ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಬೊಮ್ಮನಕಟ್ಟೆ ಬಡಾವಣೆಯ ಮಕ್ಕಳು ರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ನೀಡಲು ಹಣ ಸಂಗ್ರಹಿಸಿ ಸಚಿವ ಈಶ್ವರಪ್ಪ ಅವರಿಗೆ ಹಸ್ತಾಂತರಿಸಿದ್ದಾರೆ.
ಅನುಶ್ರೀ ಮತ್ತು ಛಾಯಾಶ್ರೀ ಸಹೋದರಿಯರು ಪೋಷಕರು ನೀಡಿದ ಹಣವನ್ನು ಉಳಿತಾಯ ಮಾಡಿ, ಕೂಡಿಟ್ಟ ಹಣವನ್ನು ರಾಮಮಂದಿರ ನಿರ್ಮಾಣದ ನಿಧಿ ಸಂಗ್ರಹಕ್ಕೆ ದೇಣಿಗೆ ನೀಡಿದ್ದಾರೆ.
ಆ.5ರಂದು ರಾಮ ಜನ್ಮ ಭೂಮಿಗೆ ಪ್ರಧಾನಿ ಮೋದಿ ಭೂಮಿ ಪೂಜೆ ಮಾಡಿದ ವೇಳೆಯಿಂದ ಇಲ್ಲಿಯವರೆಗೆ ಸಂಗ್ರಹಿಸಿದ್ದ ಹಣವನ್ನು ಈ ಸಹೋದರಿಯರು ದೇಣಿಗೆ ನೀಡಿದ್ದಾರೆ. ಸಹೋದರಿಯರ ಕಾರ್ಯಕ್ಕೆ ಸಚಿವ ಕೆ.ಎಸ್. ಈಶ್ವರಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post