ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ರಾಜ್ಯದಾದ್ಯಂತ ಕೊರೋನಾ ಸಂದರ್ಭದಲ್ಲಿ ಮುಚ್ಚಿದಂತಹ ಅಂಗನವಾಡಿ ಕೇಂದ್ರಗಳನ್ನು ಪುನರಾರಂಭ ಮಾಡಲು ಸರ್ಕಾರ ನಿರ್ಧರಿಸಿದ್ದು ಅದರಂತೆ ಸುಪೋಷನ್ ಅರಿವು ಕಾರ್ಯಕ್ರಮದಡಿ ಮಕ್ಕಳ ನಡಿಗೆ ಅಂಗನವಾಡಿ ಕಡೆಗೆ ಕಾರ್ಯಕ್ರಮವನ್ನು ಪಾಲಿಕೆ ವ್ಯಾಪ್ತಿಯ ಹೊಸಮನೆ ಬಡಾವಣೆಯಲ್ಲಿ ಮಹಾನಗರ ಪಾಲಿಕೆ ಸದಸ್ಯ ರೇಖಾ ರಂಗನಾಥ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಸರ್ಕಾರದ ಆದೇಶದಂತೆ ಹಿಂದಿನಿಂದ ಅಂಗನವಾಡಿ ಕೇಂದ್ರಗಳು ಪುನರ್ ಆರಂಭವಾಗಿದ್ದು ಪ್ರತಿನಿತ್ಯ ಐದು ಜನ ಮಕ್ಕಳಂತೆ ಹಾಗೂ ಮಕ್ಕಳ ಪೋಷಕರಿಗೆ ಆರೋಗ್ಯದ ಬಗ್ಗೆಅರಿವು ಮೂಡಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ವಿಜಯ, ಸುಷ್ಮಾ, ಬಾಲ ವಿಕಾಸ ಸಮಿತಿ ಅಧ್ಯಕ್ಷರಾದ ರೂಪ ಹಾಗೂ ಅಂಗನವಾಡಿ ಕಾರ್ಯಕರ್ತೆ ಶಾಂತ ಸಮಾಧಾನ ಸಹಾಯಕಿ ಗೌರಮ್ಮ ಮತ್ತು ಪೋಷಕರಾದ ಪ್ರಕಾಶ್ ನರಸಿಂಹ ಮಕ್ಕಳು ತಾಯಂದಿರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post