ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಬಾಕಿ ಉಳಿದಿರುವ ನಗರದ ರಿಂಗ್ ರಸ್ತೆ ಅಭಿವೃದ್ಧಿ ಪೂರ್ಣಗೊಳಿಸಲು ಕೇಂದ್ರದಿಂದ ಅನುದಾನು ನೀಡುವಂತೆ ಸಂಸದ ಬಿ.ವೈ. ರಾಘವೇಂದ್ರ ಅವರು ಮನವಿ ಮಾಡಿದ್ದಾರೆ.
ಈ ಕುರಿತಂತೆ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿ, ಮಾತನಾಡಿದ ಅವರು, ಶಿವಮೊಗ್ಗ ನಗರಕ್ಕೆ ಅಗತ್ಯವಿರುವ ಹೊರವರ್ತುಲ ರಸ್ತೆಯ 15 ಕಿಲೋಮೀಟರ್ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರಾಧಿಕಾರದಿಂದ ಹಾಗೂ ನಾಲ್ಕು ಕಿಲೋಮೀಟರ್ ರಸ್ತೆ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಶಿವಮೊಗ್ಗ ವಿಭಾಗದಿಂದ ಬೈಪಾಸ್ ರಸ್ತೆಯನ್ನಾಗಿ ಆರಂಭಿಸಲು ಕ್ರಮ ವಹಿಸಲಾಗಿದೆ. ಬಾಕಿ ಉಳಿದ ಹೊರವರ್ತುಲ ರಸ್ತೆಯ 15 ಕಿಲೋಮೀಟರ್ ಉದ್ದದ ಭಾಗವನ್ನು ನಿರ್ಮಾಣ ಮಾಡಲು ಭೂಸ್ವಾದೀನ ವೆಚ್ಚದ ಶೇಕಡ 50ರಷ್ಟು ರಾಜ್ಯ ಸರ್ಕಾರ ನೀಡಿರುವುದರ ಬಗ್ಗೆ ತಿಳಿಸಿ, ಬಾಕಿ ಉಳಿದ ಭೂಸ್ವಾಧೀನದ ಅನುದಾನವನ್ನು ಕೇಂದ್ರ ಭೂಸಾರಿಗೆ ಮಂತ್ರಾಲಯದಿಂದ ದೊರಕಿಸಿಕೊಟ್ಟು ಕಾಮಗಾರಿಗೆ ಅಗತ್ಯವಿರುವ ಜೋಡಣೆ ನಕ್ಷೆಗೆ ತಕ್ಷಣ ಅನುಮೋದನೆ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news







Discussion about this post