ಡಿವಿಷನ್ ಯೋಜನೆಯಡಿ ಕೇಬಲ್ ಅಳವಡಿಕೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜ. 23 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ನ.ಉ.ವಿ-1ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿದ್ಯುತ್) ತಿಳಿಸಿದ್ದಾರೆ.
ಮೆಗ್ಗಾನ್ ವಿವಿ ಕೇಂದ್ರದ ವ್ಯಾಪ್ತಿಯಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಎ.ಆರ್.ಬಿ. ಕಾಲೋನಿ, ಅಶೋಕನಗರ, ಡಿ.ಎ.ಆರ್. ಕ್ವಾಟ್ರಸ್, ಸರ್ಕ್ಯೂಟ್ ಹೌಸ್, ಎಸ್.ಪಿ. ಕಚೇರಿ, ಸಾಗರ ಮುಖ್ಯರಸ್ತೆ, ಈಡಿಗರ ಭವನ, ಆಯನೂರು ಗೇಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜ. 23ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ನ.ಉ.ವಿ-3ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿದ್ಯುತ್) ತಿಳಿಸಿದ್ದಾರೆ.ಘಟಕ 6ರ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕಂಬಗಳನ್ನು ಅಳವಡಿಸುವ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಈ ಕೆಳಕಂಡ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಗೋಪಿಶೆಟ್ಟಿಹಳ್ಳಿ, ಇಲಿಯಾಜ್ ನಗರ 3 ರಿಂದ 12ನೆಯ ಕ್ರಾಸ್, ಸಿದ್ದೇಶ್ವರ ಸರ್ಕಲ್, ಚಾಲುಕ್ಯನಗರ, ಕೆ.ಎಚ್.ಬಿ. ಕಾಲೋನಿ, ಮಂಡಕ್ಕಿ ಭಟ್ಟಿ, ಮೇಲಿನ ತುಂಗಾನಗರ, ಕೆಳಗಿನ ಗೋಪಿಶೆಟ್ಟಿಕೊಪ್ಪ, ಅಣ್ಣಾನಗರ, ಅರಕೆರೆ, ಮಂಜುನಾಥ ರೈಸ್‌ಮಿಲ್, ಶಂಕರ ಕಣ್ಣಿನ ಆಸ್ಪತ್ರೆ, ನಾರಾಯಣ ಹೃದಯಾಲಯ ಮತ್ತು ಅದರ ಹಿಂಭಾಗದ ಪ್ರದೇಶಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಮತ್ತು ಕಲ್ಲೂರು ಮಂಡ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಜ.23ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ನ.ಉ.ವಿ.-2ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post