ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಮೈಸೂರು ವಿಶ್ವವಿದ್ಯಾಲಯ ನಡೆಸುವ ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ಏಪ್ರಿಲ್ 11ರ ಭಾನುವಾರ ನಗರದ ವಿವಿಧ ಕಾಲೇಜುಗಳಲ್ಲಿ ನಡೆಯಲಿದೆ ಎಂದು ಕುವೆಂಪು ವಿವಿ ಕೆ-ಸೆಟ್ ಪರೀಕ್ಷಾ ಸಂಯೋಜಕ ಡಾ. ರಾಜೇಶ್ವರ್ ತಿಳಿಸಿದ್ದಾರೆ.
ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಪರೀಕ್ಷೆ ತೆಗೆದುಕೊಂಡ ವಿದ್ಯಾರ್ಥಿಗಳಿಗಾಗಿ ಮೂರು ಕ್ಲಸ್ಟರ್‌ಗಳಡಿ ಒಟ್ಟು ಹತ್ತು ಕಾಲೇಜುಗಳಲ್ಲಿ ಪರೀಕ್ಷೆ ನಡೆಯಲಿದೆ. ಸಹ್ಯಾದ್ರಿ ಕಲಾ, ವಿಜ್ಞಾನ ಮತ್ತು ಸಹ್ಯಾದ್ರಿ ವಾಣಿಜ್ಯ ಕಾಲೇಜು ಮೊದಲ ಕ್ಲಸ್ಟರ್‌ನಲ್ಲಿದ್ದರೆ, ಡಿವಿಎಸ್ ಕಲೆ ಮತ್ತು ವಿಜ್ಞಾನ ಹಾಗೂ ಸ್ವತಂತ್ರ ಪದವಿ ಪೂರ್ವ ಕಾಲೇಜು ಮತ್ತು ಡಿವಿಎಸ್ ಸಂಯುಕ್ತ ಪಿಯು ಕಾಲೇಜು ಎರಡನೆಯ ಕ್ಲಸ್ಟರ್‌ನಲ್ಲಿದೆ. ಇನ್ನು ಎಸ್‌ಆರ್‌ಎನ್‌ಎಂಎನ್ ಅನ್ವಯಿಕ ವಿಜ್ಞಾನ ಕಾಲೇಜು, ಎಟಿಎನ್‌ಸಿಸಿ ಕಾಲೇಜು, ಸಿಬಿಆರ್ ನ್ಯಾಷನಲ್ ಕಾನೂನು ಕಾಲೇಜು ಮತ್ತು ಎಚ್‌ಎಸ್‌ಆರ್ ನ್ಯಾಷನಲ್ ಪಿಯು ಕಾಲೇಜುಗಳನ್ನು ಮೂರನೆಯ ಕ್ಲಸ್ಟರ್‌ಗಳಾಗಿ ವಿಂಗಡಿಸಲಾಗಿದೆ ಎಂದು ಹೇಳಿದ್ದಾರೆ.
ಪರೀಕ್ಷೆಯ ಮೊದಲ ಪೇಪರ್ ಬೆಳಿಗ್ಗೆ 9:30ರಿಂದ 10:30ರವರೆಗೆ ನಡೆಯಲಿದ್ದು, ಮೂವತ್ತು ನಿಮಿಷದ ಬಿಡುವಿನ ಬಳಿಕ ಎರಡನೆಯ ಪೇಪರ್ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ. ಪರೀಕ್ಷಾರ್ಥಿಗಳು ತಮ್ಮ ಗುರುತಿನ ಚೀಟಿ ಮತ್ತು ಪ್ರವೇಶಾತಿ ಚೀಟಿಯೊಂದಿಗೆ ಬೆಳಿಗ್ಗೆ 8:30ಕ್ಕೆ ನಿಗದಿತ ಪರೀಕ್ಷಾ ಕೇಂದ್ರಗಳಲ್ಲಿ ವರದಿ ಮಾಡಿಕೊಳ್ಳಬೇಕು. ಕೋವಿಡ್ ಮಾರ್ಗಸೂಚಿ ಅನ್ವಯವಾಗುವ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿರುತ್ತದೆ ಡಾ. ರಾಜೇಶ್ವರ್ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post