ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಫುಟ್‌ಪಾತ್ ಮೇಲೆ ಬ್ಯಾರಿಕೇಡ್ ಇಟ್ಟು ಪುಟ್ ಪಾತ್ ಮೇಲೆ ಪಾದಚಾರಿ ಮಾರ್ಗದಲ್ಲಿ ಪಾದಚಾರಿಗಳು ಸಂಚಾರ ಮಾಡುವ ಬದಲು ರಸ್ತೆಯಲ್ಲಿ ಪ್ರಾಣಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ಸಂಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸದಾ ವಾಹನ ದಟ್ಟಣೆ ಇರುವ ಪ್ರದೇಶವಾಗಿರುವ ಬನಶಂಕರಿ 3 ನೆಯ ಹಂತದ ಜನತಾ ಬಜಾರ್’ನಲ್ಲಿ ಫುಟ್‌ಪಾತ್ ರಸ್ತೆ ಪಕ್ಕದಲ್ಲಿ ದಾರಿಯುದ್ದಕ್ಕೂ ದ್ವಿಚಕ್ರ ವಾಹನ ಸವಾರರು ವಾಹನ ನಿಲುಗಡೆ, ಪಾದಚಾರಿ ಮಾರ್ಗದಲ್ಲಿ ಕಸದ ರಾಶಿ, ಮಾರ್ಗದ ತುಂಬಾ ಹೊಂಡ, ಗುಂಡಿ… ಇದು ಬನಶಂಕರಿ 3ನೆಯ ಹಂತದ ಜನತಾ ಬಜಾರ್ ಅಯೋಧ್ಯಾ ಉಪಚಾರ್ ಹೋಟೆಲ್ ಬಳಿ ಹಾಗೂ ಮೆಜಿಸ್ಟಿಕ್’ನಿಂದ ಕತ್ರಿಗುಪ್ಪೆ ಮತ್ತು ಬನಶಂಕರಿ ಕಡೆಗೆ ಹೋಗುವ ದಾರಿಯಲ್ಲಿ ಕಂಡು ಬರುವ ದೃಶ್ಯ. ಪಾದಚಾರಿ ಮಾರ್ಗ ಅವ್ಯವಸ್ಥೆಯ ಆಗರವಾಗಿದೆ.
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಹಾನಗರ ಪಾಲಿಕೆಯವರು ನಿರ್ಮಿಸುವ ಫುಟ್‌ಪಾತ್ ಕಸ ಹಾಕಲು, ದ್ವಿಚಕ್ರ ವಾಹನ ನಿಲ್ಲಿಸಲು ನಾಲ್ಕು ಚಕ್ರ ವಾಹನ ನಿಲ್ಲಿಸಲು ಹಾಗೂ ಕಸ ಹಾಕುವ ಸ್ಥಳವಾಗಿದೆ.
ಆದರೆ, ಇದನ್ನೆಲ್ಲಾ ನೋಡಿಯೂ ಮಹಾನಗರ ಪಾಲಿಕೆ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಇದರ ಬಗ್ಗೆ ವಾರ್ಡ್ ನಂಬರ್ 163ರ ಬಿಬಿಎಂಪಿ ಕಾರ್ಪೊರೇಟರ್ ಮತ್ತು ಕ್ಷೇತ್ರದ ಶಾಸಕ ಗಮನಹರಿಸಿ ಫುಟ್‌ಪಾತ್ ಮೇಲೆ ನಿಲ್ಲಿಸುವ ವಾಹನಗಳನ್ನು ತೆರವುಗೊಳಿಸಿ ಪಾದಚಾರಿಗಳಿಗೆ ಓಡಾಡಲು ಅನುವು ಮಾಡಿಕೊಡಲಿ ಎಂದು ಆಶಿಸೋಣ.
(ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post