ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಂಕರಘಟ್ಟ; ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಶೋಧನಾ ವಿದ್ಯಾರ್ಥಿ ಸಿಬಂತಿ ಪದ್ಮನಾಭ ಕೆ. ವಿ. ಅವರಿಗೆ ಕುವೆಂಪು ವಿಶ್ವವಿದ್ಯಾಲಯವು ಪಿ.ಹೆಚ್‌ಡಿ ಪದವಿ ನೀಡಿದೆ.
ಡಾ.ಸತೀಶ್ ಕುಮಾರ್ ಅಂಡಿಂಜೆಯವರ ಮಾರ್ಗದರ್ಶನದಲ್ಲಿ ಫೋಕ್ ಥಿಯೇಟರ್ ಫಾರ್ ಡೆವಲಪ್ಮೆಂಟ್ ಕಮ್ಯೂನಿಕೇಶನ್: ಎ ಸ್ಟಡಿ ಆಫ್ ಯಕ್ಷಗಾನ (ಅಭಿವೃದ್ಧಿ ಸಂವಹನಕ್ಕಾಗಿ ಜನಪದ ರಂಗಭೂಮಿ: ಯಕ್ಷಗಾನದ ಒಂದು ಅಧ್ಯಯನ) ಎಂಬ ವಿಷಯದಲ್ಲಿ ಸಂಶೋಧನಾ ಮಹಾಪ್ರಬಂಧ ಸಲ್ಲಿಸಿದ್ದರು.
ಉಜಿರೆ ಧ.ಮಂ.ಕಾಲೇಜಿನಲ್ಲಿ ಪದವಿ ಮತ್ತು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣ ಪೂರೈಸಿ, ಕೆಲವು ವರ್ಷ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ ಅವರು ಕಳೆದ ಹತ್ತು ವರ್ಷಗಳಿಂದ ತುಮಕೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಹವ್ಯಾಸಿ ಪತ್ರಕರ್ತರಾಗಿ ಹಾಗೂ ಯಕ್ಷಗಾನ ಕಲಾವಿದರಾಗಿ ಚಿರಪರಿಚಿತರಾದ ಅವರ ಪೊರೆ ಕಳಚಿದ ಮೇಲೆ ಕವನ ಸಂಕಲನ, ತುಮಕೂರು ಜಿಲ್ಲೆಯಪತ್ರಿಕೋದ್ಯಮ’ ಸಂಶೋಧನಾ ಕೃತಿ, ‘ಮಾಧ್ಯಮಶೋಧ’ ಅಂಕಣ ಬರಹ ಸಂಗ್ರಹ, ‘ನುಡಿರಂಜನ’ ಸಂಪಾದಿತ ಕೃತಿ ಹಾಗೂ ‘ಡಿಜಿಟಲ್ ಮಾಯೆಯೊಳಗೆ ಮಾಧ್ಯಮಲೋಕ’ ಲೇಖನಗಳ ಸಂಗ್ರಹ ಕೃತಿಗಳು ಪ್ರಕಟವಾಗಿವೆ ಎಂದು ತಿಳಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post