ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಗರದ ಹೊರವಲಯದಲ್ಲಿರುವ ಹರ್ಷ ದ ಫರ್ನ್ ಹೋಟೆಲ್ ಎದುರಿನಲ್ಲಿ ನಿರ್ಮಿಸಲಾಗಿದ್ದ ಟಾರ್ ರಸ್ತೆಯನ್ನು ಅಣ್ಣ ಹಜಾರೆ ಹೋರಾಟ ಸಮಿತಿ ಮತ್ತು ನಾಗರೀಕ ಹಿತರಕ್ಷಣಾ ವೇದಿಕೆಯ ಹೋರಾಟದ ಫಲವಾಗಿ ತೆರವುಗೊಳಿಸಲಾಗಿದೆ.
ಪಕ್ಷದ ಕಾರ್ಯಕ್ರಮವೊಂದಕ್ಕೆ ಓಡಾಡಲು ಹರ್ಷ ದ ಫರ್ನ್ ಹೋಟೆಲ್‌ಗೆ ಸಾಗರ ರಸ್ತೆಯಿಂದ ತುಂಗಾ ಮೇಲ್ದಂಡೆ ಜಾಗದಲ್ಲಿ ಟಾರ್ ರಸ್ತೆ ನಿರ್ಮಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಈ ಹೋಟೆಲ್‌ಗೆ ಮಲಿಗೇನ ಹಳ್ಳಿಗೆ ತೆರಳುವ ರಸ್ತೆಯಿಂದ ತಲುಪುವ ಮಾರ್ಗ ಮಾತ್ರವೇ ಅಧಿಕೃತ ಹೊರತು ಯುಟಿಪಿ ಜಾಗದಿಂದ ನಿರ್ಮಿಸಿರುವ ರಸ್ತೆ ಅತಿಕ್ರಮಣವೆಂದು ಆರೋಪಿಸಿ ನಾಗರೀಕ ಹೋರಾಟ ಸಮಿತಿ ಮತ್ತು ಅಣ್ಣ ಹಜಾರೆ ಹೋರಾಟ ಸಮಿತಿ ಪ್ರತಿಭಟನೆ ನಡೆಸಿ ರಸ್ತೆ ತೆಗೆದು ಯುಟಿಪಿ ತನ್ನ ಜಾಗವನ್ನ ವಶಪಡಿಸಿಕೊಳ್ಳಬೇಕೆಂದು ಆಗ್ರಹಿಸಿತ್ತು.
ಈ ಹೋರಾಟದ ಫಲವಾಗಿ ತುಂಗಾ ಮೇಲ್ದಂಡೆ ಯೋಜನೆ ಅಧಿಕಾರಿಗಳು ರಸ್ತೆಯನ್ನು ತೆರವು ಮಾಡಿದ್ದಾರೆ. ಹೋರಾಟಕ್ಕೆ ಬೆಂಬಲಿಸಿದ ವೇದಿಕೆ ಮತ್ತು ಸಂಘಟನೆ ಸದಸ್ಯರಿಗೆ ಅಶೋಕ್ ಯಾದವ್ ಧನ್ಯವಾದ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post