ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) 2019-20ನೇ ಸಾಲಿನ ಇಂಜಿನಿಯರಿಂಗ್ ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ನಗರದ ಜೆಎನ್‌ಎನ್‌ಸಿ ಇಂಜಿನಿಯರಿಂಗ್ ಕಾಲೇಜಿನ ವಿವಿಧ ವಿಭಾಗದ ವಿದ್ಯಾರ್ಥಿಗಳು ಹಲವು ರ್‍ಯಾಂಕ್‌ಗಳನ್ನು ಪಡೆದಿದ್ದಾರೆ.
ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ಪದವಿ ಪರೀಕ್ಷೆಯಲ್ಲಿ ಅಪೂರ್ವ.ಜಿ (3ನೆಯ ರ್‍ಯಾಂಕ್), ಸಿವಿಲ್ ಇಂಜಿನಿಯರಿಂಗ್ ವಿಭಾಗದ ಎಂ.ಟೆಕ್ ಸ್ನಾತ್ತಕೊತ್ತರ ಪದವಿ ಪರೀಕ್ಷೆಯಲ್ಲಿ ಟ್ರಾನ್ಸಪೊರ್ಟೆಷನ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್ ವಿಷಯದಲ್ಲಿ ಬಿ.ಪಿ. ಚಿರಂಜೀವಿ (1ನೆಯ ರ್‍ಯಾಂಕ್) ಪಡೆದಿದ್ದಾರೆ.
ವಿಶ್ವವಿದ್ಯಾಲಯವು ಈ ಬಾರಿಯಿಂದ ನೂತನವಾಗಿ ಕೊಡಮಾಡುತ್ತಿರುವ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರ ಮಕ್ಕಳಿಗೆ ನೀಡುವ ಚಿನ್ನದ ಪದಕಕ್ಕೆ ವಿದ್ಯಾರ್ಥಿನಿ ಖುರಾತುಲ್ ಏನ್ ಭಾಜನರಾಗಿದ್ದಾರೆ.
ಎಂ.ಬಿ.ಎ ವಿಭಾಗದ ಸ್ನಾತ್ತಕೊತ್ತರ ಪದವಿ ಪರೀಕ್ಷೆಯಲ್ಲಿ ಆಶಿಕಾ.ಎ.ಜೈನ್ (೪ ನೆಯ ರ್‍ಯಾಂಕ್) ಪಡೆದಿದ್ದಾರೆ.
ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಶಿಕ್ಷಣ ಸಮಿತಿಯ ಎಲ್ಲಾ ಸದಸ್ಯರು ಹಾಗೂ ಕಾಲೇಜಿನ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ ಎಂದು ಪ್ರಾಂಶುಪಾಲರಾದ ಡಾ.ಪಿ. ಮಂಜುನಾಥ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post