ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜ.30ರ ಶನಿವಾರ ಸಂಜೆ 6 ಗಂಟೆಗೆ ಪವಿತ್ರಾಂಗಣದಲ್ಲಿ ಡಿ.ವಿ.ಜಿ. ಅವರ ಕಾವ್ಯಾಧಾರಿತ ನೃತ್ಯ ಚಿತ್ರ ಗಾಯನ ಎಂಬ ಮೂರು ಕಲೆಗಳ ಸಂಯೋಗದ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಶ್ರೀವಿಜಯ ಕಲಾನಿಕೇತನ ಮತ್ತು ಅಭಿರುಚಿ ಸಂಸ್ಥೆಗಳು ಸಂಯುಕ್ತವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ.ಡಾ.ಕೆ.ಎಸ್. ಶುಭ್ರತಾ ಅವರು ಮಂಕುತಿಮ್ಮನ ಕಗ್ಗದ ಕುರಿತಾದ ನೃತ್ಯ ಪ್ರಾತ್ಯಕ್ಷಿಕೆಯನ್ನು ನೀಡಲಿದ್ದಾರೆ. ನಂತರ ಶ್ರೀ ಗುರುಗುಹ ಸಂಗೀತ ಮಹಾ ವಿದ್ಯಾಲಯದ ವಿದ್ವಾನ್ ಎಚ್.ಎಸ್. ನಾಗರಾಜ್ ಅವರ ಶಿಷ್ಯರಿಂದ ಅಂತಪುರ ಗೀತೆಗಳು ಎಂಬ ಸಂಗೀತ ಕಾರ್ಯಕ್ರಮ ನಡೆಯಲಿದೆ. ಯೋಗಾಚಾರ್ಯ ಶ್ರೀ ಲಕ್ಷ್ಮೀ ನಾರಾಯಣ್ ಕೌಶಿಕ್ ಅವರು ರಂಗದ ಮೇಲೆ ಈ ಗಾಯನಕ್ಕೆ ಚಿತ್ರ ರಚಿಸಲಿದ್ದಾರೆ.
ಅಭಿರುಚಿ ಸಂಸ್ಥೆಯ ಅಧ್ಯಕ್ಷರಾದ ಡಾ. ಶಿವರಾಮಕೃಷ್ಣ, ಶ್ರೀವಿಜಯದ ಅಧ್ಯಕ್ಷರಾದ ಡಾ.ಕೆ.ಆರ್. ಶ್ರೀಧರ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಕೋವಿಡ್ ನಿಯಮಗಳನ್ನನುಸರಿಸಿ ಸಹೃದಯರು ಪಾಲ್ಗೊಳ್ಳಬೇಕೆಂದು ಡಾ. ಪವಿತ್ರ ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post