ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಜಿಲ್ಲೆಯ ಗ್ರಾಮೀಣ ಉಪವಿಭಾಗ, ಅಬ್ಬಲಗೆರೆ ಶಾಖಾ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಅಬ್ಬಲಗೆರೆ, ಹುಣಸೋಡು, ಕಲ್ಲಗಂಗೂರು, ಚನ್ನಮುಂಬಾಪುರ, ಮತ್ತೋಡು, ರತ್ನಾಕರ ಲೇಔಟ್, ಬಸವನಗಂಗೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಏಪ್ರಿಲ್ 3 ಮತ್ತು 4ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಕರೆಂಟ್ ಇಲ್ಲ:
ಸ್ಮಾರ್ಟ್‌ಸಿಟಿ ಕಾಮಗಾರಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಸಾಗರ ರಸ್ತೆಯ ಆಯರ್ವೇದ ಮಹಾವಿದ್ಯಾಲಯ, ನರ್ಸ್ ಕ್ವಾಟ್ರಸ್, ಎಸ್‌ಬಿಐ ಬ್ಯಾಂಕ್, ಆಯನೂರು ಗೇಟ್, ಪಟೇಲ್ ಸಾಮಿಲ್, ಸತ್ಯಂ ಫೋರ್ ವಿಂಗ್ಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಏಪ್ರಿಲ್ 3ರ ಶನಿವಾರ ಮತ್ತು ಬೆಳಗ್ಗೆ 10 ಗಂಟೆಯಿಂದ ಸಂಜೆ 5ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಮಂಗಳೂರು ವಿದ್ಯುತ್ಛಕ್ತಿ ಸರಬರಾಜು ಕಂಪನಿಯು ಏಪ್ರಿಲ್ 3ರಂದು ಮೆಗ್ಗಾನ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಸಾಗರ ರಸ್ತೆಯ ಆಯುರ್ವೇದ ಮಹಾವಿದ್ಯಾಲಯ, ನರ್ಸ್ ಕ್ವಾಟ್ರಸ್, ಎಸ್.ಬಿ.ಐ., ಬ್ಯಾಂಕ್, ಆಯನೂರು ಗೇಟ್, ಪಟೇಲ್ ಸಾಮಿಲ್, ಸತ್ಯಂ ಫೋರ್ ವಿಂಗ್ಸ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಅಲ್ಲದೆ ಕುಂಸಿ ಉಪವಿಭಾಗದ ಶ್ರೀರಾಂಪುರ ಶಾಖಾ ವ್ಯಾಪ್ತಿಯಲ್ಲಿ ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಶ್ರೀರಾಂಪುರ ಮತ್ತು ಪೆಸಿಟ್ ಕಾಲೇಜು ಮಾರ್ಗಗಳಲ್ಲಿ ನಿರಂತರ ಜ್ಯೋತಿ ಕಾಮಗಾರಿ ಕೈಗೆತ್ತಿಕೊಂಡಿರುವ ಪ್ರಯುಕ್ತ ಸದರಿ ಮಾರ್ಗದಿಂದ ಸರರಾಜಾಗುವ ಗ್ರಾಮಗಳಾದ ಶ್ರೀರಾಂಪುರ, ಆಲದೇವರ ಹೊಸೂರು, ಗುಡ್ಡದಕೆರೆ, ತ್ಯಾವರೆಕೊಪ್ಪ, ವಿರುಪಿನಕೊಪ್ಪ, ಸಿದ್ಲಿಪುರ, ಮುದ್ದಿನಕೊಪ್ಪ, ಬೋವಿಕಾಲೋನಿ, ಹುಲಿ-ಸಿಂಹಧಾಮ, ವೀರಗಾರನಭೈರನಕೊಪ್ಪ, ವೀರಣ್ಣನಬೆನವಳ್ಳಿ, ಕೋಟೆಗಂಗೂರು ಆಶ್ರಯಬಡಾವಣೆ, ಪೆಸಿಟ್ ಕಾಲೇಜು, ಗಾಲ್ಫ್, ಭೂಮಿಕಾ ಇಂಡಸ್ಟ್ರೀಸ್, ಶಕ್ತಿಧಾಮ ಲೇಔಟ್, ಪೊಲೀಸ್ ಲೇಔಟ್ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಪ್ರದೇಶದ ವ್ಯಾಪ್ತಿಯಲ್ಲಿ ಏಪ್ರಿಲ್ 4ರಂದು ಬೆಳಿಗ್ಗೆ 10ರಿಂದ ಸಂಜೆ 6ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post