ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಎಲೆಕ್ಟ್ರಾನಿಕ್ಸ್ ಮತ್ತು ಗೃಹಪಯೋಗಿ ವಸ್ತುಗಳ ಮಾರಾಟ ಮಳಿಗೆಯಾದ ಯುನಿಲೆಟ್ 17ನೇ ವರ್ಷದ ವಾರ್ಷಿಕ ಉತ್ಸವದ ಅಂಗವಾಗಿ ನಗರದ ಬಿ.ಹೆಚ್.ರಸ್ತೆಯಲ್ಲಿರುವ ಯುನಿಲೆಟ್ ಮಳಿಗೆ ಸೇರಿದಂತೆ ಮಂಡ್ಯ, ಮೈಸೂರು, ಹಾಸನ, ಚಿತ್ರದುರ್ಗ, ಹಿರಿಯೂರು ಹಾಗೂ ಚಳ್ಳಕೆರೆಯಲ್ಲಿ ವಿಶೇಷ ಕೊಡುಗೆಗಳ ಖಚಿತ ಉಡುಗೊರೆಗಳ ಹಬ್ಬವನ್ನು ಇಂದಿನಿಂದ ಆಚರಿಸುತ್ತಿದೆ ಎಂದು ಯುನಿಲೆಟ್ ಮುಖ್ಯ ವ್ಯವಸ್ಥಾಪಕ ಮುರುಳಿ ತಿಳಿಸಿದರು.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಂಸ್ಥಾಪಕರ ದಿನದ ಅಂಗವಾಗಿ ಮಾರ್ಚ್ ತಿಂಗಳಲ್ಲಿ ಈ ವಿಶೇಷ ಕೊಡುಗೆಗಳನ್ನು ನೀಡುತ್ತಿದ್ದು, ಇದರ ಸದುಪಯೋಗ ಪಡೆಯುವಂತೆ ಹೇಳಿದರು.
30,000ರೂ. ಹಾಗೂ 50,000ರೂ. ವರೆಗಿನ ಖರೀದಿಗೆ ಮತ್ತು ಅದಕ್ಕೂ ಮೀರಿದ ಖರೀದಿಗೆ ಸಂಬಂಧಪಟ್ಟಂತೆ ಬೆಳ್ಳಿ, ಬಂಗಾರ ಹಾಗೂ ಡೈಮಂಡ್‌ನ ಕೂಪನ್ ಸ್ಕ್ರಾಚ್ ಮಾಡಿ ಖಚಿತ ಬಹುಮಾನವನ್ನು, ಉಡುಗೊರೆಯನ್ನು ಪಡೆಯಬಹುದಾಗಿದೆ ಎಂದರು.
ಶಿವಮೊಗ್ಗ ಮಳಿಗೆ ವ್ಯವಸ್ಥಾಪಕರಾದ ಚೆಲುವ ಕುಮಾರ್ ಹಾಗೂ ಅಜೇಯ್ ಮಾತನಾಡಿ, ಇದರಲ್ಲಿ ರೆಫಿಜರೇಟರ್ ವಾಷಿಂಗ್ ಮಿಷನ್, ಮಿಕ್ಸರ್ ಗ್ರೈಂಡರ್, ಎಲ್‌ಸಿಡಿ ಟಿವಿ, ಹೇರ್ ಕೂಲರ್, ಫ್ಯಾನ್, ಗ್ಯಾಸ್ ಸ್ಟವ್‌ನಿಂದ ಹಿಡಿದು ಬಹುತೇಕ ಉಡುಗೊರೆಗಳನ್ನು ಖಚಿತವಾಗಿ ಪಡೆಯಬಹುದಾಗಿರುತ್ತದೆ. ಶೂನ್ಯ ಬಡ್ಡಿದರದಲ್ಲಿ ಹಣಕಾಸಿನ ಸೇವೆಗಳು ದೊರೆಯುತ್ತವೆ ಎಂದು ವಿವರಿಸಿರು..
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post