ಕಲ್ಪ ಮೀಡಿಯಾ ಹೌಸ್
ಚಿತ್ತದುರ್ಗ: ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ತಾಳ್ಯ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸಿಬಿ ಬಲೆಗಿ ಬಿದ್ದಿದ್ದಾರೆ.
ನೇರಳಕಟ್ಟೆ ಗ್ರಾಮದ ಮೂರ್ತಪ್ಪ ಎನ್ನುವವರ ಹತ್ತಿರ ಮನೆ ನಿವೇಶನ ಈ ಸ್ವತ್ತಿಗಾಗಿ 2000 ಸಾವಿರ ಲಂಚದ ಹಣದ ಬೇಡಿಕೆ ಇಟ್ಟಿದ್ದು ಮೂರ್ತಪ್ಪ ಎಸಿಬಿ ಠಾಣೆಗೆ ನೀಡಲಾಗಿದ್ದ ದೂರಿನ ಮೇರೆಗೆ ಅಧಿಕಾರಿಗಳು ಎಸ್ ಪಿ ಜಯಕುಮಾರ್ ಮಾರ್ಗದರ್ಶನದಲ್ಲಿ, ಡಿವೈಎಸ್ ಪಿ ಬಸವರಾಜ್ ಆರ್. ಮಗದುಮ್ ನೇತ್ರತ್ವದಲ್ಲಿ ಪಿಐಗಳಾದ ಡಿ.ಎಸ್. ಅಂಜನೇಯ, ಪ್ರವಿಣ್ ಕುಮಾರ್ ತಂಡ ತಾಳ್ಯ ಗ್ರಾಮಪಂಚಾಯಿತಿ ಕಚೇರಿಯಲ್ಲೆ ಮೂರ್ತಪ್ಪ ಇವರಿಂದ 2000 ಹಣ ಸ್ವೀಕರಿಸುವ ವೇಳೆ ದಾಳಿ ಮಾಡಿ ಎರಡು ಸಾವಿರ ಹಣ ವಶಪಡಿಸಿಕೊಂಡು ಪಿಡಿಓ ಸಂದೀಪ್ ಕುಮಾರನ್ನು ವಶಕ್ಕೆ ಪಡೆಯಲಾಗಿದೆ.
ಈ ದಾಳಿ ವೇಳೆ ಎಸಿಬಿ ಸಿಬ್ಬಂದಿಗಳಾದ ಮಾರುತಿರಾಮ್, ಯತಿರಾಜ್, ಫಕ್ರುದ್ದೀನ್, ಓಬಣ್ಣ, ಹರೀಶ್, ಫಯಾಜ್ ಶ್ರೀಪತಿ, ಪ್ರಭಾಕರ್, ಹಾಗು ಯೂನಸ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















