ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಇಂದು ಬೆಳಗ್ಗೆ ಕುವೆಂಪು ರಸ್ತೆಯ ನಂಜಪ್ಪ ಆಸ್ಪತ್ರೆ ಎದುರಿನಲ್ಲಿ ಸಾಗುತ್ತಿರುವ ಅನೇಕ ದ್ವಿಚಕ್ರ ವಾಹನ ಸವಾರರು ಆಕಸ್ಮಿಕವಾಗಿ ಜಾರಿ ಬೀಳುತ್ತಿರುವ ದೃಶ್ಯ ಕಂಡು ಬಂದಿತು.
ವಾಹನ ಸವಾರರು ಜಾರಿ ಬೀಳಲು ಕಾರಣವೇನು ಎಂಬುದಕ್ಕೆ ದೊರೆಯುತ್ತಿರುವ ಉತ್ತರ ನಿಜಕ್ಕೂ ಆಶ್ಚರ್ಯ ತರುತ್ತದೆ. ಆಸ್ಪತ್ರೆ ಎದುರಿನಲ್ಲಿ ಇರುವ ಮರದ ಕಾಯಿ ನಿನ್ನೆ ರಾತ್ರಿ ಬಂದ ಮಳೆಗೆ ರಸ್ತೆಯ ಮೇಲೆ ಬಿದ್ದು, ಆ ಕಾಯಿಯ ಮೇಲೆ ಸಂಚಾರಿಸುವುದರಿಂದ ಅದರಲ್ಲಿನ ಎಣ್ಣೆಯ ಪಸೆಯನ್ನು ಹೊರ ಹಾಕುತ್ತಿದೆ. ಇದರ ಮೇಲೆ ವಾಹನಗಳು ಸಂಚಾರ ಮಾಡುವುದರಿಂದ ಅದು ಸ್ಕಿಡ್ ಆಗುತ್ತಿದೆ ಎನ್ನಲಾಗಿದೆ.
ಇದನ್ನು ಅರಿತ ಸಂಚಾರಿ ಪೊಲೀಸ್ ಮತ್ತು ಪಾಲಿಕೆ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ ರಸ್ತೆಯನ್ನು ಸ್ವಚ್ಛಗೊಳಿಸಿ, ಬ್ಯಾರಿಕೇಡ್ ನಿರ್ಮಿಸಿ ವಾಹನಗಳು ನಿಧಾನವಾಗಿ ಸಂಚರಿಸುವಂತೆ ಜಾಗ್ರತೆ ವಹಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post