ಕಲ್ಪ ಮೀಡಿಯಾ ಹೌಸ್
ಬೆಂಗಳೂರು/ಧಾರವಾಡ: ಧಾರವಾಡ ಜಿಲ್ಲೆಯಲ್ಲಿ 2019 ರ ಮುಂಗಾರು ಹಂಗಾಮಿನ ಮಧ್ಯಂತರ ಬೆಳೆ ವಿಮಾ ಪರಿಹಾರ ಒಟ್ಟು 45.05 ಕೋಟಿ ರೂ. ಬಿಡುಗಡೆಯಾಗಿದೆ.
ಈ ಕುರಿತಂತೆ ಕೃಷಿ ಇಲಾಖೆ ಮಾಹಿತಿ ಬಿಡುಗಡೆ ಮಾಡಿದ್ದು, ಒಟ್ಟು 197 ವಿಮಾ ಘಟಕಗಳಲ್ಲಿ 45.05 ಕೋಟಿ ರೂ.ಗಳನ್ನು 59728 ರೈತ ಫಲಾನುಭವಿಗಳಿಗೆ ಬಿಡುಗಡೆಯಾಗಿದ್ದು, ಸದರಿ ಮೊತ್ತವನ್ನು ಸಂರಕ್ಷಣೆ ತಂತ್ರಾಂಶದ ಮುಖಾಂತರ ರೈತರ ಖಾತೆಗೆ ಇತ್ಯರ್ಥಪಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದೆ.
ಇಲ್ಲಿಯವರೆಗೆ 2019ರ ಮುಂಗಾರು ಹಂಗಾಮಿಗೆ ಸಂಬಂಧಿಸಿದಂತೆ ರಾಜ್ಯದ ನೆರೆ ಪೀಡಿತ ಪ್ರದೇಶಗಳಲ್ಲಿ ಹಾನಿಗೊಳಗಾದ ಬೆಳೆಗೆ ಯೋಜನೆಯ ಮಾರ್ಗಸೂಚಿಯನ್ವಯ ಜಿಲ್ಲಾಡಳಿತ ನೀಡಿರುವ ವರದಿಯಂತೆ ಏಳು ಜಿಲ್ಲೆಗಳಾದ ಹಾವೇರಿ, ವಿಜಯಪುರ, ಗದಗ, ಧಾರವಡ, ಬಾಗಲಕೋಟೆ, ಬೆಳಗಾವಿ, ಚಾಮರಾಜನಗರ ಜಿಲ್ಲೆಗಳಲ್ಲಿ ಮಧ್ಯಂತರ ವಿಮಾ ಪರಿಹಾರ ಲೆಕ್ಕಾಚಾರ ಮಾಡಲಾಗಿರುತ್ತದೆ. ಒಟ್ಟು 854 ವಿಮಾ ಘಟಕಗಳಲ್ಲಿ 1.70 ಲಕ್ಷ ರೈತ ಫಲಾನುಭವಿಗಳಿಗೆ ಮಧ್ಯಂತರ ವಿಮಾ ಪರಿಹಾರ ದೊರಕಿಸಲು ಸಂರಕ್ಷಣೆ ತಂತ್ರಾಂಶದಲ್ಲಿ 109.15 ಕೋಟಿ ರೂ. ಲೆಕ್ಕಾಚಾರ ಮಾಡಲಾಗಿದೆ ಎಂದು ತಿಳಿಸಿದೆ.
ಇಲ್ಲಿಯವರೆಗೆ ಒಟ್ಟು 62.12 ಕೋಟಿಗಳು 1.07 ಲಕ್ಷ ರೈತ ಫಲಾನುಭವಿಗಳಿಗೆ ಮಧ್ಯಂತರ ವಿಮೆ ಪರಿಹಾರ ಮೊತ್ತವನ್ನು ಅನುಷ್ಟಾನ ವಿಮಾ ಸಂಸ್ಥೆಯವರು ಸಂರಕ್ಷಣೆ ತಂತ್ರಾಂಶದ ಮುಖಾಂತರ ಇತ್ಯರ್ಥಪಡಿಸಿದ್ದಾರೆ. ಬಾಕಿ ಇರುವ 47.03 ಕೋಟಿಗಳಲ್ಲಿ 62865 ರೈತ ಫಲಾನುಭವಿಗಳಲ್ಲಿ ಒಟ್ಟು ರೂ 1.98 ಕೋಟಿಗಳ 3137 ರೈತ ಫಲಾನುಭವಿಗಳ ವಿಮಾ ಪರಿಹಾರ ಮೊತ್ತವು ಆಧಾರ್ ಸಂಖ್ಯೆಯು ಬ್ಯಾಂಕ್ ಖಾತೆಗೆ ಲಿಂಕ್ ಆಗದೆ ಇರುವ ಕಾರಣ ವಿಫಲಗೊಂಡ ಪ್ರಕರಣಗಳಿಗೆ ಅನುಷ್ಟಾನ ವಿಮಾ ಸಂಸ್ಥೆಯವರಿಂದ ಇತ್ಯರ್ಥಪಡಿಸುವ ಕಾರ್ಯ ಪ್ರಕ್ರಿಯೆಯಲ್ಲಿರುತ್ತದೆ. ಇದೀಗ ಕೇಂದ್ರ ಸರ್ಕಾರದ ತಾಂತ್ರಿಕ ಸಲಹಾ ಸಮಿತಿ ನಿರ್ದೇಶಾನುಸಾರ ಧಾರವಾಡ ಜಿಲ್ಲೆಯಲ್ಲಿ 2019 ರ ಮುಂಗಾರು ಹಂಗಾಮಿನ ಮಧ್ಯಂತರ ಬೆಳೆ ವಿಮಾ ಪರಿಹಾರ ಬಿಡುಗಡೆಯಾಗಿದೆ ಎಂದು ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post