ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ 20219-20 ನೇ ಸಾಲಿನ ಪದವಿ ಪರೀಕ್ಷೆಯ ಬಿ.ಸಿ.ಎ ವಿಭಾಗದಲ್ಲಿ ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಎಸ್.ಆರ್ ನಾಗಪ್ಪ ಶೆಟ್ಟಿ ರಾಷ್ಟ್ರೀಯ ಅನ್ವಯಿಕ ವಿಜ್ಞಾನ ಕಾಲೇಜಿಗೆ 3 ರ‍್ಯಾಂಕ್‌ಗಳು ಲಭಿಸಿದೆ.
ವಿದ್ಯಾರ್ಥಿನಿಯರಾದ ಮೇಘ ಪಿ. ಪರ್ವಟಿಕರ್(ಮೂರನೇ ರ‍್ಯಾಂಕ್), ಎಸ್.ಆರ್. ವಿದ್ಯಾಶ್ರೀ(ಆರನೇ ರ‍್ಯಾಂಕ್), ಕೆ.ಪಿ. ಪಲ್ಲವಿ(ಏಳನೇ ರ‍್ಯಾಂಕ್) ಪಡೆದಿದ್ದಾರೆ.
ಈ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ರಾಷ್ಟ್ರೀಯ ಶಿಕ್ಷಣ ಸಮಿತಿ ಸದಸ್ಯರು, ಕಾಲೇಜಿನ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post