ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಂಗಳೂರು ವಿದ್ಯುತ್ಛಕ್ತಿ ಸರಬರಾಜು ಕಂಪನಿಯು ಆಲ್ಕೋಳ ವಿ.ವಿ. ಕೇಂದ್ರದಿಂದ ಸರಬರಾಜಾಗುವ ಎಎಫ್-08, ರಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಹಾಗೂ ನಗರ ಉಪವಿಭಾಗ-2ರ ಘಟಕ-06ರಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಎರಡು ದಿನ ನಗರದ ವಿವಿಧ ಭಾಗಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಫೆ.23ರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ
ಕಾಶೀಪುರ, ಹುಚ್ಚರಾಯ ಕಾಲೋನಿ, ವೀರಣ್ಣ ಲೇಔಟ್, ಲಕ್ಷ್ಮೀಪುರ, ಕುವೆಂಪು ಬಡಾವಣೆ, ರೇಣುಕಾಂಬ ಬಡಾವಣೆ, ಸೂಡಾ ಕಾಂಪ್ಲೆಕ್ಸ್,, ವಿನೋಬನಗರ ಪೊಲೀಸ್ ಠಾಣೆ, ಕೆಂಚಪ್ಪ ಲೇಔಟ್, ಚೇತನಾ ಪಾರ್ಕ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಫೆ.24 ಬೆಳಗ್ಗೆ 09-00 ಗಂಟೆಯಿಂದ ಸಂಜೆ 6 ಗಂಟೆಯವರೆಗೆ
ಗೋಪಿಶೆಟ್ಟಿಹಳ್ಳಿ, ಚಾಲುಕ್ಯ ನಗರ, ಮೇಲಿನ ಹಾಗೂ ಕೆಳಗಿನ ತುಂಗಾ ನಗರ, ಇಲಿಯಾಜ್ ನಗರ 1ನೇ ತಿರುವಿನಿಂದ 13ನೇ ತಿರುವಿನವರೆಗೂ, ಮಂಡಕ್ಕಿ ಭಟ್ಟಿ, ಛಾನಲ್ ಏರಿ, ಹಳೇ ಗೋಪಿಶೆಟ್ಟಿ ಕೊಪ್ಪ, ಸಿದ್ಧೇಶ್ವರ ಸರ್ಕಲ್, ಕೆ.ಎಚ್.ಬಿ. ಕಾಲೋನಿ, ಮಲ್ಲಿಕಾರ್ಜುನ ಬಡಾವಣೆ, ಖಾಜಿ ನಗರ, ಮಂಜುನಾಥ ಬಡಾವಣೆ, ಪದ್ಮಾ ಟಾಕೀಸ್ ರಸ್ತೆ, ಎಫ್-15 ಅಣ್ಣಾ ನಗರ, ಎಫ್-6 ಕಲ್ಲೂರು ಮಂಡ್ಲಿ ಗ್ರಾಮಾಂತರ ಪ್ರದೇಶ, ದುರ್ಗಿಗುಡಿ, ಗಾರ್ಡನ್ ಏರಿಯಾ, ಎಲ್.ಎಲ್.ಆರ್. ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post