ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯ ಸೇವಾ ಯೋಜನಾ ಕೋಶ-ಬೆಂಗಳೂರು, ರಾಜ್ಯ ಜಾನಪದ ವಿಶ್ವವಿದ್ಯಾಲಯ, ಗೊಟಗೋಡಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಕುವೆಂಪು ವಿಶ್ವವಿದ್ಯಾಲಯ, ಇವರ ಸಹಯೋಗದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಪ್ರಚಾರ ಅಭಿಯಾನದ ಅಂಗವಾಗಿ ರಾಷ್ಟ್ರೀಯ ಸೇವಾ ಸಂವಿಧಾನ ಓದು ಎಂಬ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಗೊಟಗೋಡಿ ಜಾನಪದ ವಿವಿ ನೋಡಲ್ ಅಧಿಕಾರಿ ಡಾ ಮಲ್ಲಿಕಾರ್ಜುನ ಬಿ ಮಾನ್ಪಡೆ ಮಾತನಾಡಿ, ಸುಮಾರು 20 ವಿಶ್ವವಿದ್ಯಾಲಯಗಳಲ್ಲಿ ಈ ರೀತಿಯ ಕಾರ್ಯಕ್ರಮವನ್ನು ಸರ್ಕಾರದ ವತಿಯಿಂದ ಹಮ್ಮಿಕೊಳ್ಳಲಾಗುತ್ತಿದೆ. ಸಂವಿಧಾನದ ಮಹತ್ವ ಅರಿಯುವುದು ಎದರ ಮುಖ್ಯ ಉದ್ದೇಶ ಎಂದು ತಿಳಿಸಿ ಭಾರತದ ಸಂವಿಧಾನದ ಪ್ರತಿಜ್ಞಾ ವಿಧಿ ಭೋಧಿಸಿದರು.
ಗೊಟಗೋಡಿ ಜಾನಪದ ವಿ.ವಿ. ಕುಲಸಚಿವ (ಮೌಲ್ಯಮಾಪನ) ಪ್ರೊ. ಎನ್.ಎಂ. ಸಾಲಿ ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಡಾ ಬಿ.ಆರ್. ಅಂಬೇಡ್ಕರ್ ರಚಿಸಿರುವ ಸಂವಿಧಾನ ವಿವಿಧ ದೇಶಗಳ ಸಂವಿಧಾನದ ಒಳ್ಳೆಯ ತನಗಳ ಸಮ್ಮಿಳಿತ ಜೇನುಗೂಡು ಇದ್ದಹಾಗೆ. ಸಂವಿಧಾನ ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಲ್ಲ ಅದು ಸರ್ವರಿಗೂ ಸಂಬಂಧಿಸಿದ್ದು ಎಂದು ತಿಳಿಸಿದರು.
ಉಪಕುಲಸಚಿವ ಡಾ. ಬಿ.ಜೆ. ಗಿರೀಶ್ ಮಾತನಾಡಿ, ಅನೇಕ ದಾರ್ಶನಿಕರನ್ನು ಅದರಲ್ಲಿಯೂ ಡಾ ಬಿ ಆರ್. ಅಂಬೇಡ್ಕರ್‌ರವರನ್ನು ನೀಡಿರುವ ನಮ್ಮ ಭಾರತ ಅತ್ಯಂತ ಶ್ರೇಷ್ಠ ಎಂದು ತಿಳಿಸಿದರು. ಇಡೀ ಪ್ರಪಂಚದಲ್ಲಿಯೇ ನಮ್ಮ ಭಾರತದ ಸಂವಿಧಾನ ಅತ್ಯಂತ್ರ ಶೇಷ್ಠ ಸಂವಿಧಾನಗಳಲ್ಲಿ ಒಂದು ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ರಾಷ್ಟ್ರೀಯ ಕಾನೂನು ಕಾಲೇಜು ಪ್ರಾಂಶುಪಾಲ ಜಿ. ಆರ್. ಡಾ. ಜಗದೀಶ್ ಮಾತನಾಡಿ, ಸಂವಿಧಾನ ಮತ್ತು ರಾಜಕೀಯ ನ್ಯಾಯ ಕುರಿತು ಸುಧೀರ್ಘ ಉಪನ್ಯಾಸ ನೀಡಿದರು. ಕಾನೂನು ನಮಗೋಸ್ಕರ ಇರುವುದು, ಕಾಲಕ್ಕೆ ತಕ್ಕಂತೆ ಸಂವಿಧಾನ ಕಾನೂನು ಬದಲಾವಣೆಯಾಗುತ್ತದೆ ಎಂದು ತಿಳಿಸಿದರು.
ಮತ್ತೋರ್ವ ಸಂಪನ್ಮೂಲವ್ಯಕ್ತಿಗಳಾಗಿ ಆಗಮಿಸಿದ್ದ ಚಿಂತಕರು ಮತ್ತು ಲೇಖಕರು ಡಾ. ಸದಾಶಿವ ಮರ್ಜಿ ಮಾತನಾಡಿ ಸಂವಿಧಾನ ಮತ್ತು ಅಂಬೇಡ್ಕರ್ ವಿಷಯ ಕುರಿತು ಅದ್ಭುತ ಉಪನ್ಯಾಸ ನೀಡಿದರು. ನಾವು ಬಹುಜನರು ಸರ್ಕಾರದ ತೀರ್ಮಾನ ನಮಗೆ ಸಂಬಂಧವಿಲ್ಲ ಎಂದು ತಿಳಿದಿರುವುದೇ ಇಂದಿನ ವ್ಯವಸ್ಥೆಗೆ ಕಾರಣವಾಗಿದೆ. ಭಾರತದಂತಹಾ ಜಾತಿ ಆಧಾರಿತ ಲಿಂಗಾಧಾರಿತ ದೇಶದಲ್ಲಿ ಸರ್ವರಿಗೂ ಸಮನಾದ ಕಾನೂನು ತರುವಲ್ಲಿ ಯಶಸ್ವಿಯಾದವರು ಡಾ ಅಂಬೇಡ್ಕರ್ ವ್ಯಕ್ತಿ ಸರ್ಕಾರದ ಆಡಳಿತದ ಮುಖ್ಯ ಘಟಕವಾದಾಗ ಮಾತ್ರ ಸುಧಾರಣೆ ಸಾಧ್ಯವೆಂದು ಅಂಬೇಡ್ಕರ್ ತಿಳಿಸಿದ್ದರು ಎಂದರು.
ಕುವೆಂಪು ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ನಾಗರಾಜ ಪರಿಸರ ಸ್ವಾಗತಿಸಿದರು. ಎನ್‌ಎಸ್‌ಎಸ್ ಸ್ವಯಂ ಸೇವಕಿಯರು ಪ್ರಾರ್ಥಿಸಿ, ಹೊಳೆಹೊನ್ನೂರು ರಾಸೇಯೋ ಅಧಿಕಾರಿ ಡಾ ಶಿವಕುಮಾರ್ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post