ಕಲ್ಪ ಮೀಡಿಯಾ ಹೌಸ್
ಚಿತ್ರದುರ್ಗ : ಐಮಂಗಲ ಹೋಬಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಮಾ.೩೦ರ ನಾಳೆ ಮಧ್ಯಾಹ್ನ 12 ರಿಂದ 2ರವರೆಗೆ ಚಿತ್ರದುರ್ಗ ಎಸಿಬಿ ಪೊಲೀಸ್ ಠಾಣೆ ವತಿಯಿಂದ ಹೋಬಳಿ ಮಟ್ಟದ ಜನಸಂಪರ್ಕ ಸಭೆ ನಡೆಯಲಿದೆ.
ಎಸಿಬಿ ಪೊಲೀಸ್ ಠಾಣೆ ಉಪಾಧೀಕ್ಷಕ ಬಸವರಾಜ ಆರ್.ಮಗದುಮ್ ಸಭೆಯ ಅಧ್ಯಕ್ಷತೆ ವಹಿಸುವರು. ಪಿಐ ಪ್ರವೀಣ್ ಕುಮಾರ್, ಪಿಐಡಿಎಸ್ ಆಂಜನೇಯ ಸಭೆಯಲ್ಲಿ ಹಾಜರಿರುವರು.
ಈ ಸಂದರ್ಭದಲ್ಲಿ ಸಾರ್ವಜನಿಕರು ಭ್ರಷ್ಠಾಚಾರಕ್ಕೆ ಸಂಬಂಧಪಟ್ಟಂತೆ ತಮ್ಮ ದೂರುಗಳನ್ನು ನೀಡಬಹುದು. ನೇರ ಅಹವಾಲು ನೀಡಲು ಸಾಧ್ಯವಾಗದಿದ್ದಲ್ಲಿ ದಾವಣಗೆರೆ ಪೂರ್ವ ವಲಯ ಎಸಿಬಿ ಅಧಿಕಾರಿ ಎಸ್. ಪಿ. ಜಯಪ್ರಕಾಶ್ ಮೊ: 9480806206, ಬಸವರಾಜ್.ಆರ್.ಮಗದುಮ್ ಮೊ: 9480806228, ಮತ್ತು ಪಿಐಡಿಎಸ್ ಆಂಜನೇಯ ಮೊ: 9480806285, ಪಿ.ಐ ಪ್ರವೀಣ್ ಕುಮಾರ್ ಮೊ: 9480806286 ಹಾಗೂ ಭ್ರಷ್ಠಾಚಾರ ನಿಗ್ರಹ ದಳ ಪೊಲೀಸ್ ಠಾಣೆ ಸ್ಥಿರ ದೂರವಾಣಿ ಸಂಖ್ಯೆ08194-230600ಗೆ ಸಂಪರ್ಕಿಸಬಹುದು ಎಂದು ಭ್ರಷ್ಠಾಚಾರ ನಿಗ್ರಹ ದಳ ಪೊಲೀಸ್ ಠಾಣೆ ಪೊಲೀಸ್ ಉಪಾಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post