No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Wednesday, September 30, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಚಿಕ್ಕ ಬಳ್ಳಾಪುರ

ಚಿಕ್ಕಬಳ್ಳಾಪುರ: ಗುರುರಾಜ ಪೋ ಶೆಟ್ಟಿಹಳ್ಳಿ ಅವರಿಗೆ ಸಂಚಾರಿ ಕನಕ-ಪುರಂದರ ಪ್ರಶಸ್ತಿ ಪ್ರಧಾನ

kalpa News by kalpa News
February 14, 2021
in ಚಿಕ್ಕ ಬಳ್ಳಾಪುರ
0
ಚಿಕ್ಕಬಳ್ಳಾಪುರ: ಗುರುರಾಜ ಪೋ ಶೆಟ್ಟಿಹಳ್ಳಿ ಅವರಿಗೆ ಸಂಚಾರಿ ಕನಕ-ಪುರಂದರ ಪ್ರಶಸ್ತಿ ಪ್ರಧಾನ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಚಿಕ್ಕಬಳ್ಳಾಪುರ: ಜಿಲ್ಲೆಯ ಪುರಾಣ ಪ್ರಸಿದ್ಧ ತೀರ್ಥಕ್ಷೇತ್ರ ರಂಗಸ್ಥಳದ ಭೂ-ನೀಳಾ ಸಮೇತ ಮೋಕ್ಷ ಶ್ರೀರಂಗನಾಥ ದೇವಾಲಯದಲ್ಲಿ ಬೆಂಗಳೂರಿನ ಪುರಂದರ ಇಂಟರ್‌ನ್ಯಾಷನಲ್ ಟ್ರಸ್ಟ್ ವತಿಯಿಂದ ೨೨ನೇ ವರ್ಷದ ಪುರಂದರದಾಸರ ಪುಣ್ಯದಿನದ ಸಂಸ್ಮರಣೆಯಲ್ಲಿ ಅಂಕಣಕಾರ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅವರಿಗೆ ಸಂಚಾರಿ ಕನಕ-ಪುರಂದರ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಟ್ರಸ್ಟ್‌ನ ಕಾರ್ಯದರ್ಶಿ ಡಾ.ಸುವರ್ಣ ಮೋಹನ್ ಮಾತನಾಡಿ, ನಮ್ಮ ನಡುವಿನ ಸನಾತನ ಸಾಹಿತ್ಯ ವಕ್ತಾರ, ಸಂಸ್ಕೃತಿ ಮಾಲೆಯ ಸೃಜನಶೀಲ ಪುಸ್ತಕ ಸೊಗಸಿಗೆ ಅನೇಕ ಕೃತಿ ರಚಿಸಿ, ಸಾರಸ್ವತ ಕೈಂಕರ್ಯ ಮಾಡುತ್ತಿರುವ ಅನನ್ಯ ಅಕ್ಷರ ಪ್ರೇಮಿ ಗುರುರಾಜ ಪೋ ಶೆಟ್ಟಿಹಳ್ಳಿ ಅವರು ಉತ್ತಮ ಸಮಾಜದ-ವ್ಯಷ್ಠಿ ಸಮಷ್ಟಿ ನೀತಿಯನ್ನು ಬಯಸುತ್ತ, ಸಾಂಸ್ಕೃತಿಕ ಆಸ್ಥೆ ಇಟ್ಟುಕೊಂಡು ತಮ್ಮ ಬರಹಗಳಿಂದ ಪ್ರಸಿದ್ಧಿ ಪಡೆದವರು ಎಂದರು.ಹರಿದಾಸ ಸಂಸ್ಕೃತಿ ಪ್ರಚಾರ ಕೈಂಕರ್ಯವನ್ನು ನಿಸ್ವಾರ್ಥವಾಗಿ ಮಾಡುತ್ತಿರುವ ಯುವ ಲೇಖಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಅವರು, ವಿದ್ವಜ್ಜನರ ವ್ಯಾಪ್ತಿಯಲ್ಲಿ ಕಿರಿಯ ವಯಸ್ಸಿಗೆ ಸೇರ್ಪಟ್ಟು. ಜ್ಞಾನ ಸಾಂಗತ್ಯದಿಂದ ಓದುಗರಿಗೆ ಚಿರಪರಿಚಿತರಾಗಿ, ಸಾಮಾಜಿಕ ಕಳಕಳಿಯ ಅನೇಕ ಸಂಘ ಸಂಸ್ಥೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿರುವ ಸಾತ್ವಿಕ ಚೇತನ. ಇವರಿಗೆ ಟ್ರಸ್ಟ್‌ನ ವತಿಯಿಂದ ಪುರಸ್ಕರಿಸುತ್ತಿರುವುದು ದಾಸ ಸಾಹಿತ್ಯ ಪರಂಪರೆಯ ಶಿಖರ ಗೌರವವೆಂದು ಭಾವಿಸಿ ಅಭಿನಂದಿಸುತ್ತಿದ್ದೇವೆ ಎಂದರು.

ಆಧ್ಯಾತ್ಮಿಕತೆ ಭಾರತೀಯ ಪರಂಪರೆಯ ಜೀವನಾಡಿ. ಕರ್ನಾಟಕದ ಸಾಂಸ್ಕೃತಿಕ ಭೂಮಿಕೆಯಲ್ಲಿ ಎಲ್ಲರೂ ಮೆಚ್ಚುವಂತಹ ಒಂದು ಕವಲೆಂದರೆ ದಾಸ ಸಾಹಿತ್ಯ. ಕನ್ನಡ ಭಾಷೆಯ ಪ್ರಜ್ಞೆ , ಪ್ರಬುದ್ದತೆಗಳಿಗೊಂದು ಸಾಕ್ಷಿಯಾಗಿ, ಜನರು ಆಡುವ ಮಾತನ್ನೇ ಕಾವ್ಯದ ಮೌಲ್ಯಕ್ಕೆ ಏರಿಸಿದವರು ಪುರಂದರದಾಸರು. ಸಾಹಿತ್ಯಕ್ಕೆ ಸಂಗೀತದ ಸಾಹಚರ್ಯ ನೀಡಿ ಕರ್ನಾಟಕ ಸಂಗೀತಕೊಬ್ಬ ಗೌರವದ ಗುರುವಾಗಿ, ನೈತಿಕತೆಯ ನೆಲೆಗಟ್ಟಿನಲ್ಲಿ ಭಕ್ತಿ ತತ್ವದ ಪ್ರಚಾರಕನಾಗಿ, ದಾಸಸಾಹಿತ್ಯವನ್ನು ಅವರು ಶ್ರೀಮಂತಗೊಳಿಸಿದ್ದಾರೆ ಎಂದು ನುಡಿದರು.


ಆಧ್ಯಾತ್ಮ, ಕಲೆ, ಸಂಸ್ಕೃತಿಗಳ ಒಕ್ಕೂಟ ನಿರ್ಮಿಸಿದ ಆಕೃತಿಗಳಲ್ಲಿ ಭವ್ಯವಾದುದು ಪುರಂದರದಾಸರ ವ್ಯಕ್ತಿತ್ವ. ಅವರು ಬಾಳಿದ ಕಾಲವೇ ಹರಿದಾಸ ಸಾಹಿತ್ಯದ ವಸಂತಕಾಲ. ಅಂತರಂಗದ ನಡೆ ದಾಸರ ನುಡಿಕಟ್ಟಿನಲ್ಲಿ ಶಾಬ್ದಿಕ ಕಸರತ್ತಾಗದೆ ಅನುಭೂತಿಯ ಆವಿಷ್ಕಾರವಾಗಿ ಮೂಡಿ ಕನ್ನಡದ ಕನ್ನಡಿಯಲ್ಲಿ ಕಣ್ಣಿಗೆ ಕಟ್ಟುವಂತೆ ಪಡಿಮೂಡಿಸಿದ ಅನನ್ಯ ದೇಸಿ ಪ್ರತಿಭೆ. ಅಂತಹ ಹರಿಶರಣರಿಗೆ ನಮ್ಮ ನಮನ ಎಂದು ಹೇಳಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಲೇಖಕ ಡಾ. ಗುರುರಾಜ ಅವರು, ಕನ್ನಡಿಗರ ಆತ್ಮಶಕ್ತಿಯನ್ನು ಸದೃಢಗೊಳಿಸಿದ ಕನಕದಾಸರ ಜೀವನ ಮತ್ತು ಸಾಧನೆ ಬತ್ತಲಾರದ ಗಂಗೆ, ಸವೆಯಲಾರದ ಮಹಾಪರ್ವತ. ಸಾವಿಲ್ಲದ ಸಾಹಿತ್ಯದ ಮೂಲಕ ಚಿರಂತನ ಮೌಲ್ಯಗಳನ್ನು ನೀಡಿರುವ ಕನಕದಾಸರು ಮಾನವಕುಲ ಸಾಮರಸ್ಯ ಮತ್ತು ಸಮೃದ್ಧಿಯ ಸೆಲೆಯಾಗಬೇಕೆಂಬ ಕನಸು ಕಂಡವರು. ಆ ಕನಸಿನ ನನಸ್ಸಿಗಾಗಿ ಹೋರಾಡಿದವರು. ದೇಸಿಯ ಸತ್ವ-ತತ್ವದ ನೆಲೆ-ಬೆಲೆಯನ್ನು ತೆರೆದು ತೋರಿಸಿದವರು. ಜೀವನದಲ್ಲಿ ಕಷ್ಟ-ಸುಖಗಳೆಲ್ಲ ಬರುತ್ತವೆ. ಲೌಕಿಕ ಸುಖದ ಸುತ್ತಲೇ ಸಾಮಾನ್ಯರ ತಿಳಿವಳಿಕೆ ಸುತ್ತುತ್ತದೆ. ಇವುಗಳ ನಶ್ವರತೆ ತಿಳಿಯುವುದೇ ನಿಜವಾದ ಆಧ್ಯಾತ್ಮ. ಇದನ್ನು ಮೀರಿ ಯೋಚಿಸುವಂತೆ ಮನಸ್ಸು ಕೊಡು ಎಂಬುದು ಅವರು ಮಾಡಿಕೊಂಡ ಪ್ರಾರ್ಥನೆ ಎಂದು ಅಭಿಪ್ರಾಯಪಟ್ಟರು

ಕರುನಾಡ್ ಸೆಂಟರ್ ಫಾರ್ ಫರ್ಮಾನಿಂಗ್ ಆರ್ಟ್ಸ್ ನಿಧಾಗ್ ಕರುನಾಡ್ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಹಾಗೂ ಇದೇ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ಗೌರವ ಸರ್ಮಪಣೆ ಮಾಡಲಾಯಿತು. ಸಂಸ್ಥೆಯ ರೂವಾರಿ ಮೋಹನ್ ಕುಮಾರ್, ಪರಿಮಳ ರಾಮಕೃಷ್ಣ ರಾವ್ ಮೊದಲಾದವರು ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: BENGALURUKannada News WebsoteLatest Kannada NewsSri KanakadasaruSri Purandaradasaruಕನಕದಾಸರುಕರ್ನಾಟಕಚಿಕ್ಕಬಳ್ಳಾಪುರಪುರಂದರದಾಸರು
Share210Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಶಿವಮೊಗ್ಗ: ಎರಡು ದಿನಗಳ ರಾಜ್ಯಮಟ್ಟದ ಪುಟ್ಬಾಲ್ ಪಂದ್ಯಾವಳಿಗೆ ಚಾಲನೆ

Next Post

ಚಳ್ಳಕೆರೆ: ಸಂಚಾರಿ ನಿಯಮ ಪಾಲಿಸದಿದ್ದರೆ ದಂಡ ವಸೂಲಿ

kalpa News

kalpa News

Next Post
ಚಳ್ಳಕೆರೆ: ಸಂಚಾರಿ ನಿಯಮ ಪಾಲಿಸದಿದ್ದರೆ ದಂಡ ವಸೂಲಿ

ಚಳ್ಳಕೆರೆ: ಸಂಚಾರಿ ನಿಯಮ ಪಾಲಿಸದಿದ್ದರೆ ದಂಡ ವಸೂಲಿ

Leave a Reply Cancel reply

Your email address will not be published. Required fields are marked *

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL