ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಮುಂ ಹರ್ಬಲ್ ಮತ್ತು ಆಯುರ್ವೇದ ಕಷಾಯ (ಟೀ-ಚಹಾ)ಗಳಾದ ಹನ್ನೆರಡು ಬಗೆಯ ಸಾವಯವ ಚಹಾವನ್ನು ಭಾರತದ ಸಾವಯವ ಆಹಾರ ಬ್ರಾಂಡ್‌ನಲ್ಲಿ ಅಗ್ರಗಣ್ಯ ಸ್ಥಾನದಲ್ಲಿರುವ 24-ಮಂತ್ರ ಸಂಸ್ಥೆಯು ಮಾರುಕಟ್ಟೆಗೆ ಪರಿಚಯಿಸಿದೆ.
ಅಸ್ಸಾಂ ಟೀ, ಗ್ರೀನ್ ಟೀ, ತುಳಸಿ, ತುಳಸಿ ಹಸಿರು ಚಹಾ, ತುಳಸಿ ಶುಂಠಿ ಮತ್ತು ತುಳಸಿ ಶುಂಠಿ ಅರಿಶಿನ ಶ್ರೇಣಿಯ ಚಹಾಗಳೊಂದಿಗೆ, ಬೆಳಗಿನ ಉಪಾಹಾರವನ್ನು ದಿನದ ಯಾವುದೇ ಸಮಯದಲ್ಲಿ ಪೂರ್ಣಗೊಳಿಸಲು, ಜೀರ್ಣ, ಜೀರ್ಣಶಕ್ತಿ, ಪುನರ್ಚೈತನ್ಯ, ಶೀತ ಮತ್ತುಕೆಮ್ಮು ಅಥವಾ ತೂಕ ನಿರ್ವಹಣೆಗಾಗಿ ಈ ಚಹಾಗಳು ಅನೂಕೂಲವಾಗಲಿದೆ ಎಂದು ಹೇಳಲಾಗಿದೆ.

90ರೂ.ನಿಂದ 120ರೂ.ವರೆಗೆನ ರೆಡಿ-ಟು-ಕುಕ್ ಶ್ರೇಣಿಯು 200 ಗ್ರಾಂ ಚಹಾ ಪ್ಯಾಕ್‌ಗಳಲ್ಲಿ ಹಾಗೂ ಗಿಡಮೂಲಿಕೆ ಮತ್ತು ಆಯುರ್ವೇದಗಳು ತಲಾ 160ರೂ. ಮತ್ತು 250ರೂ ನಡುವೆ 25 ಚೀಲಗಳನ್ನು ಹೊಂದಿರುವ ಪ್ಯಾಕ್‌ಗಳಲ್ಲಿ ಲಭ್ಯವಿದೆ ಎನ್ನಲಾಗಿದೆ.
ಎಲ್ಲಾ ಉತ್ಪನ್ನಗಳು, ಎಲ್ಲಾ ಪ್ರಮುಖ ರಿಟೇಲ್ ಔಟ್ಲೆಟ್‌ಗಳಲ್ಲಿ ಮತ್ತು 24 ಮಂತ್ರ ಫಾರ್ಮ್ ಶಾಪ್‌ಗಳಲ್ಲಿ (ಪ್ರತ್ಯೇಕ ಮಳಿಗೆಗಳು) ಪಾನ್-ಇಂಡಿಯಾದಲ್ಲಿ ಲಭ್ಯವಿದೆ ಎಂದು ತಿಳಿಸಲಾಗಿದೆ.

ದೇಶಾದ್ಯಂತ ಮತ್ತು ಇತರ 50 ದೇಶಗಳಲ್ಲಿಯೂ ಸಹ 24-ಮಂತ್ರ ಬ್ರ್ಯಾಂಡ್‌ನ ಅಡಿಯಲ್ಲಿ ಮೂರು ವಿಶಾಲ ವಿಭಾಗಗಳಲ್ಲಿ 200ಕ್ಕೂ ಹೆಚ್ಚು ಸಾವಯವ ಆಹಾರ ಉತ್ಪನ್ನಗಳನ್ನು ಹೊಂದಿದ್ದು, ದೇಶಾದ್ಯಂತ 10,000ಕ್ಕೂ ಹೆಚ್ಚು ಔಟ್ ಲೆಟ್ ಗಳಲ್ಲಿ 24 ಮಂತ್ರವು ಹನ್ನೆರಡು ಬಗೆಯ ಸಾವಯವ ಚಹಾವನ್ನು ಮಾರುಕಟ್ಟೆಗೆ ಪರಿಚಯಿಸಿದೆ ಎಂದು ಸಂಸ್ಥೆ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















