ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಚ್.28ರ ಭಾನುವಾರ ಬೆಳಗ್ಗೆ 9:30ಕ್ಕೆ ನಗರದ ಕರ್ನಾಟಕ ಸಂಘದಲ್ಲಿ ಸಿಹಿಮೊಗ್ಗೆಯ ಹಲವರಿಗೆ ಕನ್ನಡ ಸೇವಾ ರತ್ನ ಪ್ರಶಸ್ತಿ ವಿತರಣಾ ಸಮಾರಂಭವನ್ನು ಆಯೋಜಿಸಿದೆ.
ಸಂಘದ ಅಧ್ಯಕ್ಷ ಹಾಗೂ ಅನಿಕೇತನ ಕನ್ನಡ ಬಳಗದ ಮಾಯಣ್ಣ ಅವರು ಅಧ್ಯಕ್ಷತೆಯನ್ನು ವಹಿಸಿ ಪ್ರಶಸ್ತಿ ಪ್ರಧಾನ ಮಾಡಲಿರುವ ಕಾರ್ಯಕ್ರಮವನ್ನು ವಕೀಲರ ಸಂಘದ ಅಧ್ಯಕ್ಷ ಎನ್.ದೇವೇಂದ್ರಪ್ಪ ಉದ್ಘಾಟಿಸಲಿದ್ದಾರೆ. ವಕೀಲರ ಸಂಘದ ನಿರ್ದೇಶಕ ಭವಾನಿರಾವ್, ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ವಿ.ರವೀಶ್, ಅಧ್ಯಕ್ಷ ರವಿಕುಮಾರ್ ಎಂ.ಹೆಚ್.ಸುಕವಿ, ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಡಾ.ಎಂ.ಅರವಿಂದ್, ಗಾಯತ್ರಿ, ಎಸ್.ಕೆ. ಗಜೇಂದ್ರಸ್ವಾಮಿ, ಡಾ.ಆರ್. ಉಮಾಪತಿ ಗಂಗಾರಾಜ್, ವಿನೋದಿನಿ ಆನಂದ, ಡಾ.ನೂರ್‌ಸಮರ್ ಅಬ್ಬಲಗೆರೆ, ಡಾ. ಜಿ.ಎಸ್. ಅಶೋಕ್ , ಡಾ.ಹೆಚ್.ಶಿವಲಿಂಗಪ್ಪ, ಡಾ.ರಾಜೇಂದ್ರ ಬುರುಡಿಕಟ್ಟಿ, ಕುಂಸಿ ಉಮೇಶ್, ಪ್ರೊ. ಸತ್ಯನಾರಾಯಣ, ತಿರುಮಲ ಮಾವಿನಕುಳಿ, ಜೆ.ಬಿ.ನಾಗರತ್ನಮ್ಮ, ಡಾ.ಎನ್.ಆರ್.ಮಂಜುಳಾ, ರಾಮು ಎನ್.ರಾಥೋಡ್, ಎ.ಜೆ. ವೀಣಾ , ಕೋಟೋಜಿರಾವ್, ಶಶಿಕಲಾ, ಕೆ.ಜೆ.ಸರೋಜ, ಮಂಜಪ್ಪ ಸೇರಿದಂತೆ ಹಲವರಿಗೆ ಸಾಹಿತ್ಯ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಕಾರ್ಯಕ್ರಮಕ್ಕೆ ಸರ್ವರನ್ನು ಹಾಗೂ ಕನ್ನಡ ಸಾಹಿತ್ಯಭಿಮಾನಿಗಳನ್ನು ಸಾಹಿತ್ಯ ಪರಿಷತ್ ಸ್ವಾಗತಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















