ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಸುಚೇತನ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸುಭಾಷಿಣಿ ವೈದ್ಯನಾಥ್ ನಿರ್ಮಾಣದ ಹಿರಿಯ ನಿರ್ದೇಶಕ ವೈದ್ಯನಾಥ್ ಅವರ ನಿರ್ದೇಶನದ ತಲಾಖ್ ತಲಾಖ್ ತಲಾಖ್ ಸಿನಿಮಾ ಈ ವಾರ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದ್ದು, ಶಿವಮೊಗ್ಗೆಯ ಸಿಟಿ ಸೆಂಟರ್ ಮಾಲ್‌ನ ಭಾರತ್ ಸಿನಿಮಾಸ್‌ನಲ್ಲಿ ಪ್ರತಿದಿನ ಸಂಜೆ 5.00ಕ್ಕೆ ಪ್ರದರ್ಶನಗೊಳ್ಳಲಿದೆ.
ಜೊತೆಗೆ ಅಮೆರಿಕಾದಲ್ಲಿಯೂ ಸಹ ಏಕಕಾಲಕ್ಕೆ ತೆರೆ ಕಾಣಲಿದೆ. ವಿಶೇಷವೆಂದರೆ, ಈ ಚಿತ್ರದ ಸಂಪೂರ್ಣ ಚಿತ್ರೀಕರಣ ತೀರ್ಥಹಳ್ಳಿ ಸುತ್ತಮುತ್ತಲಲ್ಲಿ ನಡೆದಿದ್ದು, ಶಿವಮೊಗ್ಗೆಯ ರಂಗಭೂಮಿ ಕಲಾವಿದರಾದ ವೈದ್ಯ ಶಿವಮೊಗ್ಗ, ವಿಜಯಲಕ್ಷ್ಮಿ, ಪದ್ಮಜಾ ಜೋಯಿಸ್ ಹಾಗೂ ತೀರ್ಥಹಳ್ಳಿಯ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಸಾಮಾಜಿಕ ಕಳಕಳಿಯ ಹಿನ್ನೆಲೆಯಲ್ಲಿ ಚಿತ್ರಿತವಾಗಿರುವ ಈ ಸಿನಿಮಾ, ನೂರ್‌ಝಹೀರ್‌ರವರ ಮೂಲ ಕಾದಂಬರಿ ಡಿನೈಡ್ ಬೈ ಅಲ್ಹಾಕೃತಿಯನ್ನು ಅಬ್ದುಲ್ ರೆಹಮಾನ್ ಪಾಷಾ ಅವರ ಕನ್ನಡಕ್ಕೆ ಅನುವಾದಿಸಿದ್ದು, ಈ ಕಥೆಯನ್ನು ಆಧರಿಸಿ, ಚಿತ್ರಕಥೆಯೊಂದಿಗೆ ಕೆ. ಎನ್. ವೈದ್ಯನಾಥ್ ಚಿತ್ರವನ್ನು ನಿರೂಪಿಸಿದ್ದಾರೆ. ಚಿತ್ರಕಥೆಗೆ ಅಬ್ದುಲ್ ರೆಹಮಾನ್ ಪಾಷಾ ಸಹಕರಿಸಿದ್ದಾರೆ.
ಚಿತ್ರಕ್ಕೆ ಹೆಸರಾಂತ ಛಾಯಾಗ್ರಾಹಕ ಅಶೋಕ್ ಕಶ್ಯಪ್ ಛಾಯಾಗ್ರಹಣ ನೀಡಿದ್ದು, ಹಿರಿಯ ಸಂಗೀತ ನಿರ್ದೇಶಕ ಪ್ರವೀಣ್ ಗೋಡ್ಖಿಂಡಿಯವರ ಸಂಗೀತ, ರಾಮಕೃಷ್ಣರವರ ಪ್ರಸಾಧನ, ಬಾಬು ಖಾನ್‌ರವರ ಕಲಾ ನಿರ್ದೇಶನ, ಮಧುಕರ ಬೆಲ್ಕವಾಡಿ, ಅಬ್ದುಲ್ ರಹಮಾನ್ ಪಾಷಾರವರ ಸಂಭಾಷಣೆ, ರಾಷ್ಟ ಪ್ರಶಸ್ತಿ ಪುರಸ್ಕೃತ ಸಂಕಲನಕಾರ ಸುರೇಶ್ ಅರಸ್ ರವರ ಸಂಕಲನವಿದೆ.
ಪ್ರಸಿದ್ಧ ಆರ್‌ಜೆ ಸುನೇತ್ರಾ ಪ್ರಮುಖ ಪಾತ್ರದಲ್ಲಿರುವ ಈ ಚಿತ್ರದ ನಾಯಕರಾಗಿ, ಸುಚೇತನ ಸ್ವರೂಪ್ ವೈದ್ಯ, ಸಮಂತ್ ವೈದ್ಯರವರು ಅಭಿನಯಿಸಿದ್ದಾರೆ.
ಪ್ರಮುಖ ಪಾತ್ರದಲ್ಲಿ ಶ್ರೀನಿವಾಸ್ ಮೂರ್ತಿ, ವೀಣಾ ಸುಂದರ್, ರವಿ ಭಟ್, ಇಮ್ತಿಯಾಜ್ ಬೇಗ್, ಕೆ.ವಿ. ಮಂಜಯ್ಯ, ತೇಜಸ್ವಿನಿ, ಲಕ್ಷ್ಮಿ, ಸೌಜನ್ಯ ಶೆಟ್ಟಿ, ಪಲ್ಲವಿ, ವಿದ್ಯಾ ಶ್ರೀನಿವಾಸ್ ಮೊದಲಾದವರಿದ್ದಾರೆ.
ಈ ಚಿತ್ರ ಈಗಾಗಲೇ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಜ್ಯೂರಿ ವಿಶೇಷ ಪ್ರಶಸ್ತಿಗೆ ಭಾಜನವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post