ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇಂದು ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಿತು.
ಸಭೆಯಲ್ಲಿ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಅವರ ಕುಟುಂಬ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿರುವ ಬಗ್ಗೆ ಖಂಡಿಸಿ ಮಾರ್ಚ್ 13ರಂದು ಶಿವಮೊಗ್ಗದಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಯಲ್ಲಿ 67 ಜನ ಕಾಂಗ್ರೆಸ್ ಶಾಸಕರು, ಹಾಗೂ 24 ಎಮ್‌ಎಲ್‌ಸಿ ಸೇರಿದಂತೆ, ವಿಪಕ್ಷ ನಾಯಕ ಸಿದ್ಧರಾಮಯ್ಯ, ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕೇಂದ್ರದ ನಾಯಕರುಗಳು ಸೇರಿ ಅಂದಾಜು 50 ಸಾವಿರ ಜನರು ಭಾಗಿಯಾಗಲು ನಿರ್ಣಯ ಕೈಗೊಳ್ಳಲಾಯಿತು.
ನ್ಯಾಯಕ್ಕಾಗಿ ಪ್ರತಿಭಟಿಸುವ ಮೂಲಕ ಶಿವಮೊಗ್ಗ ಎಸ್‌ಪಿ ಕಚೇರಿಗೆ ಅಂದು ಮುತ್ತಿಗೆ ಹಾಕಲಾಗುವುದು. ಮತ್ತು ಕ್ಷೇತ್ರದ ಸಮಸ್ಥ ಜನತೆ, ಜನಪ್ರತಿನಿಧಿಗಳು, ವಿವಿಧ ವ್ಯಾಪಾರ ಸಂಘ-ಸಂಸ್ಥೆಗಳು, ಅಭಿಮಾನಿಗಳು, ಜಿಲ್ಲೆ ಹಾಗೂ ರಾಜ್ಯದ ಸಮಸ್ಥ ಘಟಕದ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬಿಜೆಪಿ ಪಕ್ಷದ ಈ ದೌರ್ಜನ್ಯವನ್ನು ಖಂಡಿಸಬೇಕೆಂದು ವಿನಂತಿಸಿಕೊಳ್ಳಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post