ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ತೀರ್ಥಹಳ್ಳಿ: ನಗರದ ಮಯೂರ ಹೋಟೆಲ್ ಸಭಾಂಗಣದಲ್ಲಿ ಇಂದು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಾಹಿತಿ ಎನ್. ಎಸ್ ಲಕ್ಷ್ಮಿ ನಾರಾಯಣ್ ಇವರ ಸ್ಮರಣಾರ್ಥ ನುಡಿನಮನ ಹಮ್ಮಿಕೊಳ್ಳಲಾಗಿತ್ತು.
ಕಸಾಪ ಅಧ್ಯಕ್ಷರಾದ ಆಡಿನಸರ ಸತೀಶ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ.ಜೆ.ಕೆ. ರಮೇಶ್, ಲೇಖಕಿ ಉಹಾದೇವಿ ಉರಾಳ್, ಒಡನಾಡಿಗಳಾದ ಯಡಗುಡ್ಡೆ ದೇವದಾಸ್, ಕೆ.ಎಮ್. ಜಾದವ್ ಅವರ ಸಾಹಿತ್ಯ ಮತ್ತು ಜೀವನದ ಪರಿಚಯ ಮಾಡಿಕೊಟ್ಟರು.
ವೇದಿಕೆಯಲ್ಲಿ ಜಿಲ್ಲಾ ಕಸಾಪ ಉಪಾಧ್ಯಕ್ಷರಾದ ಕಡಿದಾಳ್ ದಯಾನಂದ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಲಕ್ಷ್ಮಿ ನಾರಾಯಣ್ ಅವರ ಗೀತೆಗಳನ್ನು ಗಾಯಕರಾದ ರಮೇಶ್ ಗಾಂವಸ್ಕರ್ ಮತ್ತು ಶರ್ಮಿಳಾ ಮಂಜುನಾಥ್ ಹಾಡಿದರು.
ಕಸಾಪ ಕಾರ್ಯದರ್ಶಿಗಳಾದ ಬಿ.ಕೆ. ಉದಯ್ ಕುಮಾರ್ ಸ್ವಾಗತಿಸಿ, ಲಕ್ಷ್ಮಣ್ ವಂದಿಸಿದರು. ನಿರ್ದೇಶಕರಾದ ಡಾನ್ ರಾಮಣ್ಣ ಕಾರ್ಯಕ್ರಮ ನಿರೂಪಿಸಿದರು. ಕೋಶಧ್ಯಕ್ಷರಾದ ಪವಿತ್ರ ಮಂಜುನಾಥ್ ಮತ್ತು ನಿರ್ದೇಶಕಿ ವಿನೂತ ಮುರಳೀಧರ್ ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















