ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕರ್ನಾಟಕದಲ್ಲಿ ಜಾರಿಗೆ ತಂದಂತೆ ದೇಶದ ಎಲ್ಲಾ ರಾಜ್ಯಗಳಿಗೂ ಅನ್ವಯವಾಗುವಂತೆ ‘ಒಂದು ರಾಷ್ಟ್ರ ಒಂದು ಗೋ ಹತ್ಯೆ ಕಾನೂನು’ ಜಾರಿಗೆ ತನ್ನಿ ಎಂದು ಶಾಸಕ ಯುಟಿ ಖಾದರ್ ಸರಕಾರಕ್ಕೆ ವ್ಯಂಗ್ಯವಾಗಿ ಆಗ್ರಹಿಸಿದರು.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ಒಂದು ರಾಷ್ಟ್ರ ಒಂದು ಚುನಾವಣೆ ಕಲ್ಪನೆಯಂತೆ, ಒಂದು ರಾಷ್ಟ್ರ ಒಂದು ಗೋನಿಷೇಧ ಕಾನೂನು ಜಾರಿಗೆ ತನ್ನಿ. ಕರ್ನಾಟಕಕ್ಕೆ ಒಂದು ಕಾನೂನು, ಕೇರಳದಲ್ಲಿ ಚುನಾವಣೆ ಬಂದರೆ ಒಂದು ರೀತಿಯ ಕಾನೂನು, ಗೋವಾಕ್ಕೆ ಒಂದು ರೀತಿಯ ಕಾನೂನು ತರುತ್ತೀರಿ.
ನಿಮಗೆ ನಿಜವಾಗಲೂ ಗೋವಿನ ಬಗ್ಗೆ ಭಾವನಾತ್ಮಕ ನಂಬಿಕೆ ಇದ್ದರೆ, ಇಡೀ ದೇಶದಲ್ಲಿ ಗೋ ಮಾಂಸ ನಿಷೇಧ ಮಾಡಿ. ಅಲ್ಲದೇ, ಗೋ ಮಾಂಸ ರಫ್ತು ಕೂಡಾ ನಿಲ್ಲಿಸಿ ಎಂದರು.
ಇನ್ನು ನಮ್ಮ ಸರಕಾರ ಜಾರಿಗೆ ತಂದ ಪಶು ಭಾಗ್ಯ ಯೋಜನೆಯನ್ನು ನಿಲ್ಲಿಸಿದ್ದೀರಿ. ಇದರಿಂದ ಗೋ ಸಂತತಿ ಕಡಿಮೆಯಾಗುತ್ತಿದೆ. ಮತ್ತೇ ಪಶು ಭಾಗ್ಯ ಯೋಜನೆ ಜಾರಿಗೆ ತರುವಂತೆ ಯುಟಿ ಖಾದರ್ ಒತ್ತಾಯಿಸಿದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post