ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: 2019ರ ಎಪ್ರಿಲ್ ತಿಂಗಳಿನಲ್ಲಿ ದ್ವಿಚಕ್ರ ವಾಹನ ಸವಾರರೊಬ್ಬರನ್ನು ಸುಲಿಗೆ ಮಾಡಿದ್ದ ಮೂವರು ದರೋಡೆಕೋರರನ್ನು ನ್ಯೂಟೌನ್ ಪೊಲೀಸರ ಬಂಧಿಸಿದ್ದಾರೆ.
ರಾತ್ರಿ ವೇಳೆಯಲ್ಲಿ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಬಿಎಚ್ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವ್ಯಕ್ತಿಯೊಬ್ಬರನ್ನು 3 ಜನ ಅಪರಿಚಿತ ವ್ಯಕ್ತಿಗಳು ಸೇರಿ ಅಡ್ಡಗಟ್ಟಿ ಅವರನ್ನು ಹೆದರಿಸಿ, ವ್ಯಕ್ತಿಯ ಬಳಿ ಇದ್ದ ಮೊಬೈಲ್ ಫೋನ್ ಮತ್ತು ಕೈ ಗಡಿಯಾರವನ್ನು ಕಿತ್ತುಕೊಂಡು ಹೋಗಿದ್ದ ಪ್ರಕರಣ ಇದಾಗಿದೆ.
ಶಿವಮೊಗ್ಗದ ಸೂಳೆಬೈಲು ನಿವಾಸಿಗಳಾದ ಸಯ್ಯದ್ ಇಬ್ರಾಹಿಂ ರಾಹಿಲ್(23), ಮೊಹಮದ್ ಮುಸ್ತಾ ಮುಸ್ತು(22), ಮೊಹಮದ್ ಅಲ್ಲಾ ಭಕ್ಷಿ (22) ಬಂಧಿತ ಆರೋಪಿಗಳು.
ಈ ಪ್ರಕರಣದೊಂದಿಗೆ 2020 ನೇ ಸಾಲಿನ 2 ಪ್ರಕರಣಗಳು, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ 2020 ನೇ ಸಾಲಿನ 1 ಪ್ರಕರಣ ಹಾಗೂ ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ 2020ನೇ ಸಾಲಿನ 1 ಪ್ರಕರಣ ಸೇರಿ ಒಟ್ಟು 04 ಪ್ರಕರಣಗಳನ್ನು ಬೇಧಿಸಿ, ಒಟ್ಟು 04 ಮೊಬೈಲ್ ಫೋನ್ ಗಳು ಮತ್ತು ಒಟ್ಟು 22 ಗ್ರಾಂ ತೂಕದ ಬಂಗಾರದ ಆಭರಣಗಳು ಸೇರಿದಂತೆ ಒಟ್ಟು ರೂ 1,60,000ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ. ಶಾಂತರಾಜು ಹಾಗೂ ಡಿವೈಎಸ್’ಪಿ ಕೃಷ್ಣಮೂರ್ತಿ ಅವರ ಮಾರ್ಗದರ್ಶನದಲ್ಲಿ ಭದ್ರಾವತಿ ನಗರ ಸಿಪಿಐ ರಾಘವೇಂದ್ರ ಕಾಂಡಿಕೆ ಅವರ ನೇತೃತ್ವದ ತಂಡ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ರಾಘವೇಂದ್ರ ಕಾಂಡಿಕೆ ಅವರ ನೇತೃತ್ವದ ತಂಡದಲ್ಲಿ ಪಿಎಸ್’ಐ ಸರ್ವಮಂಗಳ, ಸಿಬ್ಬಂದಿಗಳಾದ ಎಚ್.ಸಿ. ವೆಂಕಟೇಶ್, ಅನಿಲ್ ಕುಮಾರ್, ಮಂಜುನಾಥ್, ಪಾಲಾಕ್ಷ ನಾಯ್ಕ, ಪಿ.ಸಿ. ಮಧುಸೂದನ್ ಹಾಗೂ ಸುನಿಲ್ ಅವರುಗಳಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post